ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: 25 ಅಡಿ ಆಳದ ಶೌಚ ಗುಂಡಿಗೆ ಇಳಿದಿದ್ದ ಕಾರ್ಮಿಕ ಸಾವು

|
Google Oneindia Kannada News

ಬೆಂಗಳೂರು, ಜನವರಿ 26: ಕೈಗವಸು, ಮಾಸ್ಕ್‌ ಇಲ್ಲದೆ ಶೌಚಗುಂಡಿಯಲ್ಲಿ ಇಳಿದಿದ್ದ ಕಾರ್ಮಿಕ ಮೃತಪಟ್ಟಿದ್ದಾರೆ.

ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ವೇತಾಂಬರ್ ಸ್ಥಾನಕ್ಕಾಗಿ ವಾಸಿ ಬಾವೀಸ್ ಸಂಪ್ರದಾಯ್ ಜೈನ್ ಸಂಘದ ಆವರಣದಲ್ಲಿರುವ ಗುಂಡಿಯಲ್ಲಿ ಶನಿವಾರ ಮಧ್ಯಾಹ್ನ ಸುಮಾರು 1.30ಕ್ಕೆ ಈ ಘಟನೆ ನಡೆದಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಘೋಷ್ವಾಲ ಗ್ರಾಮದ ನಾರಾಯಣ ಅವರ ಪುತ್ರ ಸಿದ್ದಪ್ಪ(18) ಮೃತಪಟ್ಟಿದ್ದು, ಅವರನ್ನು ಕರೆದುಕೊಂಡು ಹೋಗಿದ್ದ ಮೇಸ್ತ್ರಿ ಮುನಿಯಪ್ಪ ತೀವ್ರ ನಿಗಾ ಘಟಕದಲ್ಲಿದ್ದಾರೆ.

ಬೆಂಗಳೂರು: ಶೌಚಗುಂಡಿ ಸ್ವಚ್ಛತೆಗೆ 25 ಜೆಟ್ಟಿಂಗ್ ಯಂತ್ರ ಖರೀದಿ ಬೆಂಗಳೂರು: ಶೌಚಗುಂಡಿ ಸ್ವಚ್ಛತೆಗೆ 25 ಜೆಟ್ಟಿಂಗ್ ಯಂತ್ರ ಖರೀದಿ

ಶೌಚಗುಂಡಿ, ಒಳಚರಂಡಿ, ತೆರೆದು ಗುಂಡಿ, ಗಟಾರಗಳನ್ನು ಬರಿಗೈನಿಂದ ಸ್ವಚ್ಛ ಮಾಡುವ ಅಮಾನವೀಯ ಪದ್ಧತಿಯನ್ನು ಮಲಹೊರುವ ಪದ್ಧತಿ ಕಾಯ್ದೆಯಡಿ ನಿಷೇಧಿಸಲಾಗಿದೆ.

Labor Death In A Manhole

ಇಂಥ ಕೆಲಸವನ್ನು ಸಕಿಂಗ್ ಮೆಷಿನ್‌ಗಳ ಮೂಲಕ ಮಾಡುವಂತೆ ಸೂಚಿಸಲಾಗಿದೆ. ಆದರೂ, ಈ ಕೆಲಸಗಳನ್ನು ಕಾರ್ಮಿಕರಿಂದ ಮೂಡಿಸುವ ಮೂಲಕ ಕಾಯ್ದೆಯಲ್ಲಿರುವ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ದೂರಲಾಗಿದೆ.

ಯುವಕ 650 ರೂ. ನೀಡುತ್ತಾರೆ ಎಂದು 25 ಅಡಿಗೂ ಆಳದ ಶೌಗುಂಡಿ ಸ್ವಚ್ಛತೆಗೆ ಇಳಿದು ಉಸಿರುಗಟ್ಟಿ ಮೃತಪಪಟ್ಟಿದ್ದಾರೆ.

ಕೆಲವು ಮಂದಿ ಮುನಿಯಪ್ಪ ಹೇಳುತ್ತಿದ್ದ ಕಟ್ಟಡ ನಿರ್ಮಾಣದ ಕೆಲಸಗಳಿಗೆ ಹೋಗುತ್ತಿದ್ದೆವು. ಸಿದ್ದಪ್ಪ ನನ್ನ ಕೊನೆಯ ತಮ್ಮ, ನಾಲ್ಕೈದು ವರ್ಷಗಳಿಂದ ಕೂಲಿ ಕೆಲಸ ಮಾಡಲು ಹೋಗುತ್ತಿದ್ದಾನೆ. ಕೆಲಸವಿದೆ ಎಂದು ಮೇಸ್ತ್ರಿ ಶನಿವಾರ ಬೆಳಗ್ಗೆ ಕರೆದುಕೊಂಡು ಹೋಗಿದ್ದರು. ನಮಗೆ 30 ಸಾವಿರ ರೂ. ನೀಡುವುದು ಬಾಕಿ ಇತ್ತು.

ಈ ದಿನದ ಕೆಲಸ ಮುಗಿದ ಮೇಲೆ ಅದನ್ನು ಕೊಡುವುದಾಗಿ ಹೇಳಿದ್ದರು. ಆತನ ಮಾತು ನಂಬಿ ಸಿದ್ದಪ್ಪ ಅವರ ಜೊತೆಗೆ ಹೋಗಿದ್ದ ಎಂದು ಸಿದ್ದಪ್ಪ ಅವರ ಅಕ್ಕ ತಿಳಿಸಿದ್ದಾರೆ.

English summary
Manhole landing worker without gloves and mask has died In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X