ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ರೂಪ ಲಾವಣ್ಯದಿಂದ ಕಂಗೊಳಿಸಲಿದೆ ಲಾಲ್‌ಬಾಗ್

By Vanitha
|
Google Oneindia Kannada News

ಬೆಂಗಳೂರು, ಜುಲೈ, 14 : ಐತಿಹಾಸಿಕ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಲಾಲ್ ಬಾಗ್ ಉದ್ಯಾನವನಲ್ಲಿ 50 ವರ್ಷಗಳ ನಂತರ ಫೇಸ್ ಲಿಫ್ಟ್ ಯೋಜನೆ ಕೈಗೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಲಾಲ್ ಬಾಗ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ತೋಟಗಾರಿಕೆ ಇಲಾಖೆ ಗ್ಲಾಸ್ ಹೌಸ್, ಕೃಂಬಿಗಲ್ ಹಾಲ್, ಕಾರಂಜಿ ಮತ್ತು ಅಕ್ವೇರಿಯಂ ಒಳಗೊಂಡಂತೆ 4 ಫೇಸ್ ಲಿಫ್ಟ್ ತೆರೆಯಲು ಮುಂದಾಗಿದೆ. ಇದರ ಅಂದಾಜು ವೆಚ್ಚ 29.2 ಕೋಟಿ ತಗಲುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.[ಸಂಗೀತದಲ್ಲಿ ಮಿಂದೇಳಲಿದೆ ಕಬ್ಬನ್ ಪಾರ್ಕ್, ಬರಲು ಮರೆಯದಿರಿ!]

lalbagh

ಈ ಕಾರ್ಯಯೋಜನೆ ಪೂರ್ಣಗೊಳ್ಳಲು ಬೇಕಾದ ದಾಖಲೆಗಳು ಈಗಾಗಲೇ ತಯಾರಾಗಿದ್ದು, ಇದರ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಿಕೊಡಲಾಗಿದೆ. ಯೋಜನೆಯ ಪೂರ್ಣ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾರ್ಕ್ ಪುನರ್ ರೂಪೀಕರಣ ಯೋಜನೆಗೆ ಸಮ್ಮತಿ ಸೂಚಿಸಿದ್ದಾರೆ.

ಸುಮಾರು ವರ್ಷಗಳಿಂದ ಲಾಲ್ ಬಾಗ್ ಮರು ರೂಪೀಕರಣ ಕುರಿತು ಯಾವುದೇ ಒಂದು ಕಾರ್ಯ ಯೋಜನೆ ಕೈಗೊಂಡಿರಲಿಲ್ಲ. ಈ ಯೋಜನೆಯಿಂದ ತುಕ್ಕು ಹಿಡಿದಿರುವ ಮುಂಭಾಗದ ಗೇಟ್ ರಿಪೇರಿ, ಅಕ್ವೇರಿಯಂ ಪುನರ್ ರೂಪಿಸುವಿಕೆ , ಆವರಣ ಗೋಡೆಯನ್ನು ಎತ್ತರಿಸುವುದು ಸೇರಿದಂತೆ ಹಲವಾರು ಕಾಮಗಾರಿಗಳು ಪೂರ್ಣಗೊಳ್ಳಲಿದೆ ಉಸ್ತುವಾರಿ ಅಧಿಕಾರಿಗಳು ಹೇಳಿದ್ದಾರೆ.

English summary
Lalbagh botanical gardens,one of the most beautiful park in the city. The department horticulture department has suggest to modernize 4 gates, the glasshouse,Krumbigal Hall, the centenary fountain and the aquarium. The facelift will cost Rs 29.2crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X