ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಕೀಲರಿಂದ ನಾಟಕ ಪ್ರದರ್ಶನ, ಬಂದ ಹಣ ಕೊಡಗು ಸಂತ್ರಸ್ತರಿಗೆ

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್ 22: ಸದಾ ಗಂಭೀರ ಮುಖಭಾವದ, ಕೋರ್ಟು, ಕಟ್ಟಳೆಗಳ ಜಂಜಾಟದಲ್ಲಿ ಪ್ರತಿದಿನ ದೂಡುವ ವಕೀಲರು ಹೊಸದೊಂದು ಪ್ರಯೋಗಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.

ನಗರದ ಲಹರಿ ವಕೀಲರ ವೇದಿಕೆಯಿಂದ ಆಗಸ್ಟ್ 24-25 ರಂದು ಎರಡು ದಿನಗಳ ಏಕಾಂಕ ನಾಟಕ ಸ್ಪರ್ಧೆಯನ್ನು ನಗರದ ರವಿಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ಮುನಿ, ಮಂದಾಕಿನಿ ಹೊಯ್ದಾಟದ ಬದುಕು ತೆರೆದಿಡುವ ಮೋಕ್ಷ-ಮೌನಿ ಮುನಿ, ಮಂದಾಕಿನಿ ಹೊಯ್ದಾಟದ ಬದುಕು ತೆರೆದಿಡುವ ಮೋಕ್ಷ-ಮೌನಿ

ರಾಜ್ಯದ ವಿವಿಧ ಭಾಗಗಳಿಂದ ವಕೀಲರನ್ನು ಸೇರಿಸಿ ಏಕಾಂಕ ನಾಟಕಗಳ ಸ್ಪರ್ದೆಯನ್ನು ಏರ್ಪಡಿಸುವ ಮೂಲಕ ಲಹರಿ ವಕೀಲರ ವೇದಿಕೆ ರಂಗ ಭೂಮಿಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

Lahari lawyers association conducting Drama compilation in Bengaluru

ಎರಡು ದಿನಗಳ ಕಾಲ ನಡೆಯುವ ಲಹರಿ ಲಾಯರ್ಸ್ ಆಕ್ಟ್ -2018 ನಾಟಕ ಪ್ರದರ್ಶನವು ಇದೇ ಅಗಸ್ಟ್‌ 24 ರಂದು ಉದ್ಘಾಟನೆಗೊಳ್ಳಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಶ್ರೀ ಉದಯ ಹೊಳ್ಳ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ರಂಗಮಂದಿರ ಸೇರಿ ಹಲವು ಬೇಡಿಕೆ ಈಡೇರಿಕೆಗೆ ಸಚಿವೆ ಜಯಮಾಲಾಗೆ ಮನವಿರಂಗಮಂದಿರ ಸೇರಿ ಹಲವು ಬೇಡಿಕೆ ಈಡೇರಿಕೆಗೆ ಸಚಿವೆ ಜಯಮಾಲಾಗೆ ಮನವಿ

ಧಾರವಾಡ, ಶಿವಮೊಗ್ಗ, ದಾವರಣಗೆರೆ, ಮೈಸೂರು ಹಾಗೂ ಬೆಂಗಳೂರಿನ ಐದು ತಂಡಗಳ ನಡುವೆ ಮೊದಲ ಸ್ಥಾನಕ್ಕೆ ಪೈಪೋಟಿ ನಡೆಯಲಿದೆ. ವಿಜೇತರಾಗುವ ಮೊದಲ ತಂಡ ರೂ. 75 ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕವನ್ನು ನೀಡಲಾಗುತ್ತಿದೆ.

ನಾಟಕ ನೋಡಿ, ಕೇರಳ, ಕೊಡಗು ಪ್ರವಾಹಕ್ಕೆ ದೇಣಿಗೆ ನೀಡಿ ನಾಟಕ ನೋಡಿ, ಕೇರಳ, ಕೊಡಗು ಪ್ರವಾಹಕ್ಕೆ ದೇಣಿಗೆ ನೀಡಿ

ದ್ವಿತೀಯ ಬಹುಮಾನವಾಗಿ ರೂ.50 ಸಾವಿರ ನಗದು ಹಾಗೂ ಪಾರಿತೋಷಕ ಮತ್ತು ತೃತೀಯ ಬಹುಮಾನವಾಗಿ ರೂ. 25 ಸಾವಿರ ನಗದು ಮತ್ತು ಪಾರಿತೋಷಕ ನೀಡಲಾಗುವುದು. ಅಲ್ಲದೇ, ಅತ್ಯುತ್ತಮ ನಿರ್ದೇಶನಕ್ಕೆ ರೂ. 10 ಸಾವಿರ. ಅತ್ಯುತ್ತಮ ನಟ/ನಟಿ, ಅತ್ಯುತ್ತಮ ರಂಗಪರಿಕರ ಮತ್ತು ರಂಗ ಸಜ್ಜಿಕೆ, ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕೆ ತಲಾ ರೂ. 5 ಸಾವಿರ ನಗದು ಮತ್ತು ಪಾರಿತೋಷಕ ನೀಡಲಾಗುವುದು ಎಂದು ಲಹರಿ ವಕೀಲರ ವೇದಿಕೆಯ ಅಧ್ಯಕ್ಷೆ ಪಿ.ಅನು ಚೆಂಗಪ್ಪ ತಿಳಿಸಿದ್ದಾರೆ.

ನಾಟಕ ವಿಕ್ಷಣೆಗೆ ರೂ.50 ಪ್ರವೇಶದರವನ್ನು ನಿಗದಿಪಡಿಸಲಾಗಿದ್ದು ಸಂಗ್ರಹವಾಗುವ ಸಂಪೂರ್ಣ ಹಣವನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಲು ಲಹರಿ ವಕೀಲರ ವೇದಿಕೆ ನಿರ್ಧರಿಸಿದೆ ಎಂದು ವೇದಿಕೆಯ ಸಂಚಾಲಕ ಶ್ರೀಕಾಂತ ಪಾಟೀಲ ತಿಳಿಸಿದ್ದಾರೆ.

English summary
Lahari Lawyers association conducting Drama computation for lawyers from August 24 and 25 in Bengaluru's Ravindra Kalakshetra. Specialty of the computation is only lawyers were acting in the dramas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X