ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲ್ ಬಾಗ್ ನಲ್ಲಿ ಗಾಂಧಿಜೀ ಆತ್ಮಚರಿತ್ರೆಯ ಪುಸ್ತಕಗಳ ವಿತರಣೆ

|
Google Oneindia Kannada News

ಬೆಂಗಳೂರು, ಜನವರಿ 20 2018: ಇಂದಿನ ತಲೆಮಾರಿನ ಮಕ್ಕಳಲ್ಲಿ ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಬಿತ್ತುವುದು ಬಹಳ ಅವಶ್ಯಕ ಎಂದು ಎ ಎಸ್ ಬಿ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಎಸ್ ಭಗೀರಥ್ ಅಭಿಪ್ರಾಯಪಟ್ಟರು.

ನಗರದ ಲಾಲ್ ಭಾಗ್ ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಮಹಾತ್ಮ ಗಾಂಧಿಯವರ ಆತ್ಮಚರಿತ್ರೆಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿ ಮಾತನಾಡಿದರು.

ಗಾಂಧಿಯ ಜೀವನ ಗಾಥೆ ಸಾರುವ ಲಾಲ್‌ಬಾಗ್ ಪುಷ್ಪ ಪ್ರದರ್ಶನ ಗಾಂಧಿಯ ಜೀವನ ಗಾಥೆ ಸಾರುವ ಲಾಲ್‌ಬಾಗ್ ಪುಷ್ಪ ಪ್ರದರ್ಶನ

ಸೇವೆ ಮತ್ತು ಸಹ ಬಾಳ್ವೆಯ ಪಾಠ ಭೋಧಿಸಿದ ಬಾಪೂಜಿಗೆ "ಬಾಪು ಕುಟೀರದ" ಮೂಲಕ ಪುಷ್ಪ ನಮನವನ್ನು ಎ ಎಸ್ ಬಿ ಸಲ್ಲಿಸುತ್ತಿದೆ. ಬಾಪು ಕುಟೀರದ ಪ್ರಾಯೋಕತ್ವ ವಹಿಸಿಕೊಳ್ಳುವುದು ನಮ್ಮ ಸೌಭಾಗ್ಯವೇ ಸರಿ.

Lalbagh Flower Show : Mahatma Gandhiji Autobiography distributed

ಇದೇ ರೀತಿ ಇಂದಿನ ಮಕ್ಕಳಲ್ಲಿ ಮಹಾತ್ಮ ಗಾಂಧೀಜಿಯವರ ಆದರ್ಶಗಳ ಬಗ್ಗೆ ತಿಳುವಳಿಕೆ ಮೂಡಿಸುವುದು ನಮ್ಮ ಗುರಿಯಾಗಿದೆ. ಈ ಹಿನ್ನಲೆಯಲ್ಲಿ ಮಹಾತ್ಮ ಗಾಂಧೀಜಿವರ ಆತ್ಮ ಚರಿತ್ರೆಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸುತ್ತಿದ್ದೇವೆ. ಈ ಮಕ್ಕಳು ಗಾಂಧೀಜಿಯವರ ಜೀವನ ದ ಬಗ್ಗೆ ತಿಳಿದುಕೊಳ್ಳುವ ಮೂಲಕ ಆದರ್ಶ ವ್ಯಕ್ತಿಗಳಾಗಿ ಬೆಳೆಯಲಿ ಎನ್ನು ಆಶಯ ನಮ್ಮದು ಎಂದರು.

ಗಣರಾಜ್ಯೋತ್ಸವ ಪುಷ್ಪ ಪ್ರದರ್ಶನ: ಗಾಂಧಿ, ಚರಕ, 3 ಕೋತಿಗಳುಗಣರಾಜ್ಯೋತ್ಸವ ಪುಷ್ಪ ಪ್ರದರ್ಶನ: ಗಾಂಧಿ, ಚರಕ, 3 ಕೋತಿಗಳು

ಮಹಾತ್ಮ ಗಾಂಧೀಜಿಯವರ 150 ಜನ್ಮ ದಿನಾಚರಣೆಯ ವರ್ಷಾಚರಣೆಯ ಸಂಧರ್ಬದಲ್ಲಿ, ಮುಂದಿನ ದಿನಗಳಲ್ಲೂ ಶಾಲಾ ವಿದ್ಯಾರ್ಥಿಗಳಲ್ಲಿ ಬಾಪೂಜಿಯವರ ಸಂದೇಶಗಳನ್ನು ತಲುಪಿಸುವ ಕಾರ್ಯಕ್ಕೂ ಎ ಎಸ್ ಬಿ ಮುಂದಾಗಲಿದೆ ಎಂದರು.

Lalbagh Flower Show : Mahatma Gandhiji Autobiography distributed

ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರ 150ನೇ ಜನ್ಮ ವರ್ಷದ ಅಂಗವಾಗಿ ಈ ವರ್ಷದ ಫಲಪುಷ್ಪ ಪ್ರದರ್ಶನವನ್ನು ಗಾಂಧೀಜಿಗೆ ಮೀಸಲಿಡಲಾಗಿದೆ. ಇದು 209ನೇ ಫಲಪುಷ್ಪ ಪ್ರದರ್ಶನವಾಗಿದೆ. ಎಲ್ಲೆಲ್ಲೂ ಹೂಗಳ ಪರಿಮಳ, ಒಂದೆಡೆ ಗಾಂಧಿ ಪ್ರತಿಮೆ, ಇನ್ನೊಂದೆಡೆ ಸಬರಮತಿ ಆಶ್ರಮ, ಇನ್ನೊಂದೆಡೆ ಚರಕ, ಮತ್ತೊಂದೆಡೆ ಕಟ್ಟದನ್ನು ಕೇಳಬೇಡ, ಕೆಟ್ಟದ್ದನ್ನು ಮಾತನಾಡಬೇಡ, ಕೆಟ್ಟದ್ದನ್ನು ನೋಡಬೇಡ ಎಂದು ಸೂಚಿಸುವ ಮೂರು ಕೋತಿಗಳು ಕಂಡು ಬರುತ್ತದೆ.

English summary
ASB Developers today distributed around 1000 books of "Autobiography of Mahatma Gandhiji" at the flower show in Lalbagh. ASB group Managing Director S Bhagirath & Person in Gandhiji Dress distributed the books to school children's & visitors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X