ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಆಟೋ ಚಾಲಕನಿಗೆ ಮಹಿಳೆಯಿಂದ 'ಡಾಲರ್' ಮೋಸ ಏನದು?

|
Google Oneindia Kannada News

Recommended Video

ಬೆಂಗಳೂರಿನಲ್ಲಿ ವಿದೇಶಿ ಕರೆನ್ಸಿ ಕೊಟ್ಟು ಆಟೋ ಚಾಲಕನಿಗೆ ಮೋಸ ಮಾಡಿದ ವಿದೇಶಿ ಮಹಿಳೆ | Oneindia Kannada

ಬೆಂಗಳೂರು, ನವೆಂಬರ್ 15: ಬೆಂಗಳೂರಿಗೆ ದೇಶ-ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಆಟೋ ಚಾಲಕರು ಮೋಸವೆಸಗಿದ್ದಾರೆ ಎಂಬ ಸುದ್ದಿ ಸರ್ವೇ ಸಾಮಾನ್ಯ ಅದರಲ್ಲೂ ವಿದೇಶಿ ಪ್ರಯಾಣಿಕರಿಗೆ ಆಟೋ ಚಾಲಕರು ವಂಚಿಸುತ್ತಾರೆ ಎಂಬ ದೂರು ಆಗಾಗ ಕೇಳಿಬರುತ್ತದೆ.

ಎನ್‌ಆರ್‌ಐ ಯುವತಿಯೊಬ್ಬಳು ಆಟೋ ಚಾಲಕನನ್ನೇ ವಂಚಿಸಿದ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಸರಿ ಸಮುಆರು 2 ಲಕ್ಷ ರೂ ಹಣ ಪಡೆದು ಡಾಲರ್ ವೆಚ್ಚದಲ್ಲಿ ವಾಪಸ್ ಕೊಡುವುದಾಗಿ ಹೇಳಿ ಯುವತಿ ಚಾಲಕನನ್ನು ವಂಚಿಸಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

346 ಅಂಶ ನೆಲ ಕಚ್ಚಿದ ಸೆನ್ಸೆಕ್ಸ್, 103 ಅಂಶ ಇಳಿಕೆ ದಾಖಲಿಸಿದ ನಿಫ್ಟಿ 346 ಅಂಶ ನೆಲ ಕಚ್ಚಿದ ಸೆನ್ಸೆಕ್ಸ್, 103 ಅಂಶ ಇಳಿಕೆ ದಾಖಲಿಸಿದ ನಿಫ್ಟಿ

ಮೋಸಕ್ಕೊಳಗಾದ ಸುಂಕದ ಕಟ್ಟೆಯ ಆಟೋ ಚಾಲಕ ಕೃಷ್ಣೇ ಗೌಡ ಎಂಬ 52 ವರ್ಷದ ಆಟೋ ಚಾಲಕ ದೂರು ದಾಖಲಿಸಿದ್ದಾರೆ.

Lady cheats auto driver paying dollar instead of rupees!

ಪ್ರಕರಣದ ಹಿನ್ನೆಲೆ: ಕೆಳ ದಿನಗಳ ಹಿಂದೆ ಬೆಂಗಳೂರಿನ ಕೆಆರ್ ಮಾರುಕಟ್ಟೆ ಹತ್ತಿರ ಪ್ರಯಾಣಿಕರಿಗಾಗಿ ಕಾದು ನಿಂತಿದ್ದ ಕೃಷ್ಣೇಗೌಡ ಅವರ ಆಟೋಗೆ 30 ವರ್ಷದ ಮಹಿಳೆಯೊಬ್ಬರು ವಿವೇಕನಗರಕ್ಕೆ ಡ್ರಾಪ್ ಮಾಡುವಂತೆ ಆಟೋ ಏರಿದರು. ಆ ಮಹಿಳೆಯನ್ನು ವಿವೇಕನಗರದ ಹತ್ತಿರ ಕರೆದೊಯ್ದು ಬಿಡುತ್ತಲೇ ಹಿಂದಿಯಲ್ಲಿ ಮಾತನಾಡುತ್ತಿದ್ದ ಯುವತಿ ಆಟೋ ಶುಲ್ಕವನ್ನು ಕೊಡುವಂತೆ ಕೇಳಿದಾಗ 20 ಡಾಲರ್ ನೋಟನ್ನು ನೀಡಿದ್ದರು ಇದರಿಂದ ಗಾಬರಿಗೊಂಡ ಆಟೋ ಚಾಲಕ ಬೆಂಗಳೂರಿನಲ್ಲೇ ಡಾಲರ್‌ನಲ್ಲಿ ಹಣ ಸ್ವೀಕರಿಸಲಾಗುವುದಿಲ್ಲ, ಆಟೋ ಶುಲ್ಕವನ್ನು ರೂಪಾಯಿಯಲ್ಲೇ ನೀಡುವಂತೆ ಕೇಳಿದ.

ರುಪಾಯಿಯಲ್ಲಿ ಹಣ ಪಾವತಿ ಸ್ವೀಕರಿಸಲು ತೈಲ ಕಂಪನಿಗಳಿಗೆ ಮೋದಿ ಮನವಿ ರುಪಾಯಿಯಲ್ಲಿ ಹಣ ಪಾವತಿ ಸ್ವೀಕರಿಸಲು ತೈಲ ಕಂಪನಿಗಳಿಗೆ ಮೋದಿ ಮನವಿ

ಆಗ ತನ್ನ ಬಳಿ ಡಾಲರ್ ಗಳೇ ಇದ್ದು ರೂಪಾಯಿ ಇಲ್ಲ ಎಂದು ಮಹಿಳೆ ಅಸಹಾಯಕತೆ ತೋಡಿಕೊಂಡರು ಆಗ ಡಾಲರ್‌ನ್ನು ವಿದೇಶಿ ವಿನಿಮಯ ಮಾಡಿಕೊಳ್ಳಲು ಎಂಜಿ ರಸ್ತೆಯಲ್ಲಿ ಅವಕಾಶವಿದೆ ಎಂದು ಆಟೋ ಚಾಲಕ ಹೇಳಿದಾಗ ಆತನನ್ನು ಎಂಜಿರಸ್ತೆಯಲ್ಲಿ ಕರೆನ್ಸಿ ವಿನಿಮಯ ಕಚೇರಿಗೆ ತೆರಳಿದ ಮಹಿಳೆ ಅಲ್ಲಿ ಡಾಲರ್ ಕೊಟ್ಟು ರೂಪಾಯಿ ಮೊತ್ತದಲ್ಲಿ ಹಣ ಪಡೆದು ಆಟೋ ಶುಲ್ಕವಾಗಿ 350 ರೂ ನೀಡಿದ್ದರು.

ಕುಸಿಯುತ್ತಿರುವ ರೂಪಾಯಿ, ಮತ್ತೆ ಆಮದು ಸುಂಕ ಹೆಚ್ಚಿಸಿದ ಕೇಂದ್ರ ಕುಸಿಯುತ್ತಿರುವ ರೂಪಾಯಿ, ಮತ್ತೆ ಆಮದು ಸುಂಕ ಹೆಚ್ಚಿಸಿದ ಕೇಂದ್ರ

ಅಲ್ಲಿಂದ ವಾಪಸ್ ವಿವೇಕಾನಂದ ನಗರದ ಹತ್ತಿರ ವಾಪಸ್ ಬಿಡುವಾಗ ತನ್ನ ನೋವನ್ನು ತೋಡಿಕೊಂಡಿದ್ದ ಮಹಿಳೆ ತನ್ನ ಬಳಿ ಡಾಲರ್‌ಗಳು ಇದ್ದು ರೂಪಾಯಿಯಾಯಿ ಪರಿವರ್ತಿಸಿಕೊಳ್ಳುವಂತೆ ಮನವಿ ಮಾಡಿದ್ದಳು, ಆಟೋ ಚಾಲಕ ಒಪ್ಪಿಕೊಂಡಿದ್ದ, ಬಳಿಕ ಮಹಿಳೆ ತನಗೆ ತುರ್ತಾಗಿ 2 ಲಕ್ಷ ಹಣ ಬೇಕಾಗಿದೆ ಹೇಗಾದರೂ ಮಾಡಿ ಹೊಂದಿಸಿಕೊಡಿ ಬದಲಿಗೆ 4 ಲಕ್ಷ ಡಾಲರ್ ನೀಡುತ್ತೇನೆ ಎಂದು ಹೇಳಿದ್ದಾರೆ.

ಅದಕ್ಕೆ ಒಪ್ಪಿಕೊಂಡ ಚಾಲಕ ಅವರು ಹೇಳಿದ ಜಾಗಕ್ಕೆ ಕಷ್ಟ ಪಟ್ಟು ಹಣ ಹೊಂದಿಸಿಕೊಂಡು ತಂದಿದ್ದರು ಆಕೆಯು ಹಣವನ್ನು ತರಲು ಇಬ್ಬರು ಹುಡುಗರನ್ನು ಕಳುಹಿಸಿದ್ದಳು. ಅವರು ಡಾಲರ್ ಇದೆ ಎಂದು ಖಾಲಿ ಬ್ಯಾಗ್ ಕೊಟ್ಟು ಎರಡು ಲಕ್ಷ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದೀಗ ಸುತ್ತಮುತ್ತಲಿನಲ್ಲಿರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳ ಹುಡುಕಾಟದಲ್ಲಿದ್ದಾರೆ.

English summary
Auto driver has cheated Rs2 lakhs by a lady who was promised to pay in dollar worth of ₹4 lakhs in return. Vivekanagara police have investigating the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X