ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲ್ ಬಾಗ್ ಹೂವಿನ ಅರಮನೆಗೆ ಸ್ವಾಗತ, ಸುಸ್ವಾಗತ

|
Google Oneindia Kannada News

ಬೆಂಗಳೂರು, ಆಗಸ್ಟ್ 6 : ಈ ಬಾರಿ ಲಾಲ್ ಬಾಗ್ ಬಲ್ಲಿ ಬೆಂಗಳೂರು ಅರಮನೆ ತಲೆ ಎತ್ತಿದೆ. ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಆ.7ರಿಂದ 16ರ ತನಕ ನಡೆಯಲಿದ್ದು, ಲಕ್ಷ-ಲಕ್ಷ ಹೂಗಳಿಂದ ಬೆಂಗಳೂರು ಅರಮನೆಯನ್ನು ಲಾಲ್‌ ಬಾಗ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಅಂತಿಮ ಹಂತದ ಕೆಲಸ ಪ್ರಗತಿಯಲ್ಲಿದೆ.

ಆಗಸ್ಟ್ 7 ರಂದು ಬೆಳಗ್ಗೆ ಮೈಸೂರು ರಾಣಿ ಪ್ರಮೋದಾ ದೇವಿ ಒಡೆಯರ್ ಮತ್ತು ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರದರ್ಶನವನ್ನು ಉದ್ಘಾಟಿಸಲು ಆಗಮಿಸಲಿದ್ದಾರೆ.[ಬೆಂಗಳೂರು ಅರಮನೆ ನೋಡಲು ಲಾಲ್‌ ಬಾಗ್‌ಗೆ ಬನ್ನಿ]

ಆನ್‌ಲೈನ್ ಮೂಲಕವೂ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಟಿಕೆಟ್ ಬುಕ್ ಮಾಡಬಹುದು. www.lalbaghflowershow.in ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಎಲ್ಲ ಮಾರ್ಗದರ್ಶಿ ಸೂತ್ರಗಳು ಸಿಗುತ್ತವೆ. ಲಾಲ್ ಬಾಗ್ ನಲ್ಲಿ ಬೆಂಗಳೂರು ಹೂವಿನ ಅರಮನೆ ಯಾವ ರೀತಿ ನಿರ್ಮಾಣವಾಗುತ್ತಿದೆ ಒಮ್ಮೆ ನೋಡಿಕೊಂಡು ಬರೋಣ...

ಕೆಂಪು ಮತ್ತು ಹಸಿರು ಹೊದಿಕೆಯ ಅರಮನೆ

ಕೆಂಪು ಮತ್ತು ಹಸಿರು ಹೊದಿಕೆಯ ಅರಮನೆ

3 ಲಕ್ಷಕ್ಕೂ ಅಧಿಕ ಡಚ್ ಗುಲಾಬಿ ಹೂಗಳಿಂದ ಬೆಂಗಳೂರು ಅರಮನೆಯನ್ನು ನಿರ್ಮಿಸಲಾಗುತ್ತಿದೆ. 45 ಅಡಿ ಉದ್ದ, 35 ಅಡಿ ಎತ್ತರ ಮತ್ತು 20 ಅಡಿ ಅಗಲದ ಅರಮನೆಯ ಎದುರು ಭಾಗ ಕೆಂಪು ಮತ್ತು ಬಿಳಿ ಹೂಗಳಿಂದ ಕಂಗೋಳಿಸಿದರೆ, ಹಿಂಬದಿಗೆ ಹಸಿರು ಹೊದಿಕೆ ಮಾಡಲಾಗಿದೆ.

ತೋಟಗಾರಿಕಾ ಇಲಾಖೆ ಮಳಿಗೆಗಳು

ತೋಟಗಾರಿಕಾ ಇಲಾಖೆ ಮಳಿಗೆಗಳು

ತೋಟಗಾರಿಕಾ ಇಲಾಖೆ ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಸುಮಾರು 150 ಕ್ಕೂ ಅಧಿಕ ಮಳಿಗೆಗಳನ್ನು ನಿರ್ಮಾಣ ಮಾಡಲಿವೆ. ಹೂ ಗಿಡಗಳು, ಹಣ್ಣು ಮತ್ತು ಟೆರೆಸ್ ನರ್ಸರಿ ಕುರಿತಂತೆ ಸಕಲ ಮಾಹಿತಿ ದೊರೆಯಲಿದೆ.

ಕಳೆದ ವರ್ಷ ಮೈಸೂರು ಅರಮನೆ

ಕಳೆದ ವರ್ಷ ಮೈಸೂರು ಅರಮನೆ

ಕಳೆದ ವರ್ಷ ಸ್ವಾತಂತ್ರ್ಯೋತ್ಸವ ಪ್ರದರ್ಶನದಲ್ಲಿ ಮೈಸೂರು ಅರಮನೆಯನ್ನು ನಿರ್ಮಿಸಲಾಗಗಿತ್ತು. ಹೂವಿನಿಂದ ಅಲಂಕೃತಗೊಂಡಿದ್ದ ಮೈಸೂರು ಅವರಮನೆಯನ್ನು ಸುಮಾರು 5 ಲಕ್ಷ ಜನ ಕಣ್ಣು ತುಂಬಿಕೊಂಡಿದ್ದರು.

ಒಡೆಯರ್ ಪ್ರತಿಮೆಗಳು

ಒಡೆಯರ್ ಪ್ರತಿಮೆಗಳು

ಮೈಸೂರು ಒಡೆಯರ್ ಅವರ ಪ್ರತಿಮೆಗಳು, ಅಬ್ದುಲ್ ಕಲಾಂ ಮರಳಿನ ಕಲಾಕೃತಿ ಈ ಬಾರಿಯ ಫಲಪುಷ್ಟಪ ಪ್ರದರ್ಶನದ ವಿಶೇಷತೆಗಳಾಗಿವೆ. ಜತೆಗೆ ಸುಮಾರು 200 ಕ್ಕೂ ಅಧಿಕ ಹೂವುಗಳನ್ನು ಒಂದೇ ಜಾಗದಲ್ಲಿ ನಿಂತು ಕಣ್ಣು ತುಂಬಿಕೊಳ್ಳಬಹುದು.

ತೋಟಗಾರಿಕಾ ಇಲಾಖೆ ಸದಾ ಮುಂದು

ತೋಟಗಾರಿಕಾ ಇಲಾಖೆ ಸದಾ ಮುಂದು

ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವದ ಪ್ರದರ್ಶನದ ಜತೆಗೆ ತೋಟಗಾರಿಕೆ ಇಲಾಖೆ ಮಾವು ಮತ್ತು ಹಲಸಿನ ಮೇಳಗಳನ್ನು ನಡೆಸಿಕೊಂಡು ಬರುತ್ತಿದೆ. ಹಾಪ್ ಕಾಮ್ಸ್ ಅಡಿಯಲ್ಲಿ ದ್ರಾಕ್ಷಿ ಮೇಳವವನ್ನು ನಡೆಸಿದೆ.

English summary
Bengaluru: Independence day flower show will be held at the Lalbagh Bengaluru from August 7 to 16. Sand sculpture of Abdul Kalam and floral Bengaluru palace main attraction of the show. Here is some pictures of flower show preparation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X