ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲ್‌ಬಾಗ್‌ ತೋಟದಲ್ಲಿ ಹೂಗಳ ಬೆಡಗು ಬಿನ್ನಾಣ!

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 4: ಭಾರತೀಯ ಸೇನೆಗೆ ಅರ್ಥಪೂರ್ಣ ಸಮರ್ಪಣೆ ಲಾಲ್‌ಬಾಗ್‌ ಫ್ಲವರ್‌ ಶೋ ಶನಿವಾರ ಉದ್ಘಾಟನೆಗೊಂಡಿದೆ. ಸ್ವಾತಂತ್ರ್ಯೋತ್ಸವ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಏರ್ಪಡಿಸಿದ್ದ ಪುಷ್ಪ ಪ್ರದರ್ಶನದಲ್ಲಿ ಈ ಬಾರಿ 87ಕ್ಕೂ ಅಧಿಕ ಬಗೆಯ ವೈವಿದ್ಯಮಯ ಪುಷ್ಪಗಳನ್ನು ಬಳಸಲಾಗಿದೆ.

ಸುಮಾರು 2 ಕೋಟಿ ವೆಚ್ಚಮಾಡಲಾಗಿದೆ. ಆ.4 ರಂದು ಆರಂಭಗೊಂಡಿರುವ ಪುಷ್ಪ ಪ್ರದರ್ಶನ ಆಗಸ್ಟ್ 15ರವರೆಗೆ ನಡೆಯಲಿದೆ. ಹೂವುಗಳೆಂದರೆ ಹೆಣ್ಣುಮಕ್ಕಳಿಗೆ ಎಂದಿಗೂ ಅಚ್ಚುಮೆಚ್ಚು, ಪುಷ್ಪ ಪ್ರದರ್ಶನದಲ್ಲಿ ಹೆಚ್ಚು ಯುವತಿಯರೇ ಕಾಣಿಸಿಕೊಂಡರು, ಹೂವುಗಳನ್ನು ನೋಡುವುದು ಅದರೊಂದಿಗೆ ಸೆಲ್ಫೀ ತೆಗೆದುಕೊಳ್ಳುವುದರಲ್ಲಿಯೇ ಮಗ್ನರಾಗಿದ್ದರು. ಭಾರತೀಯ ಸೇನೆಯ ಗೌರವಾರ್ಥ ಸಮರ್ಪಿಸಲಾಗಿದೆ.

ನೋಡುಗರ ಕಣ್ಣಲ್ಲಿ ಯೋಧ ಸಮರ್ಪಿತ ಲಾಲ್‌ಬಾಗ್‌ ಪುಷ್ಪಪ್ರದರ್ಶನ ನೋಡುಗರ ಕಣ್ಣಲ್ಲಿ ಯೋಧ ಸಮರ್ಪಿತ ಲಾಲ್‌ಬಾಗ್‌ ಪುಷ್ಪಪ್ರದರ್ಶನ

. ಮೈಸೂರು ಉದ್ಯಾನ ಕಲಾಸಂಘ ಆಶ್ರಯದಲ್ಲಿ ಭಾರತದ ರಕ್ಷಣಾ ಪಡೆಗಳಿಗೆ ಪುಷ್ಪನಮನ ಶೀರ್ಷಿಕೆಯಡಿ ಏರ್ಪಡಿಸಿರುವ ಪ್ರದರ್ಶನದಲ್ಲಿ ಭಾರತದ ರಕ್ಷಣಾ ಪಡೆಗಳ ಶೌರ್ಯ ಹಾಗೂ ಸಾಮರ್ಥ್ಯವನ್ನು ಬಿಂಬಿಸಲಾಗಿದೆ.

ಯುದ್ಧ ಟ್ಯಾಂಕರ್‌ಗಳು, ಸಮರ ನೌಕೆಗಳು, ಯುದ್ಧ ವಿಮಾನಗಳನ್ನು ಹಾಲೆಂಡ್‌ ಮತ್ತು ಊಟಿಯಿಂದ ತರಿಸಿದ ಹೂವುಗಳಿಂದ ನಿರ್ಮಿಸಲಾಗಿದೆ. ಪ್ರದರ್ಶನ ಜಾಗದಲ್ಲಿ ಫುಡ್‌ ಕೋರ್ಟ್‌ ಮಾತ್ರ ಇರುತ್ತದೆ, ಅಲ್ಲಿ ತಾಜಾ ಹಣ್ಣುಗಳು, ಹಣ್ಣಿನ ಜ್ಯೂಸ್‌ ಹಾಗೂ ಕುಡಿಯುವ ನೀರು ಮತ್ತು ಸಾಮಾನ್ಯ ತಿನಿಸುಗಳು ಮಾತ್ರ ದೊರೆಯುತ್ತದೆ. ಹೊರಗಿನ ತಿಂಡಿ ಹಾಗೂ ಪ್ಲಾಸ್ಟಿಕ್‌ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

 3-4 ದಿನಕ್ಕೆ 1.2 ಲಕ್ಷ ಹೂ ಬದಲಾವಣೆ

3-4 ದಿನಕ್ಕೆ 1.2 ಲಕ್ಷ ಹೂ ಬದಲಾವಣೆ

ಈ ಬಾರಿ ಭಾರತೀಯ ಸೇನೆ ಹಾಗೂ ನವದೆಹಲಿ ಇಂಡಿಯಾ ಗೇಟ್‌ನಲ್ಲಿರುವ ಯುದ್ಧ ಸ್ಮಾರಕ ಅಮರ್‌ ಜವಾನ್‌ ಜ್ಯೋತಿ ಪ್ರತಿಕೃತಿಗಳು ಬಹುವರ್ಣದ ಹೋದಳಿಗಳಿಂದ ಮೇಳೈಸಿವೆ. ಕರಾವಳಿ, ಮರುಭೂಮಿ, ಹಿಮಪರ್ವತ, ಅರಣ್ಯ ಬಯಲು ಎಲ್ಲವನ್ನೂ ಒಳಗೊಂಡಿದೆ. ಪ್ರದರ್ಶನದ 12 ದಿನಗಳಲ್ಲಿ ಮೂರರಿಂದ ನಾಲ್ಕು ಬಾರಿ ಪುಷ್ಪಗಳನ್ನು ಬದಲಾಯಿಸಲಾಗುತ್ತದೆ. ಈ ಬದಲಾವಣೆಗೆ ಒಂದು ಸಲಕ್ಕೆ 40 ಸಾವಿರ ರೂ. ವೆಚ್ಚವಾಗುತ್ತದೆ. 1.20 ಲಕ್ಷ ಹೂವುಗಳನ್ನು ಈ ರೀತಿ ಬದಲಾವಣೆ ಮಾಡಲಾಗುತ್ತದೆ.

ಯೋಧರಿಗೆ ಸಮರ್ಪಿತ ಪುಷ್ಪ ಪ್ರದರ್ಶನ ಉದ್ಘಾಟಿಸಿದ ಕುಮಾರಸ್ವಾಮಿ ಯೋಧರಿಗೆ ಸಮರ್ಪಿತ ಪುಷ್ಪ ಪ್ರದರ್ಶನ ಉದ್ಘಾಟಿಸಿದ ಕುಮಾರಸ್ವಾಮಿ

ಇಸ್ರೋ-ಎಚ್‌ಎಎಲ್‌ ಮಾದರಿಗಳು

ಇಸ್ರೋ-ಎಚ್‌ಎಎಲ್‌ ಮಾದರಿಗಳು

ಗಾಜಿನ ಮನೆಯಲ್ಲಿ ನಿರ್ಮಿತ ಉಪಗ್ರಹ ಉಡಾವಣಾ ಮಾದರಿ, ಆಕಾಶ್‌ ಮತ್ತು ಬ್ರಹ್ಮೋಸ್‌ ಕ್ಷಿಪಣಿ ಮಾದರಿ ಕಣ್ತುಂಬಿಕೊಳ್ಳಬಹುದು. ಆಕರ್ಷಕ ಪುಷ್ಪ ಗೋಪುರಗಳ ಮೇಲೆ ಎಚ್‌ಎಎಲ್‌ ನಿರ್ಮಿತ ನಾಲ್ಕು ಬಗೆಯ ಯುದ್ಧ ವಿಮಾನಗಳು, ಹೆಲೆಕಾಪ್ಟರ್‌ಗಳ ಮಾದರಿ ಪ್ರದರ್ಶನಗೊಂಡಿದೆ. ಸಮುದ್ರದ ಮೇಲಿನ ಐಎನ್‌ಎಸ್‌ ವಿಕ್ರಮಾದಿತ್ಯ ಸಮರ ನೌಕೆಯ ಮೇಲೆ ಜೆಟ್‌ ಫೈಟರ್‌ಗಳು, ಹೆಲಿಕಾಪ್ಟರ್‌ಗಳು, ಯುದ್ಧ ವಿಮಾನಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಕನ್ನಡ ಚಿತ್ರರಂಗದ ಸವಿನೆನಪು

ಕನ್ನಡ ಚಿತ್ರರಂಗದ ಸವಿನೆನಪು

ಕನ್ನಡ ಚಿತ್ರರಂಗ 85 ವಸಂತಗಳನ್ನು ಕಂಡಿರುವ ಹಿನ್ನೆಲೆಯಲ್ಲಿ ಹಳೆಯ ಕಾಲದ ಉದ್ದದ ಫ್ಲೋರಲ್‌ ರೀಲ್‌, ಸಿನಿಮಾ ಕ್ಲಾಪ್‌ ಗೋಲ್ಡ್‌, ಕ್ಯಾಮರಾಗಳನ್ನು ಹೂವಿನಿಂದ ಸೃಷ್ಟಿಸಲಾಗಿದೆ. ಸಿನಿಮಾ ರಂಗದ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಫಲಕಗಳನ್ನು ಏಳು ಸಾವಿರಕ್ಕೂ ಹೆಚ್ಚು ಗುಲಾಬಿ ಹೂವುಗಳಿಂದ ಅಲಂಕರಿಸಲಾಗಿದೆ.

ವೀಕ್ಷಕರಿಗೆ ಪುಷ್ಪ ಪ್ರದರ್ಶನದಲ್ಲಿ ಭದ್ರತೆ

ವೀಕ್ಷಕರಿಗೆ ಪುಷ್ಪ ಪ್ರದರ್ಶನದಲ್ಲಿ ಭದ್ರತೆ

ಈ ಬಾರಿ 6ರಿಂದ 7 ಲಕ್ಷ ಮಂದಿ ಅಗಮಿಸುವ ನಿರೀಕ್ಷೆಯಿದ್ದು, ಭದ್ರತೆಗಾಗಿ ಲಾಲ್‌ಬಾಗ್‌ನ ನಾನಾ ಕಡೆ 100 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅದೇ ರೀತಿ ಎಲ್ಲ ಮಾದರಿಯ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಪೊಲೀಸ್‌ ಚೌಕಿ ನಿರ್ಮಾಣ, ಹೆಚ್ಚುವರಿ ಪೊಲೀಸ್‌ ಅಧಿಕಾರಿಗಳ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ.

ಶಾಲಾ ಮಕ್ಕಳಿಗೆ ಉಚಿತ ಪ್ರವೇಶ

ಶಾಲಾ ಮಕ್ಕಳಿಗೆ ಉಚಿತ ಪ್ರವೇಶ

ಆಗಸ್ಟ್ 5,11,12 ಮತ್ತು 15ರ ಅವಧಿಯನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಜೇನು ನೊಣಗಳಿಂದ ರಕ್ಷಣೆ

ಜೇನು ನೊಣಗಳಿಂದ ರಕ್ಷಣೆ

ಜೇನು ನೊಣಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಹಲವೆಡೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ತಾತ್ಕಾಲಿಕ ಬ್ಯಾರಿಕೇಡ್‌, ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ಬೀ ಕೀಪಿಂಗ್‌ ಸಹಾಯಕರನ್ನು ನಿಯೋಜಿಸಲಾಗಿದೆ.

English summary
The annual Independence Day flower show at Lal bagh has pay 'floral' tribute to the Indian Armed Forces this year. Thousands of people visited the first day on Saturday and applauded the structures of flowers resembles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X