ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಗೇರಿ ರಸ್ತೆಯಲ್ಲಿ 2020ಕ್ಕೆ ಮೆಟ್ರೋ ಸಂಚಾರ, ಅಧಿಕಾರಿಗಳು ಏನು ಹೇಳ್ತಾರೆ?

|
Google Oneindia Kannada News

ಬೆಂಗಳೂರು, ಮೇ 17: ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗ ಆರಂಭದಲ್ಲಿ ಅತಿ ವೇಗವಾಗಿ ಸಾಗಿತ್ತು. ಪಿಲ್ಲರ್ ನಿರ್ಮಾಣವಾಗುವವರೆಗೂ ವೇಗವಾಗಿಯೇ ಇತ್ತು ಅಲ್ಲಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ.

2020ರೊಳಗಾಗಿ ಕಾಮಗಾರಿ ಮುಕ್ತಾಯವಾಗುತ್ತದೆ ಎಂದು ಬಿಎಂಆರ್‌ಸಿಎಲ್ ಭರವಸೆ ನೀಡಿದ್ದರೂ ಕೂಡ ಹಲವು ತೊಡಕುಗಳು ಬಂದಿದ್ದು, 2020ಕ್ಕೆ ಕಾಮಗಾರಿ ಅಂತಿಮಗೊಳ್ಳುವುದು ಅನುಮಾನವಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕೊನೆಯಲ್ಲಿರುವ ಚಲ್ಲಘಟ್ಟ ಡಿಪೋ ಹಾಗೂ ನಿಲ್ದಾಣ ನಿರ್ಮಾಣಕ್ಕೆ ಬೇಕಿರುವ 18.09 ಎಕರೆ ಭೂಮಿ ಇನ್ನೂ ಬಿಡಿಎಯಿಂದ ಬಿಎಂಆರ್‌ಸಿಎಲ್‌ಗೆ ಹಸ್ತಾಂತರವಾಗಿಲ್ಲ. ಮೈಸೂರು ರಸ್ತೆ ಕಾಮಗಾರಿಗೆ ಪ್ಯಾಕೇಜ್ ಒಂದರಲ್ಲಿ ಮೈಸೂರು ರಸ್ತೆ-ಪಟ್ಟಣಗೆರೆ ಮಾರ್ಗ ಪ್ರಗತಿ ಶೇ.85, ವೆಚ್ಚ-327 ಕೋಟಿ ರೂವಾಗಿದೆ. ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಪಟ್ಟಣೆಗೆರೆ ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿವೆ.

ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್ ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್

ಪ್ಯಾಕೇಜ್ ಎರಡರಲ್ಲಿ ಪಟ್ಟಣಗೆರೆ-ಕೆಂಗೇರಿ ಪ್ರಗತಿ ಶೇ.73ರಷ್ಟಿದೆ. 332 ಕೋಟಿ ವೆಚ್ಚಮಾಡಲಾಗುತ್ತಿದೆ. ಮೈಲಸಂದ್ರ, ಕೆಂಗೇರಿ ನಿಲ್ದಾಣಗಳು ಬರಲಿವೆ.

ಪರ್ಯಾಯ ಡಿಪೋ ನಿರ್ಮಾಣ

ಪರ್ಯಾಯ ಡಿಪೋ ನಿರ್ಮಾಣ

ಮೈಸೂರು ರಸ್ತೆ-ಕೆಂಗೇರಿ ಮಾರ್ಗವನ್ನು 2019ರ ಅಂತ್ಯಕ್ಕೆ ಸಂಚಾರ ಮುಕ್ತಗೊಳಿಸುವ ಗುರಿ ಇತ್ತು. ಭೂಸ್ವಾಧೀನ ಪ್ರಕ್ರಿಯೆ ತಡವಾಗಿದ್ದರಿಂದ ಹಾಗೂ ಗುತ್ತಿಗೆ ಪಡೆದ ಕಂಪನಿ ಆರ್ಥಿಕ ನಷ್ಟಕ್ಕೊಳಗಾಗಿ ಅನೇಕ ಉದ್ಯೋಗಿಗಳು ಕೆಲಸ ತೊರೆದಿದ್ದರಿಂದ ಕಾಮಗಾರಿ ತಡವಾಯಿತು.ಮೈಸೂರುರಸ್ತೆ-ಕೆಂಗೇರಿ ಮಾರ್ಗದಲ್ಲಿ ಕಾರ್ಯಾಚರಿಸುವ ರೈಲುಗಳನ್ನು ಇದೇ ಡಿಪೋದಲ್ಲಿ ನಿರ್ವಹಣೆ ಮಾಡಲು ಸಾಧ್ಯವಿದೆ. ಆದರೆ ಒಂದೇ ಡೊಪೋದಲ್ಲಿ ಹೆಚ್ಚು ರೈಲುಗಳ ನಿರ್ವಹಣೆ ಸವಾಲಾಗಿದೆ. ಒಂದನೇ ಹಂತದ ಯೋಜನೆಯ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದ ರೈಲುಗಳನ್ನು ಬೈಯಪ್ಪನಹಳ್ಳಿ ಡಿಪೋದಲ್ಲಿ ನಿರ್ವಹಣೆ ಮಾಡಲಾಗುತ್ತದೆ.

ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡ ಅನುಮಾನಾಸ್ಪದ ವ್ಯಕ್ತಿ ಪತ್ತೆ ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡ ಅನುಮಾನಾಸ್ಪದ ವ್ಯಕ್ತಿ ಪತ್ತೆ

ಚಲ್ಲಘಟ್ಟ ಡಿಪೋ ಹಾಗೂ ನಿಲ್ದಾಣಗಳು

ಚಲ್ಲಘಟ್ಟ ಡಿಪೋ ಹಾಗೂ ನಿಲ್ದಾಣಗಳು

ಭೂಸ್ವಾಧೀನ ಆಗಬೇಕಿರುವುದು 18.09 ಎಕರೆ, ಪರಿಹಾರ ಮೊತ್ತ 535 ಕೋಟಿ ರೂ, ನಿರ್ಮಾಣ ವೆಚ್ಚ 140ಕೋಟಿ ರೂನಷ್ಟು ತಗುಲಲಿದೆ.

2020ರ ಆಗಸ್ಟ್ನಲ್ಲಿ ರೈಲು ಕಾರ್ಯಾಚರಣೆ

2020ರ ಆಗಸ್ಟ್ನಲ್ಲಿ ರೈಲು ಕಾರ್ಯಾಚರಣೆ

ಕನಕಪುರ ಮೆಟ್ರೋ ಮಾರ್ಗದಲ್ಲಿ 2020ರ ಆಗಸ್ಟ್‌ನಲ್ಲಿ ರೈಲು ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಈ ಮಾರ್ಗದಲ್ಲೂ ಹಳಿ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದ್ದು, ಮಾರ್ಗದ ಭೂಸ್ವಾಧೀನ ಪೂರ್ಣಗೊಂಡಿದೆ. ಕಾಮಗಾರಿ ಶೇ.80ರಷ್ಟು ಮುಗಿದಿದೆ.

ಎಲ್ಲೆಲ್ಲಿ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ?

ಎಲ್ಲೆಲ್ಲಿ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ?

-ಎಚ್‌ಎಸ್‌ಆರ್ ಲೇಔಟ್-ಆರ್‌ವಿ ರಸ್ತೆ-ಶೇ. 16
-ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌, ಬೈಯಪ್ಪನಹಳ್ಳಿ-ಮಹದೇವಪುರ-ಶೇ.32
-ಮಹದೇವಪುರ-ವೈಟ್‌ಫೀಲ್ಡ್‌-ಶೇ.40
-ಆರ್‌ವಿ ರಸ್ತೆ- ಬೊಮ್ಮಸಂದ್ರ, ಬೊಮ್ಮಸಂದ್ರ-ಹೊರ ರಸ್ತೆ ಶೇ.39
-ಹೊಸ ರಸ್ತೆ-ಎಚ್‌ಎಸ್‌ಆರ್‌ ಲೇಔಟ್‌- ಶೇ.37
-ಗೊಟ್ಟಿಗೆರೆ-ನಾಗವಾರ, ಗೊಟ್ಟಿಗೆರೆ ಸ್ವಾಗತ್ ಕ್ರಾಸ್ ಶೇ.13 ರಷ್ಟು ಕಾಮಗಾರಿಯಾಗಿದೆ.

English summary
BDA didnot transfer the 18 acre land to BMRCL. This leads to delaying mysuru road metro work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X