ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲ್‌ಬಾಗ್ ಪುಷ್ಪ ಪ್ರದರ್ಶನ: ಈ ಬಾರಿಯ ವಿಶೇಷತೆ ಏನು?

|
Google Oneindia Kannada News

ಬೆಂಗಳೂರು, ಜುಲೈ 19: ಬೆಂಗಳೂರಿನ ಜನತೆ ಕಾತುರದಿಂದ ಕಾದಿರುವ ಲಾಲ್‌ಬಾಗ್ ಪುಷ್ಪ ಪ್ರದರ್ಶನ ಈ ಬಾರಿ ನಡೆಯಲಿದ್ದು, ಗಾಜಿನ ಮನೆಯಲ್ಲಿ ಪುಷ್ಪ ಪ್ರದರ್ಶನ ಆಯೋಜಿಸುವ ಬದಲಾಗಿ ಬೊಟಾನಿಕಲ್ ಗಾರ್ಡನ್ ತುಂಬೆಲ್ಲಾ ಪುಷ್ಪಪ್ರದರ್ಶನ ಆಯೋಜಿಸಲು ನಿರ್ಧರಿಸಿದ್ದಾರೆ.

ಈ ಕುರಿತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನಿಡಿದ್ದಾರೆ, ಕೊರೊನಾ ನಿಯಮಗಳಿಂದ ಕಳೆದ ವರ್ಷ ಆಗಸ್ಟ್ ಹಾಗೂ ಈ ವರ್ಷ ಜನವರಿಯಲ್ಲಿ ಪುಷ್ಪ ಪ್ರದರ್ಶನ ನಡೆಸಲು ಸಾಧ್ಯವಾಗಿರಲಿಲ್ಲ.

ಆದರೆ ಈ ಬಾರಿ ಜನರನ್ನು ನಿರಾಸೆಗೊಳಿಸಬಾರದು ಎಂದು ಆಲೋಚಿಸಿರುವ ತೋಟಗಾರಿಕಾ ಇಲಾಖೆ, ವಿಶೇಷ ಥೀಮ್ ಮೂಲಕ ಜನರ ಕಣ್ಮನ ತಣಿಸಲು ಮುಂದಾಗಿದೆ.

Lalbagh Flower Show 2021: May Be Spread Across Park This Year

ಸಾಮಾನ್ಯವಾಗಿ ಪುಷ್ಪ ಪ್ರದರ್ಶನದ ಸಮಯದಲ್ಲಿ ಜನರು ಒಂದೇ ಕಡೆ ಗುಂಪು ಸೇರುತ್ತಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೊರೊನಾ ನಿಯಮ ಪಾಲನೆ ಅತಿ ಮುಖ್ಯವಾಗಿರುತ್ತದೆ.

ಹಾಗಾಗಿ ಇಡೀ ಲಾಲ್‌ಬಾಗ್ ನಲ್ಲಿ ಪುಷ್ಪ ಪ್ರದರ್ಶನ ಏರ್ಪಡಿಸಲು ಚಿಂತನೆ ನಡೆದಿದೆ. ಈ ಕುರಿತು ಅಧಿಕಾರಿಗಳು ಸಭೆ ಆಯೋಜಿಸಿದ್ದಾರೆ.

ಬೇರೆ ಬೇರೆ ಥೀಮ್ ಇರಿಸಿ ಇಡೀ ಬೊಟಾನಿಕಲ್ ಗಾರ್ಡನ್‌ನಲ್ಲಿ ಪುಷ್ಪ ಪ್ರದರ್ಶನ ನಡೆಸಲು ಚಿಂತನೆ ನಡಸಲಾಗಿದೆ. ಟ್ರೀ ಪಾರ್ಕ್, ಹಾಗೂ ಮಿನಿ ಲಾಲ್‌ಬಾಗ್‌ನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತಿದೆ.

Recommended Video

ಕರ್ನಾಟಕದಲ್ಲಿ ಮುಂದುವರಿದ ವರುಣನ ಆರ್ಭಟ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ | Oneindia Kannada

ಆದರೆ ಈ ಬಾರಿ ಎಲ್ಲರಿಗೂ ಸಾಮಾನ್ಯವಾಗಿ ವರ್ಕ್ ಫ್ರಂ ಹೋಮ್ ಇದೆ, ಶಾಲಾ ವಿದ್ಯಾರ್ಥಿಗಳಿಗೆ ರಜೆ ಇದೆ, ಕಾಲೇಜುಗಳು ಕೂಡ ಬಂದ್ ಇವೆ. ಹೀಗಾಗಿ ಅನೇಕ ಮಂದಿ ಫಲಪುಷ್ಪ ಪ್ರದರ್ಶನಕ್ಕೆ ಆಗಮಸುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
The most-awaited Lalbagh flower show may be held this year, but in a different way. Instead of hosting it at the Glass House, the officials from the horticulture department are planning to host it across the botanical gardens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X