ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಿನ್ನಿಸ್ ದಾಖಲೆಗಾಗಿ ಮರಗಳ ಅಪ್ಪಿಕೋ ಕಾರ್ಯಕ್ರಮ

|
Google Oneindia Kannada News

ಬೆಂಗಳೂರು, ಡಿಸೆಂಬರ್ 02 : ಸಸ್ಯಕಾಶಿ ಲಾಲ್ ಬಾಗ್ ಗಿನ್ನಿಸ್ ದಾಖಲೆ ಬರೆಯಲು ಸಜ್ಜಾಗಿದೆ. ಲಾಲ್ ಬಾಗ್ ನಲ್ಲಿ 10 ಸಾವಿರ ವಿದ್ಯಾರ್ಥಿಗಳು ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲಿದ್ದಾರೆ.

ಲಾಲ್ ಬಾಗ್ ನಲ್ಲಿ ಜನವರಿ ಹೊತ್ತಿಗೆ ಮಿನಿ ನಯಾಗರ ಜಲಪಾತಲಾಲ್ ಬಾಗ್ ನಲ್ಲಿ ಜನವರಿ ಹೊತ್ತಿಗೆ ಮಿನಿ ನಯಾಗರ ಜಲಪಾತ

ಡಿಸೆಂಬರ್ 8 ರಂದು ಬೆಳಗ್ಗೆ 8.30 ಕ್ಕೆ ಲಾಲ್ ಬಾಗ್ ನಲ್ಲಿ 'ಮೈ ಟ್ರೀ ಮೈ ಲೈಫ್ ' ಕಾರ್ಯಕ್ರಮದಡಿ ಗಿನ್ನಿಸ್ ದಾಖಲೆ ನಿರ್ಮಿಸಲಾಗುತ್ತಿದ್ದು, 10 ಸಾವಿರ ಮಕ್ಕಳು ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಹೊಸದೊಂದು ಮುನ್ನುಡಿ ಬರೆಯಲಿದ್ದಾರೆ.

Lalbagh gear up for Guinness record

ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿದೆ. ವಿಶ್ವದಲ್ಲೇ ಅತ್ಯಧಿಕ ಮಂದಿ ಏಕಕಾಲದಲ್ಲಿ ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಧ್ಯಾನಿಸುವ ಕಾರ್ಯಕ್ರಮ ಇದಾಗಿದೆ. ಮರಗಳ ಮಹತ್ವದ ಪಾತ್ರ, ವಾತಾವರಣ ಬದಲಾವಣೆಯಲ್ಲಿ ಮರಗಳ ಪಾತ್ರ, ಗಿಡಮರಗಳ ಆಹಾರ ತಯಾರಿಕೆ ಪ್ರಕ್ರಿಯೆ ಸೇರಿದಂತೆ ಹಲವು ತಾಂತ್ರಿಕ ಮಾಹಿತಿ, ಮರ ಸಂಸ್ಕೃತಿ ಕುರಿತು ಪರಿಸರ ತಜ್ಞರು ಮನವರಿಕೆ ಮಾಡಿಕೊಡಲಿದ್ದಾರೆ. ವಿದ್ಯಾರ್ಥಿಗಳು 2ನಿಮಿಷ ಮರ ಅಪ್ಪಿಕೊಂಡು ಕಣ್ಣುಮುಚ್ಚಿ ನಿಶ್ಯಬ್ಧವಾಗಿ ಧ್ಯಾನಿಸಲಿದ್ದಾರೆ.

ಈ ಹಿಂದೆ 7ಸಾವಿರ ಮಕ್ಕಳು ಒಂದೆಡೆ ಒಂದು ವಿಷಯದ ಬಗ್ಗೆ ಆಲೋಚನೆ ಮಾಡಿದ್ದು ಇದುವರೆಗಿನ ದಾಖಲೆಯಾಗಿದ್ದು, ಮೈ ಟ್ರೀ, ಮೈ ಲೈಫ್ ಹೊಸ ದಾಖಲೆ ಬರೆಯಲಿದೆ. ಬೆಂಗಳೂರು ಕೋಲಾರ ಜಿಲ್ಲೆಯ 60ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

English summary
More than 10 thousands of students will write a guinness record by hugging tress at Lalbagh on Dec.8 in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X