ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆರೆಗಳ ಕೊಳೆ ತೊಳೆಯಲು ಬರಲಿವೆ ಆಮ್ಲಜನಕ ಹೆಚ್ಚಿಸುವ ಯಂತ್ರ

|
Google Oneindia Kannada News

ಬೆಂಗಳೂರು, ಮಾರ್ಚ್ 15: ನಗರದಲ್ಲಿರುವ ಎಲ್ಲಾ ಕೆರೆಗಳು ಸಾಕಷ್ಟು ಕಲುಷಿತಗೊಂಡಿದೆ, ನೀರಿನಲ್ಲಿರುವ ಜಲಚರಗಳು ಉಸಿರುಗಟ್ಟಿ ಸಾಯುತ್ತಿವೆ.ಇದಕ್ಕೆ ಉಪಾಯ ಕಂಡುಹಿಡಿದಿರುವ ತೋಟಗಾರಿಕೆ ಇಲಾಖೆಯು ಲಾಲ್ ಬಾಗ್ ನಲ್ಲಿರುವ ಕೆರೆಯನ್ನು ರಕ್ಷಿಸಲು ಮುಂದಾಗಿದೆ.

ಕಲುಷಿತಗೊಂಡಿರುವ ಲಾಲ್ ಬಾಗ್ ದೊಡ್ಡ ಕೆರೆಗೆ ಇದೇ ಮೊದಲ ಬಾರಿಗೆ ಎಂಟು ಏರಿಯೇಟರ್( ಕೆರೆಯಲ್ಲಿ ಆಮ್ಲಜನಕ ಹೆಚ್ಚಿಸುವ ಯಂತ್ರ) ಗಳನ್ನು ಅಳವಡಿಸಿ ನೀಡು ಶುದ್ಧೀಕರಣಗೊಳಿಸಲು ತೀರ್ಮಾನಿಸಲಾಗಿದೆ.

ಮತ್ತೆ ಬೆಂಕಿ ಉಗುಳುತ್ತಿದೆ ಬೆಳ್ಳಂದೂರು ಕೆರೆ, ಆತಂಕದಲ್ಲಿ ಜನಮತ್ತೆ ಬೆಂಕಿ ಉಗುಳುತ್ತಿದೆ ಬೆಳ್ಳಂದೂರು ಕೆರೆ, ಆತಂಕದಲ್ಲಿ ಜನ

ಮಲಿನಗೊಂಡು ಪಾಚಿಗಟ್ಟಿರುವ ಕೆರೆ ನೀರಿನಲ್ಲಿ ಆಮ್ಲಜನಕ ಕೊರತೆ ಇದೆ. ಇದರಿಂದ ಕೆಲವು ತಿಂಗಳ ಹಿಂದಷ್ಟೇ ಕೆರೆಯಲ್ಲಿ ಮೀನುಗಳು ಸತ್ತಿದ್ದವು. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳ ಬೇಡಿಕೆ ನಂತರ ಕೆರೆ ನೀರು ಶುದ್ಧೀಕರಣ ಗೊಳಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

Lalbagh lake will get Ariators to preserve fish

ಪರಿಸರವಾದಿ ಡಾ. ಎ.ಎನ್. ಯಲ್ಲಪ್ಪರೆಡ್ಡಿ ಹಾಗೂ ವಾಯುವಿಹಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಏರಿಯೇಟರ್ ಗಳನ್ನು ಅಳವಡಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಏರಿಯೇಟರ್ಸ್ ಗಳನ್ನು ಅಳವಡಿಕೆಗೆ ತಗುಲುವ ವೆಚ್ಚವನ್ನು ನಿಭಾಯಿಸುವ ಜತೆಗೆ, ಮೂರು ವರ್ಷಗಳ ಕಾಲ ನಿರ್ವಹಣೆ ಮಾಡಲು ಬಾಷ್ ಕಂಪನಿ ಮುಂದೆ ಬಂದಿದೆ. ಇದಕ್ಕೆ ಸರ್ಕಾರವೂ ಒಪ್ಪಿಗೆ ನೀಡಿದೆ. ಈ ತಿಂಗಳಾಂತ್ಯದಲ್ಲಿ ಎಂಟು ಏರಿಯೇಟರ್ ಗಳು ಲಾಲ್ ಬಾಗ್ ಕೆರೆಯಲ್ಲಿ ಚಿಮ್ಮಲಿವೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಏರಿಯೇಟರ್ ಎಂದರೆ ಏನು: ಗಾಳಿಯಲ್ಲಿ ಸಾಮಾನ್ಯವಾಗಿ ಕನಿಷ್ಠ 21ರಷ್ಟು ಪ್ರಾಣವಾಯು ವಿರುತ್ತದೆ. ಆದರೆ ನೀರಿನಲ್ಲಿ ಕನಿಷ್ಠ ಶೇ.4-5ರಷ್ಟಿರಬೇಕು. ಅದು ಶೇ.4ಕ್ಕಿಂತ ಕಡಿಮೆಯಾದರೆ ಅಲ್ಲಿನ ಬ್ಯಾಕ್ಟೀರಿಯಾಗಳು ಬದುಕುಳಿಯುವುದಿಲ್ಲ. ಬ್ಯಾಕ್ಟೀರಿಯಾಗಳು ಸತ್ತರೆ ನೀರಿನಲ್ಲಿ ಪ್ರಾಣವಾಯು ಪ್ರಮಾಣ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

ಆಗ ಕೆರೆಯೊಳಗೆ ಜೀವಿಸುವ ಇತರೆ ಜಲಚರಗಳು ಕೂಡ ಸಾವನ್ನಪ್ಪುತ್ತವೆ. ಹೀಗಾಗಿ ಕೆರೆಯೊಳಗೆ ಏರೆಯೇಟರ್ ಗಳನ್ನು ಅಳವಡಿಸುವುದರಿಂದ ನೀರು ಕಾರಂಜಿಗಳ ರೀತಿಯಲ್ಲಿ ಮೇಲಿಂಗ ಕೆಳಗೆ ರಭಸವಾಗಿ ಬಿದ್ದಾಗ ಪರಸ್ಪರ ಅಲೆಗಳ ಮೂಲಕ ಆಮ್ಲಜನಕ ಉತ್ಪತ್ತಿಯಾಗುತ್ತದೆ ಎಂದು ಪರಿಸರ ವಾದಿ ಹಾಗೂ ಉದ್ಯಾನಗಳ ಸಲಹಾ ಸಮಿತಿ ಅಧ್ಯಕ್ಷ ಡಾ. ಎ.ಎನ್. ಯಲ್ಲಪ್ಪರೆಡ್ಡಿ ತಿಳಿಸಿದ್ದಾರೆ.

English summary
Department of Horticulture in collaboration with BOSCH company, installing Ariators in Lalbagh lake to purify the eater and to preserve the lake. The installation work will be completed in April first week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X