ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಲಾಲ್ ಬಾಗ್ ಪ್ರವೇಶ, ಪಾರ್ಕಿಂಗ್ ಶುಲ್ಕ ಏರಿಕೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 02; ತೋಟಗಾರಿಕಾ ಇಲಾಖೆ ಬೆಂಗಳೂರಿನ ಲಾಲ್ ಬಾಗ್ ಪ್ರವೇಶ, ವಾಹನ ನಿಲುಗಡೆ ಶುಲ್ಕವನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಫೆಬ್ರವರಿ 2ರ ಮಂಗಳವಾರದಿಂದಲೇ ಹೊಸ ಆದೇಶ ಜಾರಿಗೆ ಬಂದಿದೆ.

ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಜಿ. ಕುಸುಮಾ ಈ ಕುರಿತು ಮಾಹಿತಿ ನೀಡಿದ್ದಾರೆ. "ದೇಶದ ಇತರೆ ಉದ್ಯಾನಗಳಲ್ಲಿ ಪ್ರವೇಶ ಶುಲ್ಕ 50 ರೂ. ಇದೆ. ಆದರೆ, ಸಾರ್ವಜನಿಕರಿಗೆ ಹೊರೆಯಾಗದಂತೆ ಕೇವಲ 5 ರೂ. ಹೆಚ್ಚಿಸಲಾಗಿದೆ" ಎಂಮದುದ ಹೇಳಿದ್ದಾರೆ.

ಲಾಲ್ ಬಾಗ್‌ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದು ಲಾಲ್ ಬಾಗ್‌ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದು

Lal Bagh Entry And Vehicle Parking Fee Hiked

ಸಮಿತಿಯ ಸಭೆಯಲ್ಲಿ ಚರ್ಚಿಸಿ ಪ್ರವೇಶ ಶುಲ್ಕ, ವಾಹನ ನಿಲುಗಡೆ ಶುಲ್ಕವನ್ನು ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ. ಪರಿಷ್ಕೃತ ದರಗಳು ಮಂಗಳವಾರದಿಂದಲೇ ಜಾರಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ವಾತಂತ್ರೋತ್ಸವ; ಲಾಲ್ ಬಾಗ್ ಫ್ಲವರ್ ಶೋ ರದ್ದು ಸ್ವಾತಂತ್ರೋತ್ಸವ; ಲಾಲ್ ಬಾಗ್ ಫ್ಲವರ್ ಶೋ ರದ್ದು

ದರ ಎಷ್ಟಾಗಿದೆ? : ವಯಸ್ಕರು ಲಾಲ್ ಬಾಗ್‌ಗೆ ಭೇಟಿ ನೀಡಲು 25 ರೂ. ಪ್ರವೇಶ ಶುಲ್ಕವನ್ನು ನೀಡಬೇಕಿತ್ತು. ಅದನ್ನು ಈಗ 30 ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಬೆಂಗಳೂರಲ್ಲಿ ಸ್ಮಾರ್ಟ್‌ ಪಾರ್ಕಿಂಗ್ ವ್ಯವಸ್ಥೆ ಜಾರಿ; 10 ರಸ್ತೆಗಳು ಬೆಂಗಳೂರಲ್ಲಿ ಸ್ಮಾರ್ಟ್‌ ಪಾರ್ಕಿಂಗ್ ವ್ಯವಸ್ಥೆ ಜಾರಿ; 10 ರಸ್ತೆಗಳು

ಮಕ್ಕಳಿಗೆ ಉದ್ಯಾನಕ್ಕೆ ಪ್ರವೇಶ ಉಚಿತವಾಗಿತ್ತು. ಈಗ 6-12 ವರ್ಷದ ಮಕ್ಕಳಿಗೆ 10 ರೂ. ಮತ್ತು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ 30 ರೂ.ಪ್ರವೇಶ ದರವನ್ನು ನಿಗದಿ ಮಾಡಲಾಗಿದೆ.

ವಾಹನಗಳ ಪಾರ್ಕಿಂಗ್; ಲಾಲ್ ಬಾಗ್‌ನಲ್ಲಿ ವಾಹನಗಳ ಪ್ರವೇಶ ಶುಲ್ಕವನ್ನು ಸಹ 5 ರೂ. ಏರಿಕೆ ಮಾಡಲಾಗಿದೆ. ಮೂರು ಗಂಟೆಗಳ ಅವಧಿಗೆ ಈಗಿರುವ ದರಕ್ಕಿಂತ 5 ರೂ. ಹೆಚ್ಚು ಪಾವತಿ ಮಾಡಬೇಕು. ಮೂರು ಗಂಟೆಗಳ ಬಳಿಕ ಪ್ರತಿ ಗಂಟೆಗೆ 5 ರಿಂದ 25 ರೂ. ತನಕ ದರವನ್ನು ಹೆಚ್ಚಳ ಮಾಡಲಾಗಿದೆ.

Recommended Video

Union Budget 2021 : ಆರೋಗ್ಯ ಕೇಂದ್ರದಲ್ಲಿ ಸಾಕಷ್ಟು ಬದಲಾವಣೆ! | Oneindia Kannada

ಪ್ರತಿವರ್ಷ ಲಾಲ್ ಬಾಗ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನ ಇರುತ್ತಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಈ ಬಾರಿ ಫಲಪುಷ್ಪ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.

English summary
Horticulture department of Karnataka hiked Lak Bagh entry and vehicle parking fee. New fee in effect from February 2, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X