ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು:ವೃಷಭಾವತಿ ಕಾಲುವೆ ಮಣ್ಣು ಕುಸಿದು ಕಾರ್ಮಿಕ ಸಾವು

|
Google Oneindia Kannada News

ಬೆಂಗಳೂರು,ಫೆಬ್ರವರಿ 25: ಕೆಂಗೇರಿಯ ವೃಷಭಾವತಿ ನದಿ ಸಮೀಪ ಕಾಮಗಾರಿ ಸಂದರ್ಭದಲ್ಲಿ ಮಣ್ಣು ಕುಸಿದು ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತ ಕಾರ್ಮಿಕನನ್ನು ಪಶ್ಚಿಮ ಬಂಗಾಳ ಮೂಲದ 21 ವರ್ಷದ ಚಂಚಲ್ ಬುರ್ಮಾನ್ ಎಂದು ಗುರುತಿಸಲಾಗಿದೆ. ವಾಸ್ತು ಪ್ರಾಪರ್ಟೀಸ್ ಸಂಸ್ಥೆಯ ಕಾರ್ಮಿಕನಾದ ಚಂಚಲ್, ಕೆಂಗೇರಿಯ ವೃಷಭಾವತಿ ಕಾಲುವೆಗೆ ತಡೆಗೋಡೆ ನಿರ್ಮಿಸಲು ಗುಂಡಿ‌ ಅಗೆಯುತ್ತಿದ್ದ ವೇಳೆ ಮೈ ಮೇಲೆ ಮಣ್ಣು ಕುಸಿದು ಮೃತಪಟ್ಟಿದ್ದಾರೆ.

ಹಿಮಾಚಲಪ್ರದೇಶದಲ್ಲಿ ಭೂಕುಸಿತ, ವಾಹನಗಳ ಸಂಚಾರ ಸ್ಥಗಿತಹಿಮಾಚಲಪ್ರದೇಶದಲ್ಲಿ ಭೂಕುಸಿತ, ವಾಹನಗಳ ಸಂಚಾರ ಸ್ಥಗಿತ

ಈ ಕಾಮಗಾರಿ ಸಬ್ ಕಾಂಟ್ರಾಕ್ಟ್ ಅನ್ನು ಗಣೇಶ್ ಎಂಬಾತ ಗುತ್ತಿಗೆ ಪಡೆದಿದ್ದ. ಗಣೇಶ್ ಪಶ್ಚಿಮ ಬಂಗಾಳದಿಂದ ಕಾರ್ಮಿಕರನ್ನು ಕರೆತಂದು ಬೆಂಗಳೂರಿನಲ್ಲಿ ಕೆಲಸ ಮಾಡಿಸುತ್ತಿದ್ದ. ಆತನ ವಿರುದ್ಧ ನಿರ್ಲಕ್ಷ್ಯತನದ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಕೆಂಗೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Labor Died After Landslide Near Vrishabhavathi River In Kengeri

ಬೆಂಗಳೂರಿನ ವೃಷಭಾವತಿ ಕಾಲುವೆ ಕಾಮಗಾರಿಯ ಸಂದರ್ಭದಲ್ಲಿ ಮಣ್ಣು ಕುಸಿದು ಕಾರ್ಮಿಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರಂತ ಘಟನೆ ಇಂದು ನಡೆದಿದೆ. ಕೆಂಗೇರಿಯ ವೃಷಭಾವತಿ ಕಾಲುವೆ ಕಾಮಗಾರಿ ವೇಳೆ ಅವಘಡ ನಡೆದಿದ್ದು, 21 ವರ್ಷದ ಚಂಚಲ್ ಬುರ್ಮಾನ್ ಎಂಬ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಾಸ್ತು ಪ್ರಾಪರ್ಟೀಸ್ ಸಂಸ್ಥೆಯಿಂದ ಕೆಲಸಕ್ಕೆ ಬಂದಿದ್ದ ಕಾರ್ಮಿಕ ಚಂಚಲ್ ಇಂದು ವೃಷಭಾವತಿ ಕಾಲುವೆ ಬಳಿ ಗುಂಡಿ‌ ಅಗೆಯುತ್ತಿದ್ದ ವೇಳೆ ಮೈ ಮೇಲೆ ಮಣ್ಣು ಕುಸಿದು ಸಾವನ್ನಪ್ಪಿದ್ದಾರೆ. ಚಂಚಲ್ ಮೇಲೆ ಮಣ್ಣಿನ ರಾಶಿ ಕುಸಿದು, ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

Recommended Video

ಮಾರ್ಚ್ 1ರಿಂದ ಮೂರನೇ ಹಂತದ ಕೋವಿಡ್ ಲಸಿಕೆ ವಿತರಣೆ | Oneindia Kannada

ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. IPC 304(A) ಅಡಿ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಾಸ್ತು ಪ್ರಾಪರ್ಟೀಸ್​ನಿಂದ ವೃಷಭಾವತಿ ಕಾಲುವೆಗೆ ಅವರ ಜಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

English summary
Labor Died In Bengaluru After Landslide Near Vrishabhavathi River In Kengeri On February 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X