ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಾತಂತ್ರ್ಯೋತ್ಸವ: ಲಾಲ್‌ಬಾಗ್‌‌ನಲ್ಲಿ ಪುಷ್ಪ ಪ್ರದರ್ಶನ

By Ashwath
|
Google Oneindia Kannada News

ಬೆಂಗಳೂರು,ಜು. 9: ಮೈಸೂರಿನ ತೋಟಗಾರಿಕಾ ಸೊಸೈಟಿಯು ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಲಾಲ್‍ಬಾಗ್ನ ಡಾ. ಎಂ.ಹೆಚ್. ಮರೀಗೌಡ ಸ್ಮಾರಕ ಸಭಾಂಗಣದಲ್ಲಿ 2014 ನೇ ಸಾಲಿನ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ವಿವಿಧ ರೀತಿಯ ಹೂಗಳ ವಸ್ತು ಪ್ರದರ್ಶನವನ್ನು ಹಮ್ಮಿಕೊಂಡಿದೆ.

ಈ ವಸ್ತು ಪ್ರದರ್ಶನದಲ್ಲಿ ವಿವಿಧ ಋತುಗಳಲ್ಲಿನ ನಾನಾ ರೀತಿಯ ಹೂಗಳು, ತರಕಾರಿಗಳನ್ನು ಪ್ರದರ್ಶಿಸಲಾಗುವುದು. ಜುಲೈ 17 ರಂದು ತರಕಾರಿಗಳು ಹಾಗೂ ಅಲಂಕಾರಿಕ ಉದ್ಯಾನಗಳ ಪ್ರದರ್ಶನ ನಡೆಯಲಿದೆ.

 Lalbagh

ಆಗಸ್ಟ್ 6 ರಂದು ಲಾಲ್‍ಬಾಗ್‍ನ ಗಾಜಿನ ಮನೆಯಲ್ಲಿ ತೋಟಗಾರಿಕೆ ಇಲಾಖೆಯ 200 ನೇ ಹೂಗಳ ಪ್ರದರ್ಶನ, ಇಕೆಬಾನ, ಇಂಡಿಯನ್ ಫ್ಲೋರಲ್ ಆರ್ಟ್, ಬೋನ್ಸಾಯ್, ಥಾಯ್ ಆರ್ಟ್, ಡಚ್ ಫ್ಲವರ್ಸ್ ಹಾಗೂ ಡ್ರೈ ಫ್ಲವರ್‍ಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕಾ ಸೊಸೈಟಿಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080- 26576781 ನ್ನು ಸಂಪರ್ಕಿಸಬಹುದಾಗಿದೆ.

English summary
Flower Show at Dr.M.H.Marigowda Memorial Hall, Lalbagh Bangalore organised by the Department of Horticulture and Mysore Horticultural Society, will open to the public on July 17 and will go on till August 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X