ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮ್ಮ ವಿರುದ್ಧದ ಟೀಕೆಗಳಿಗೆ ತಕ್ಕ ಉತ್ತರ ಕೊಟ್ಟ ಲಕ್ಷ್ಮಣ ಸವದಿ

|
Google Oneindia Kannada News

ಬೆಂಗಳೂರು, ಆಗಸ್ಟ್ 28: ತಮ್ಮ ವಿರುದ್ಧ ಟೀಕೆಗಳಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ನಾನ್ಯಾಕೆ ಬೇರೆಯವರಿಂದ ಉಪದೇಶ ಮಾಡಿಸಿಕೊಳ್ಳಬೇಕು ಅಂತಹ ಅಗತ್ಯ ನನಗಿಲ್ಲ ಎಂದು ಸವದಿ ಹೇಳಿದ್ದಾರೆ.

ಈಗಾಗಲೇ ಶಾಸಕರೂ ಅಲ್ಲದ ಲಕ್ಷ್ಮಣ ಸವದಿಗೇಕೆ ಸಚಿವ ಸ್ಥಾನ ನೀಡಿದ್ದಾರೆ ಎನ್ನುವ ಪ್ರಶ್ನೆ ಹರಿದಾಡುತ್ತಿರುವ ಸಂದರ್ಭದಲ್ಲಿ ಹಲವು ಪ್ರಶ್ನೆಗಳಿಗೆ ಸವದಿ ಉತ್ತರ ನೀಡಿದ್ದಾರೆ. ವಿಧಾನಸೌಧದಲ್ಲಿ ಅದ್ದೂರಿ ಪೂಜೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದ್ದೂರಿ ಏನು ಮಾಡಿದ್ದೀವಿ.

ಲಕ್ಷ್ಮಣ ಸವದಿಗೆ ಯಾಕೆ ಡಿಸಿಎಂ ಹುದ್ದೆ ಕೊಟ್ರು, ಕಾರಣ ಬಹಿರಂಗಲಕ್ಷ್ಮಣ ಸವದಿಗೆ ಯಾಕೆ ಡಿಸಿಎಂ ಹುದ್ದೆ ಕೊಟ್ರು, ಕಾರಣ ಬಹಿರಂಗ

ನೂರು, ನೂರೈವತ್ತು ಜನ ಬೆಂಬಲಿಗರು ಬಂದಿದ್ದಾರೆ, ಅವರಿಗೆ ಊಟ ಕೊಟ್ಟಿದ್ದೇವೆ ಅಷ್ಟೇ. ಇದರಲ್ಲಿ ಅದ್ದೂರಿ ಏನಿದೆ ಅದ್ದೂರಿ ಪದದ ಬಗ್ಗೆ ನನಗೆ ಅರ್ಥ ಬೇಕಿದೆ ಎಂದು ಪ್ರಶ್ನಿಸಿದರು.

Lakshman Savadi Who Correctly Answered The Criticism Against Her

ನನ್ನ ಊರಿನಲ್ಲಿ ಕೂಡ ಪ್ರವಾಹ ಎದುರಾಗಿದೆ. ನಮ್ಮ ಮನೆ, ಜಮೀನು ಕೂಡ ಮುಳಗಡೆಯಾಗಿದೆ. ಹತ್ತು ದಿನ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದೇವೆ. ಯಾರಿಂದಲೋ ಉಪದೇಶ ಮಾಡಿಸಿಕೊಳ್ಳುವ ಗತಿ ಇನ್ನು ಬಂದಿಲ್ಲ ಎಂದು ಹೇಳಿದರು.

ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ದೂರದ ಊರುಗಳಿಗೆ ತೆರಳುವವರಿಗೆ ಬಸ್ ಅನುಕೂಲ ಮಾಡಲಾಗಿದೆ. ಹೆಚ್ಚುವರಿ ಹಾಗೂ ವಿಶೇಷ ಬಸ್​​ಗಳನ್ನು ವ್ಯವಸ್ಥೆ ಮಾಡಿದ್ದೇವೆ. ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಮಾಹಿತಿ ನೀಡಿದರು.

ಬಸ್​ಗಳ ಟಿಕೆಟ್ ದರ ಅಷ್ಟೇನೂ ಹೆಚ್ಚಿಸಿಲ್ಲ. ಬಹಳಷ್ಟು ಹೆಚ್ಚಿಸಿಲ್ಲ. ಟಿಕೆಟ್ ದರ ಹೆಚ್ಚಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ನಾಳೆ ಅಧಿಕಾರಿಗಳ ಸಭೆ ಕರೆದಿದ್ದೇನೆ ಬಸ್ ದರ ಹೆಚ್ಚಳಕ್ಕೆ ಕಡಿವಾಣ ಬೀರಲಿದೆ ಎಂದರು.

English summary
Deputy Chief Minister Lakshman Savadi has responded to the criticism against Him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X