• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಲ್ಲೇಶ್ವರ ಕೇಂದ್ರೀಯ ವಿದ್ಯಾಲಯದಲ್ಲಿ 2 ಪಾಳಿ ತರಗತಿ: ಪೋಷಕರು ಗರಂ

By Nayana
|

ಬೆಂಗಳೂರು, ಜು.20: ಮಲ್ಲೇಶ್ವರದ ಕೇಂದ್ರೀಯ ವಿದ್ಯಾಲಯದಲ್ಲಿ ಜು.19ರಿಂದ ಎರಡು ಪಾಳಿ ತರಗತಿಗಳನ್ನು ಆರಂಭಿಸಲಾಗಿದ್ದು, ಪೋಷಕರ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಮುಂಜಾನೆಯೇ ಮಕ್ಕಳನ್ನು ಕಳುಹಿಸುವುದು ಹೇಗೆ ಎಂಬ ಆತಂಕ ಪೋಷಕರಲ್ಲಿ ಮೂಡಿದೆ. ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯದಲ್ಲಿ ಸದ್ಯ 1-12ನೇ ತರಗತಿವರೆಗೆ ಬೋಧಿಸಲಾಗುತ್ತಿದೆ. ಸುಮಾರು 1,800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯದಲ್ಲಿ ಪಾಳಿ ತರಗತಿ: ವಿರೋಧ

ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ದೇಶಾದ್ಯಂತ ಒಟ್ಟಾರೆ ನಾಲ್ಕು ಕೇಂದ್ರೀಯ ವಿದ್ಯಾಲಯಗಳಲ್ಲಿ ಎರಡು ಪಾಳಿಯಲ್ಲಿ ತರಗತಿಗಳನ್ನು ನಡೆಸಲು ಅನುಮತಿ ನೀಡಿದೆ.

ಅದರಲ್ಲಿ ರಾಜ್ಯದಿಂದ ಮಲ್ಲೇಶ್ವರ ಕೇಂದ್ರೀಯ ವಿದ್ಯಾಲಯ ಕೂಡ ಆಯ್ಕೆಯಾಗಿತ್ತು.ಅದರಂತೆ ಗುರುವಾರದಿಂದ ಎರಡು ಪಾಳಿಯಲ್ಲಿ ಈ ಶಾಲೆ ಕಾರ್ಯ ನಿರ್ವಹಿಸಿದೆ. ಎರಡು ಪಾಳಿಗಳನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಈಗ ಶಾಲೆಯ ಮೊದಲ 8.30ರಿಂದ ಮಧ್ಯಾಹ್ನ 2.40ರವರೆಗೂ ಕಾರ್ಯ ನಿರ್ವಹಿಸುತ್ತಿತ್ತು. ಎರಡು ಪಾಳಿ ಜಾರಿ ಹಿನ್ನೆಲೆಯಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 12.45ರವರೆಗೂ ನಡೆಯಲಿದೆ.

ಪ್ರಸ್ತುತ 1ರಿಂದ 12 ನೇ ತರಗತಿಯವರೆಗೆ ಮೊದಲ ಪಾಳಿಯಲ್ಲಿ 1836 ವಿದ್ಯಾರ್ಥಿಗಳು ಹಾಗೂ ಎರಡನೇ ಪಾಳಿಯಲ್ಲಿ 632 ವ್ಯಾಸಂಗ ಮಾಡುತ್ತಿದ್ದಾರೆ. ಮಲ್ಲೇಶ್ವರಕ್ಕೆ ಕೇಂದ್ರೀಯ ವಿದ್ಯಾಲಯಕ್ಕೆ ಈ ಬಾರಿ ಪ್ರವೇಶ ಬಯಸಿ 3634 ಅರ್ಜಿ ಸಲ್ಲಿಕೆಯಾಗಿದ್ದವು. ಈ ಪೈಕಿ 632ಕ್ಕೆ ಮಾತ್ರ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.

ಬೆಳಗ್ಗೆ 6.55ರೊಳಗೆ ಶಾಲೆ ಆವರಣ ತಲುಪಬೇಕಾಗುತ್ತದೆ. ಬೆಳಗ್ಗೆ 8.30ರಿಂದ ಇಪ್ಪತ್ತು ನಿಮಿಷಗಳ ಮಧ್ಯಂತರ ಅವಧಿ ನೀಡಲಾಗುತ್ತದೆ. ತಿಂಡಿಗೆ ಬೆಳಗ್ಗೆ 10.35ರಿಂದ ಹತ್ತು ನಿಮಿಷ ಮಾತ್ರ ಕಾಲಾವಕಾಶ ನೀಡಲಾಗುತ್ತದೆ. ಎರಡನೇ ಪಾಳಿಯ ವೇಳಾಪಟ್ಟಿ ಮಧ್ಯಾಹ್ನ 12.30ರಿಂದ ಸಂಜೆ 6ರವರೆಗೆ ಇರಲಿದೆ. ಮಧ್ಯಾಹ್ನ 2 ರಿಂದ ಇಪ್ಪತ್ತು ನಿಮಿಷ ಮಧ್ಯಂತರ ಅವಧಿ ಹಾಗೂ 4.05 ರಿಂದ ಹತ್ತು ನಿಮಿಷ ಮಧ್ಯಂತರ ಅವಧಿ ನಿಗದಿ ಮಾಡಲಾಗಿದೆ.

ಆದರೆ ಮಧ್ಯಾಹ್ನ ಊಟಕ್ಕೆ ಯಾವ ಸಮಯವೆಂದು ಸುತ್ತೋಲೆಯಲ್ಲಿ ನಮೂದಿಸಿಲ್ಲ. ಈ ಪಾಳಿಕೆ ಸೇರುವ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಹೊಸದಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆದಿದೆ. ಇದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ 6.55ಕ್ಕೆ ಮಕ್ಕಳನ್ನು ಬಿಡುವ ಕುರಿತು ಆತಂಕ ಪ್ರಾರಂಭವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Several parents who are sending their children to Kendriya Vidyalaya located in Malleswaram are upset with the school timings as the classes start at 7 am, for one of its two shifts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more