• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇಂದ್ರ ಪಠ್ಯಪುಸ್ತಕದಲ್ಲಿ ಮಕ್ಕಳಿಗೆ ಲಾಲ್‌ ಬಾಗ್‌ ಪಾಠ!

By Nayana
|

ಬೆಂಗಳೂರು, ಮೇ 22: ದಿನಕ್ಕೆ ಸಾವಿರಾರು ಜನರನ್ನು ಬರಸೆಳೆವ ಲಾಲ್‌ಬಾಗ್‌ ಕುರಿತು ಪಠ್ಯ ಮೊದಲ ಬಾರಿಗೆ ಐಸಿಎಸ್‌ಇ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಿದೆ.

ನಾಲ್ಕನೇ ತರಗತಿಯ ಪಠ್ಯ ಪುಸ್ತಕ ಕನ್ನಡದಲ್ಲಿ ಲಾಲ್‌ಬಾಗ್ (12 ಪಾಠ ) ಎಂಬ ಪಾಠ ಪರಿಚಯಿಸಲಾಗಿದೆ. ಕನ್ನಡವನ್ನು ದ್ವಿತೀಯ ಭಾಷೆಯಾಗಿ ತೆಗೆದುಕೊಂಡಿರುವ ವಿದ್ಯಾರ್ಥಿಗಳು ಈ ಪಠ್ಯವನ್ನು ಅಭ್ಯಾಸ ಮಾಡಲಿದ್ದಾರೆ. ಪಠ್ಯ ಪುಸ್ತಕದಲ್ಲಿ ಒಟ್ಟು 15 ಪಾಠಗಳಿವೆ. ಅಬ್ಬಿ ಜಲಪಾತ, ವೀರರಾಣಿ ಕಿತ್ತೂರು ಚೆನ್ನಮ್ಮ, ಆದರ್ಶ ಶಿಕ್ಷಕ ಡಾ. ಎಸ್‌.ರಾಧಾಕೃಷ್ಣನ್ ಅವರನ್ನು ಒಳಗೊಂಡಂತೆ ಮಾಹಿತಿಯುಕ್ತ ಪಾಠಗಳು ಈ ಪಠ್ಯದಲ್ಲಿದೆ.

ಎರಡು ಪುಟಗಳ ಈ ಪಾಠದಲ್ಲಿ ಪುಟದ ಮೇಲ್ಭಾಗದಲ್ಲಿ ಗಾಜಿನ ಮನೆಯ ಮುಂಭಾಗದ ಫೋಟೊವನ್ನು ಮುದ್ರಿಸಲಾಗಿದೆ. ಅದರ ಕೆಳಭಾಗದಲ್ಲಿ ಲಾಲ್‌ಬಾಗ್‌ ಹುಟ್ಟು, ಬೆಳವಣಿಗೆ, ಅದಕ್ಕೆ ಕಾರಣಕರ್ತರ ಮಾಹಿತಿಯನ್ನು ಮುದ್ರಿಸಲಾಗಿದೆ. ಎರಡನೇ ಪುಟದಲ್ಲಿ ಹೂವಿನ ಗಡಿಯಾರ ಮತ್ತು ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನಕ್ಕಾಗಿ ಬೆಳೆಸಿರುವ ಹೂವಿನ ಸಸ್ಯಗಳ ಸಮೇತ ಗಾಜಿನ ಮನೆಯ ಒಳನೋಟದ ಚಿತ್ರಗಳನ್ನು ಮುದ್ರಿಸಲಾಗಿದೆ.

ಈ ಪುಟದಲ್ಲಿಯೇ ಲಾಲ್‌ಬಾಗ್‌ನ ವಿಶಿಷ್ಟ ಸಸ್ಯರಾಶಿಯಲ್ಲದೆ ಕೆಂಪೇಗೌಡ ಗೋಪುರ, ಗುಲಾಬಿವನ, ಪುಷ್ಪ ಗಡಿಯಾರ, ತಾವರೆಕೊಳ, ಲಾಲ್‌ಬಾಗ್‌ ಕೆರೆ, ವಾದ್ಯ ಮಂಟಪ, ಜಪಾನಿ ಮಾದರಿ ಉದ್ಯಾನ ಹೀಗೆ ಉದ್ಯಾನಗಳಲ್ಲಿರುವ ಇತರೆ ವಿಶೇಷಗಳ ಬಗ್ಗೆ ಮಾಹಿತಿ ಇದೆ. ಗಾಜಿನ ಮನೆಯಲ್ಲಿ ವರ್ಷಕ್ಕೆ ಎರಡು ಬಾರಿ ನಡೆಯುವ ಫಲಪುಷ್ಪ ಪ್ರದರ್ಶನಗಳು ಇತ್ಯಾದಿ ಮಾಹಿತಿಯೂ ಇದೆ ಎಂದು ತೋಟಾಗರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್‌ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
ICSE has adopted a lesson in its text book about Lal bagh botanical garden of Bengaluru. The lesson was adopted for fourth standard Kannada language as second language which contents hinstory and importance of the Lal bagh.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more