ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈಟ್ ಫೀಲ್ಡ್ ಮೆಟ್ರೋ ಮಾರ್ಗ ವಿನ್ಯಾಸ ಬದಲಾವಣೆ ಸಾಧ್ಯತೆ

|
Google Oneindia Kannada News

Recommended Video

ವೈಟ್ ಫೀಲ್ಡ್ ಮೆಟ್ರೋ ಮಾರ್ಗ ವಿನ್ಯಾಸ ಬದಲಾಗುವ ಸಾಧ್ಯತೆ ಇದೆ | Oneindia Kannada

ಬೆಂಗಳೂರು, ಡಿಸೆಂಬರ್ 19 : ನಗರದ ವೈಟ್ ಫೀಲ್ಡ್ ಗೆ ಮೆಟ್ರೋ ಸಂಪರ್ಕ ಕಲ್ಪಿಸುತ್ತಿರುವ ಬಿಎಂಆರ್ಸಿಎಲ್ , ಅರಣ್ಯ ಇಲಾಖೆ ಹಾಗೂ ರೈಲ್ವೆ ಇಲಾಖೆಯಿಂದ ಭೂಮಿ ಪಡೆಯುವ ವಿಚಾರದಲ್ಲಿ ಗೊಂದಲ ಎದುರಿಸುತ್ತಿದೆ.

ನಮ್ಮ ಮೆಟ್ರೋದಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಹಾಕಿನಮ್ಮ ಮೆಟ್ರೋದಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಹಾಕಿ

ಈಗಾಗಲೇ ನಗರದ ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಸಂದರ್ಭದಲ್ಲಿ ಬಿಎಂಆರ್ಸಿಎಲ್ ಗೆ ಸಾಕಷ್ಟು ಸಂಕಷ್ಟಗಳು ಎದುರಾದವು. ಕೆಆರ್. ಮಾರುಕಟ್ಟೆ ಬಳಿ ಕಟ್ಟಗಳಲ್ಲಿ ಬಿರುಕು, ಮೆಟ್ರೋ ಸುರಂಗ ಮಾರ್ಗ ಕೊರೆಯುವ ಯಂತ್ರ ಸಿಕ್ಕಿಹಾಕಿಕೊಂಡಿದ್ದು, ಕೆಂಪೇಗೌಡ ರಸ್ತೆಯಲ್ಲಿ ಮೆಟ್ರೋ ಸುರಂಗ ಮಾರ್ಗ ಕುಸಿದಿದ್ದು ಹೀಗೆ ಹಲವಾರು ಸಮಸ್ಯೆಗಳು ಎದುರಾಗಿದೆ.

ಬೆಂಗಳೂರು ಏರ್ ಪೋರ್ಟ್ ಗೆ ಮೆಟ್ರೋ: ಸಚಿವ ಸಂಪುಟ ಅಸ್ತುಬೆಂಗಳೂರು ಏರ್ ಪೋರ್ಟ್ ಗೆ ಮೆಟ್ರೋ: ಸಚಿವ ಸಂಪುಟ ಅಸ್ತು

ಇದೀಗ ಸ್ಥಳದ ಸಮಸ್ಯೆಯೂ ಕೂಡ ಇದರೊಂದಿಗೆ ಸೇರಿಕೊಂಡಿದೆ. ಬೈಯ್ಯಪ್ಪನಹಳ್ಳಿ -ವೈಟ್ ಫೀಲ್ಡ್ ಮೆಟ್ರೊ,15.25 ಕಿ.ಮೀ ಉದ್ದದ ಮಾರ್ಗ, 78 ಎಕರೆ ಮೆಟ್ರೋ ನಿಲ್ದಾಣ, ಡಿಪೋ ಮಾರ್ಗಕ್ಕೆ ಇಷ್ಟು ಭೂಮಿ ಅಗತ್ಯವಿದೆ.

ಮೆಟ್ರೋ ಕಾಮಗಾರಿಗೆ 78 ಎಕರೆ ಸ್ವಾಧೀನ

ಮೆಟ್ರೋ ಕಾಮಗಾರಿಗೆ 78 ಎಕರೆ ಸ್ವಾಧೀನ

ಬೈಯ್ಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ಗೆ 15.25 ಕಿ.ಮೀ.ಉದ್ದದ ಮೆಟ್ರೋ ಮಾರ್ಗ ನಿರ್ಮಿಸುತ್ತಿರುವ ಬಿಎಂಆರ್ಸಿಎಲ್, 78 ಎಕರೆಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದೆ. ಅದರಲ್ಲಿ 45 ಎಕರೆ ಅರಣ್ಯ ಇಲಾಖೆಗೆ ಸೇರಿದೆ. ಆದರೆ ಈ ಎರಡು ಇಲಾಖೆಗಳ ಜಾಗ ದೊರೆಯುವ ಬಗ್ಗೆ ದೃಢತೆಯಿಲ್ಲ. ಖಾಸಗಿಗಿಂತ ಸರ್ಕಾರಿ ಭೂಮಿ ಪಡೆಯುವುದು ಬಹಳ ಸುಲಭ ಎಂದು ಈ ಹಿಂದೆ ಬಿಎಂಆರ್ಸಿಎಲ್ ಎಂಡಿ ಪ್ರದೀಪ್ ಸಿಂಗ್ ಖರೋಲ ಹೇಳಿದ್ದರು.

ಭೂಮಿ ಪಡೆಯುವಲ್ಲಿ ಗೊಂದಲ

ಭೂಮಿ ಪಡೆಯುವಲ್ಲಿ ಗೊಂದಲ

ಆದರೆ ಈಗ ಸರ್ಕಾರಿ ಇಲಾಖೆಗಳ ಭೂಮಿ ಪಡೆಯುವ ಬಗ್ಗೆಯೇ ಬಿಎಂಆರ್ ಸೆಇಲ್ ಗೆ ಗೊಂದಲವಿದೆ. ಈ ಭಾಗದಲ್ಲಿ ಪಿಲ್ಲರ್ ಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದ್ದು, ಈ ವೇಳೆಯಲ್ಲಿ ಭೂಸ್ವಾಧೀನ ಸಮಸ್ಯೆ ಎದುರಾಗಿದೆ. ಬೈಯ್ಯಪ್ಪನಹಳ್ಳಿ ಯಿಂದ ನಿರ್ಮಿಸಬೇಕಿರುವ ಮೆಟ್ರೊ ಮಾರ್ಗವು ರೈಲು ಹಳಿಗೆ ಸುಮಾರು 25 ಮೀಟರ್ ದೂರದಲ್ಲಿ ಸಾಗಬೇಕಿದೆ. ಇಲ್ಲಿಂದ ಟಿನ್ ಫ್ಯಾಕ್ಟರಿವರೆಗೆ ಮಾರ್ಗವು ಸಾಗಲಿದೆ.

ರೈಲ್ವೆ ಇಲಾಖೆ ಭೂಮಿ ನೀಡುವುದನ್ನು ತಿರಸ್ಕರಿಸಿಲ್ಲ, ಒಪ್ಪಿಕೊಂಡಿಲ್ಲ

ರೈಲ್ವೆ ಇಲಾಖೆ ಭೂಮಿ ನೀಡುವುದನ್ನು ತಿರಸ್ಕರಿಸಿಲ್ಲ, ಒಪ್ಪಿಕೊಂಡಿಲ್ಲ

ಈ ಭಾಗದಲ್ಲಿ ಸುಮಾರು ಒಂದು ಎಕರೆ ಜಾಗವನ್ನು ರೂಲ್ವೆ ಇಲಾಖೆಯಿಂದ ಪಡೆಯಬೇಕಿದೆ. ಆದರೆ ಈ ಭೂಮಿಯನ್ನು ರೈಲ್ವೆ ಇಲಾಖೆ ನೀಡಲಿದೆಯೇ ಎಂಬ ಬಗ್ಗೆ ಬಿಎಂಆರ್ಸಿಎಲ್ ಗೆ ಖಾತರಿ ಇಲ್ಲ. ರೈಲ್ವೆ ಅಧಿಕಾರಿಗಳ ಭೂಮಿ ನೀಡುವುದಿಲ್ಲ ಎಂದು ಹೇಳಿಲ್ಲ. ನೀಡುತ್ತೇವೆ ಎಂದೂ ಕೂಡ ಹೇಳಿಲ್ಲ.
ಆದರೆ ಮೆಟ್ರೊ ಮಾರ್ಗ ನಿರ್ಮಾನವಾಗಲಿರುವ ಜಾಗದಲ್ಲಿ ರೈಲು ಹಳಿ ಯೋಜನೆಯೊಂದನ್ನು ರೂಪಿಸಲಾಗಿದೆ. ಜನರಿಗೆ ಅನುಕೂಲವಾಗಲು ಹಳಿ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಎಂದು ಬಿಎಂಆಟರ್ ಸಿಎಲ್ ಅಧಿಕಾರಿಗಳು ಹೇಳುತ್ತಾರೆ. ಒಂದು ವೇಳೆ ರೈಲ್ವೆ ಇಲಾಖೆಯು ಇದೇ ಭಾಗದಲ್ಲಿ ಹಳಿ ಅಳವಡಿಸುವ ಯೋಜನೆ ಕೈಬಿಡುವುದಿಲ್ಲವಾದರೆ ಮೆಟ್ರೊ ಮಾರ್ಗದ ವಿನ್ಯಾಸ ಬದಲಿಸಬೇಕಾಗುತ್ತದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳಗೆ ಆತಂಕವಿದೆ.

ಅರಣ್ಯ ಭೂಮಿ ಪಡೆಯಲು ಅರ್ಜಿ ಸಲ್ಲಿಕೆಯಾಗಿದೆ:

ಅರಣ್ಯ ಭೂಮಿ ಪಡೆಯಲು ಅರ್ಜಿ ಸಲ್ಲಿಕೆಯಾಗಿದೆ:

ಅರಣ್ಯ ಭೂಮಿ: ಕಾಡುಗೋಡಿ, ಉಜ್ವಯ ವಿದ್ಯಾಲಯ ಹಾಗೂ ವೈಟ್ ಫೀಲ್ಡ್ ನಲ್ಲಿ ಅರಣ್ಯ ಇಲಾಖೆಯ ಜಾಗದಲ್ಲಿ ಮೆಟ್ರೊ ಮಾರ್ಗ, ಡಿಪೊ ಹಾಗೂ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಉಳಿದ ಜಾಗದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ತೀರ್ಮಾನಿಸಲಾಗಿದೆ. ನಿಯಮ ಪ್ರಕಾರ ಈ ಭೂಮಿಯನ್ನು ಪಡೆಯಲು ಆಗಸ್ಟ್ ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಲಾಗಿದೆ.

ಅರ್ಜಿ ಪರಿಶೀಲನೆ ನಡೆದು ಪ್ರತಿಕ್ರಿಯೆ ಬರಲು ಕೆಲ ತಿಂಗಳ ಸಮಯ ಹಿಡಿಯುತ್ತದೆ. ಸಾಮಾನ್ಯವಾಗಿ ಅರಣ್ಯ ಇಲಾಖೆಯಿಂದ ಭೂಮಿ ಪಡೆಯಲು ಹಲವಾರು ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ. ಅರಣ್ಯ ಇಲಾಖೆಯು ಯಾವುದೇ ಅಭಿವೃದ್ಧಿ ಚಟುವಟಿಕೆಗಳಿಗೆ ಭೂಮಿ ನೀಡಬೇಕೆಂದರೆ ಕೇಂದ್ರ ಪರಿಸರ ಇಲಾಖೆಯಿಂದಲೂ ಅನುಮತಿ ಪಡೆಯಬೇಕಾಗುತ್ತದೆ. ಹೀಗಾಗಿ ಅರಣ್ಯ ಜಾಗ ಪಡೆಯುವ ಪ್ರಕ್ರಿಯೆ ತಡವಾಗುವುದು ಖಚಿತ. ಬೈಯ್ಯಪ್ಪನಹಳ್ಳಿ -ವೈಟ್ ಫೀಲ್ಡ್ ಮಾರ್ಗದಲ್ಲಿ ರಸ್ತೆ ಅಗಲೀಕರಣ, ಪಿಲ್ಲರ್ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ.

English summary
Land aquisition trouble in Whitefield metro project: As forest department holds 45 ecres of land near whitefield, the BMRCL has facing tough to aquire landfor the Whitefield metro project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X