• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನವೆಂಬರ್ 1 ರಂದು 'ಕುವೆಂಪು ಸಮಗ್ರ' ಸಾಹಿತ್ಯ ಸರಣಿ ಪುಸ್ತಕಗಳ ಬಿಡುಗಡೆ

|

ಬೆಂಗಳೂರು, ಅಕ್ಟೋಬರ್ 31: ಕನ್ನಡ ವಿಶ್ವವಿದ್ಯಾಲಯ ಪ್ರಸಾರಾಂಗವು 'ಕುವೆಂಪು ಸಮಗ್ರ' ಎನ್ನುವ ಸಾಹಿತ್ಯ ಸರಣಿ ಪುಸ್ತಕಗಳು ಮತ್ತು ಡಿಜಿಟಲ್ ಆವೃತ್ತಿಯ(ಎಪಿಯುಬಿ ಪುಸ್ತಕ) ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದೆ.

ಸಮಾರಂಭವು ನವೆಂಬರ್ 1 ರಂದು ಸಂಜೆ 4.30ಕ್ಕೆ ವಿಧಾನಸೌಧದ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಲಿದೆ.ಕುವೆಂಪು ಸಮಗ್ರ ಸಾಹಿತ್ಯ ಸರಣಿ ಪುಸ್ತಕಗಳನ್ನು ಉಪಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥನಾರಾಯಣ ಬಿಡುಗಡೆ ಮಾಡಲಿದ್ದಾರೆ.

ಅಧ್ಯಕ್ಷತೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ. ಸ.ಚಿ ರಮೇಶ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕರಿಸಿದ್ದಪ್ಪ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ ಪ್ರದೀಪ್, ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ. ಚಿದಾನಂದಗೌಡ, ಸಾಹಿತಿ ತಾರಿಣಿ ಚಿದಾನಂದ್ ಪಾಲ್ಗೊಳ್ಳಲಿದ್ದಾರೆ.

   Modi ಯಿಂದ ಭಾರತೀಯರಿಗೆ ಮತ್ತೊಂದು Gift | Oneindia Kannada

   ಕುವೆಂಪು ಸಾಹಿತ್ಯ ಸರಣಿ ಪುಸ್ತಕಗಳನ್ನು ಕುರಿತು ಸಾಹಿತಿ ಮಲ್ಲೇಪುರಂ ಜಿ ವೆಂಕಟೇಶ್ ಮಾತನಾಡಲಿದ್ದಾರೆ.

   English summary
   Kannada Vishwavidyalaya prasaranga Organised Kuvempu Samagra Sahitya Book Release Programme on November 1 at Vidhanasoudha.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X