• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ವಾತಂತ್ರೋತ್ಸವ; ಲಾಲ್ ಬಾಗ್ ಫ್ಲವರ್ ಶೋ ರದ್ದು

|

ಬೆಂಗಳೂರು, ಜುಲೈ 06 : ಬೆಂಗಳೂರಿನ ಲಾಲ್ ಬಾಗ್‌ನಲ್ಲಿ ಆಯೋಜನೆ ಮಾಡಲಾಗುತ್ತಿದ್ದ ಸ್ವಾತಂತ್ರೋತ್ಸವ ಫ್ಲವರ್ ಶೋ ಈ ಬಾರಿ ರದ್ದಾಗಿದೆ. ಲಾಲ್ ಬಾಗ್ ಫ್ಲವರ್ ಶೋಗೆ ಲಕ್ಷಾಂತರ ಜನರು ಆಗಮಿಸುತ್ತಿದ್ದರು. ಈ ಬಾರಿ ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ.

   Virat Kohli Conflict Of Interest Trouble | Oneindia Kannada

   ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ತೋಟಗಾರಿಕಾ ಸಂಘದ ಸಹಯೋಗದಲ್ಲಿ ಪ್ರತಿ ವರ್ಷ ಲಾಲ್ ಬಾಗ್‌ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗುತ್ತಿತ್ತು. ಆಗಸ್ಟ್ 9ರಿಂದ ಈ ಬಾರಿಯ ಫ್ಲವರ್ ಶೋ ಆಯೋಜಿಸಲು ದಿನಾಂಕ ನಿಗದಿಯಾಗಿತ್ತು.

   ಮುಂಬೈನ ಪ್ರಸಿದ್ಧ ಲಾಲ್ ಬಗೂಚ ರಾಜ ಗಣೇಶೋತ್ಸವ ರದ್ದು

   ಲಾಲ್ ಬಾಗ್‌ನಲ್ಲಿ ನಡೆಯಬೇಕಿದ್ದ 212ನೇ ಫ್ಲವರ್ ಶೋ ರದ್ದುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮೈಸೂರು ತೋಟಗಾರಿಕಾ ಸಂಘ ಹೇಳಿದೆ. ಗಣರಾಜ್ಯೋತ್ಸವ ಮತ್ತು ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ನಡೆಯುವ ಫ್ಲವರ್ ಶೋ ಲಕ್ಷಾಂತರ ಜನರನ್ನು ಸೆಳೆಯುತ್ತಿತ್ತು.

   ಕಲಬುರಗಿ; ಖಾಜಾ ಬಂದಾ ನವಾಜ್ ದರ್ಗಾದ ಉರುಸ್ ರದ್ದು

   ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನ ವೈರಸ್ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ಕೇಂದ್ರ ಗೃಹ ಇಲಾಖೆ ಹೆಚ್ಚು ಜನರು ಸೇರುವ ಯಾವುದೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಇನ್ನೂ ಅನುಮತಿ ನೀಡಿಲ್ಲ. ಆದ್ದರಿಂದ, ಫ್ಲವರ್ ಶೋ ರದ್ದಾಗಿದೆ.

   ವಿಡಿಯೋ: ಬೆಂಗಳೂರಿನಲ್ಲಿ ಲಾಲ್ ಬಾಗ್ ಪ್ರವೇಶಕ್ಕೆ ಸಾಲುಗಟ್ಟಿದ ಜನ!

   ಫ್ಲವರ್ ಶೋ ರದ್ದು

   ಫ್ಲವರ್ ಶೋ ರದ್ದು

   "ಕೋವಿಡ್ - 19 ಭೀತಿ ಹಿನ್ನಲೆಯಲ್ಲಿ ಈ ಬಾರಿಯ ಫ್ಲವರ್ ಶೋ ರದ್ದುಗೊಳಿಸಲಾಗಿದೆ. ಮೈಸೂರು ತೋಟಗಾರಿಕಾ ಸಂಘದ ಜೊತೆ ಈ ಕುರಿತು ನಾವು ಸಭೆ ನಡೆಸಲಿದ್ದೇವೆ. ಸಂಘದ ಹಲವು ಸದಸ್ಯರು ಹಿರಿಯ ನಾಗರಿಕರು. ಕೊರೊನಾ ಭೀತಿಯಿಂದ ಅವರು ಸಭೆಗೆ ಹಾಜರಾಗುತ್ತಿಲ್ಲ. ಆದ್ದರಿಂದ, ಸಭೆ ನಡೆಸುವುದು ತಡವಾಗುತ್ತಿದೆ" ಎಂದು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್ ಹೇಳಿದ್ದಾರೆ.

   50 ರಿಂದ 60 ಸಾವಿರ ಜನರ ಭೇಟಿ

   50 ರಿಂದ 60 ಸಾವಿರ ಜನರ ಭೇಟಿ

   ಲಾಲ್ ಬಾಗ್ ಫ್ಲವರ್ ಶೋಗೆ ಪ್ರತಿದಿನ ಸುಮಾರು 50 ರಿಂದ 60 ಸಾವಿರ ಜನರು ಆಗಮಿಸುತ್ತಾರೆ. ರಜೆ ದಿನಗಳಲ್ಲಿ ಈ ಸಂಖ್ಯೆ ಇನ್ನು ಹೆಚ್ಚಾಗುತ್ತದೆ. ಆದ್ದರಿಂದ, ಕೋವಿಡ್ - 19 ಪರಿಸ್ಥಿತಿ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗಿದೆ. ಹಾಗಾಗಿ ಫ್ಲವರ್ ಶೋ ಈ ಬಾರಿ ರದ್ದುಗೊಳಿಸಲಾಗಿದೆ.

   2ನೇ ಬಾರಿ ರದ್ದಾಗಿದೆ

   2ನೇ ಬಾರಿ ರದ್ದಾಗಿದೆ

   1912ರಿಂದ ಫ್ಲವರ್ ಶೋ ಆಯೋಜನೆ ಮಾಡಲಾಗುತ್ತಿದೆ. ಇದು 2ನೇ ಬಾರಿಗೆ ಶೋ ರದ್ದುಗೊಳಿಸಲಾಗಿದೆ. 1942ರಲ್ಲಿ 2ನೇ ಮಹಾಯುದ್ಧದ ಸಂದರ್ಭದಲ್ಲಿ ಫ್ಲವರ್ ಶೋ ಆಯೋಜನೆ ಮಾಡಿರಲಿಲ್ಲ. ವರನಟ ಡಾ. ರಾಜ್ ಕುಮಾರ್ ಅಪಹರಣವಾದಾಗ ಯಾವುದೇ ಶುಲ್ಕ ಪಡೆಯದೇ ಜನರು ಫ್ಲವರ್ ಶೋ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿತ್ತು.

   ಎರಡು ಬಾರಿ ಫ್ಲವರ್ ಶೋ

   ಎರಡು ಬಾರಿ ಫ್ಲವರ್ ಶೋ

   2019ರ ಆಗಸ್ಟ್‌ನಲ್ಲಿ ಜಯಚಾಮರಾಜೇಂದ್ರ ವಡೆಯರ್‌ಗೆ ನಮನ ಎಂಬ ಶೀರ್ಷಿಕೆಯಡಿ ಗಣರಾಜ್ಯೋತ್ಸವ ಆಯೋಜನೆ ಮಾಡಲಾಗಿತ್ತು. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರಿಗೆ ನಮನ ಎಂಬ ಶೀರ್ಷಿಕೆಯಲ್ಲಿ ಫ್ಲವರ್ ಶೋ ನಡೆಸಲಾಗಿತ್ತು.

   English summary
   Independence day flower show in Bengaluru Lalbagh cancelled this year due to Corona out beak. 212th flower show scheduled to be held on August 9, 2020.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more