ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್‌ಟಿ ಹೋರಾಟ: ಈಶ್ವರಪ್ಪ ವಿರುದ್ಧ ತಿರುಗಿ ಬಿದ್ದ ಕುರುಬ ನಾಯಕರು!

|
Google Oneindia Kannada News

ಬೆಂಗಳೂರು, ಡಿ. 11: ಕುರುಬ ಸಮುದಾಯವನ್ನು ಕೇಂದ್ರದ ಎಸ್‌ಟಿ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂಬ ಹೋರಾಟ ರಾಜ್ಯದಲ್ಲಿ ಶುರುವಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ಹೋರಾಟದ ನೇತೃತ್ವ ವಹಿಸಿಕೊಂಡಿದ್ದಾರೆ. ಈ ಕುರಿತು ಹಲವು ಸಭೆಗಳನ್ನೂ ಮಾಡಿರುವ ಈಶ್ವರಪ್ಪ ಅವರು ಕೇಂದ್ರ ಸರ್ಕಾರದ ಮಂತ್ರಿಗಳನ್ನು ಭೇಟಿ ಮಾಡಿ ಕುರುಬ ಸಮುದಾಯವನ್ನು ಕೇಂದ್ರದ ಎಸ್‌ಟಿ ಮೀಸಲಾತಿಯಡಿ ತರಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಇನ್ನು ಇದೇ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ಅವರ ಮಧ್ಯೆ ಮಾತಿನ ಜಟಾಪಟಿ ನಡೆಯುತ್ತಿದೆ. ತಾಯಿ ಮೇಲಾಣೆ ಸಿದ್ದರಾಮಯ್ಯ ಅವರನ್ನು ಸಮುದಾಯದ ಹೋರಾಟಕ್ಕೆ ಆಹ್ವಾನಿಸಿದ್ದೆ ಎಂದು ಈಶ್ವರಪ್ಪ ಅವರು ಹೇಳುತ್ತಿದ್ದಾರೆ. ಇಲ್ಲ ಈಶ್ವರಪ್ಪ ಸುಳ್ಳು ಹೇಳುತ್ತಿದ್ದಾನೆ ಎಂದು ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಪುತ್ರ, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಅವರ ನಿಲುವಿನ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಕುರುಬ ಸಮುದಾಯದ ಇತರ ಮುಖಂಡರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

ಈಶ್ವರಪ್ಪ ಹೋರಾಟ ಕೈಬಿಡಲಿ

ಈಶ್ವರಪ್ಪ ಹೋರಾಟ ಕೈಬಿಡಲಿ

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ವೈ. ಮೇಟಿ ಅವರು, ಈಶ್ವರಪ್ಪ ಸರ್ಕಾರದಲ್ಲಿದ್ದುಕೊಂಡೆ ಹೋರಾಟ ಮಾಡುವುದನ್ನು ಬಿಡಲಿ. ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಗೆ ಬರಲಿ. ಪಕ್ಷಾತೀತವಾಗಿ ಎಲ್ಲರೂ ಹೋರಾಟ ಮಾಡೋಣ. ಬಾಗಲಕೋಟೆಯಲ್ಲಿ ಎಸ್‌ಟಿ ಹೋರಾಟ ಸಮಾವೇಶ ಮಾಡಿದ್ದರು, ಆದರೆ ಅದು ಬಿಜೆಪಿ ಸಮಾವೇಶದಂತಿತ್ತು ಎಂದು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಹೋರಾಟದ ಪರ

ಸಿದ್ದರಾಮಯ್ಯ ಹೋರಾಟದ ಪರ

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕುರುಬ ಎಸ್‌ಟಿ ಹೋರಾಟದ ಪರವಾಗಿಲ್ಲ ಎಂಬ ಈಶ್ವರಪ್ಪ ಅವರ ಹೇಳಿಕೆಯನ್ನು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಳ್ಳಿ ಹಾಕಿದ್ದಾರೆ.


ಸಿದ್ದರಾಮಯ್ಯ ಅವರು ಕೂಡ ಎಸ್‌ಟಿ ಮೀಸಲಾತಿ ಪರ‌ ಇದ್ದಾರೆ. ಆದರೆ ಅವರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಮೊದಲು ಬಿಜೆಪಿ ಸರ್ಕಾರ ಎಸ್‌ಟಿ ಮಾಡಲಿ. ಸರ್ಕಾರದ ವಿರುದ್ಧ ಸಚಿವರೇ ಹೋರಾಟ ಮಾಡುತ್ತಿದ್ದಾರೆ. ಮೊದಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಿ. ಕುಲಶಾಸ್ತ್ರೀಯ ಅಧ್ಯಯನ‌ ವರದಿ ತೆಗೆದುಕೊಳ್ಳಲಿ. ಬೀದರ್, ಕಲಬುರಗಿ, ಯಾದಗಿರಿಯ ಜಿಲ್ಲೆಗಳಲ್ಲಿನ ರಾಜಗೊಂಡ ಸಮುದಾಯವನ್ನು ಮೊದಲು ಎಸ್‌ಟಿ ಸಮುದಾಯಕ್ಕೆ ಸೇರಿಸಿ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಎಷ್ಟು ಜನಕ್ಕೆ ಟಿಕೆಟ್ ಕೊಡಿಸಿದ್ದಾರೆ?

ಎಷ್ಟು ಜನಕ್ಕೆ ಟಿಕೆಟ್ ಕೊಡಿಸಿದ್ದಾರೆ?

ಬಿಜೆಪಿಯ ಕುಟಿಲ ರಾಜಕಾರಣಕ್ಕೆ ಬಲಿಯಾಗಬೇಡಿ. ಕುರುಬ ಸಮುದಾಯಕ್ಕೆ ಬಿಜೆಪಿ ಕೊಡುಗೆ ಏನು? ಎಷ್ಟು‌ ಜನರಿಗೆ ಈಶ್ವರಪ್ಪ ಅವರು ಬಿಜೆಪಿಯಲ್ಲಿ ಟಿಕೆಟ್ ಕೊಡಿಸಿದ್ದಾರೆ? ಹೇಳಿ ಈಶ್ವರಪ್ಪನವರೇ ಸಮಾಜಕ್ಕೆ ನಿಮ್ಮ ಕೊಡುಗೆ ಏನು ಎಂದು ಶಾಸಕ ಬೈರತಿ ಸುರೇಶ್ ಅವರು ಈಶ್ವರಪ್ಪ ಅವರನ್ನು ಪ್ರಶ್ನಿಸಿದ್ದಾರೆ. 8 ಜನ ಕುರುಬ ಶಾಸಕರು ಸಿದ್ದರಾಮಯ್ಯ ಅವರ ಕೊಡುಗೆ, ಮೂವರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿದ್ದರು. ನಿಮ್ಮ ಕೊಡುಗೆ ಏನು ಹೇಳಿ ಎಂದು ಈಶ್ವರಪ್ಪ ಅವರಿಗೆ ಬೈರತಿ ಸುರೇಶ್ ಸವಾಲು ಹಾಕಿದ್ದಾರೆ.

Recommended Video

Team India ಇಂದು ಅಭ್ಯಸ ಪಂದ್ಯದಲ್ಲಿ ಹೀನಾಯ ಪ್ರದರ್ಶನ | Oneindia Kannada
ಅದು ಆಗೋ ಕೆಲಸ ಅಲ್ಲ

ಅದು ಆಗೋ ಕೆಲಸ ಅಲ್ಲ

ಸುಮ್ನೆ ಬಿದಿಯಲ್ಲಿ ನಿಂತು ಹೋರಾಟ ಮಾಡುತ್ತೇವೆ ಅಂದರೆ ಅದು ಆಗುವ ಕೆಲಸವಲ್ಲ ಎಂದು ಮಾಜಿ ಶಾಸಕ ಕೃಷ್ಣಪ್ಪ ಅವರು ಈಶ್ವರಪ್ಪ ಅವರನ್ನು ಕಿಚಾಯಿಸಿದ್ದಾರೆ. ಕುರುಬರು ನೋವಿನಲ್ಲಿದ್ದ ಸಮಯದಲ್ಲಿ ಸಿದ್ದರಾಮಯ್ಯ ಜೊತೆಗೆ ಇದ್ದರು. ಭಾರತದಲ್ಲಿ ಕುರುಬ ಜನಾಂಗ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರು ಕುರುಬ ಜನಾಂಗದ ನಾಯಕರು.


ಸರ್ಕಾರದಲ್ಲಿರುವ ಮಂತ್ರಿ ಯಾರ ವಿರುದ್ಧ ಹೋರಾಟ ಮಾಡುತ್ತಾರೆ? ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿ ಎಂದು ಕೇಂದ್ರಕ್ಕೆ ಶಿಫಾರಸು ಮಾಡುವುದನ್ನು ಬಿಟ್ಟು ಹೋರಾಟ ಮಾಡುತ್ತೇವೆ ಅಂತ ಈಶ್ವರಪ್ಪ ಹೇಳುತ್ತಾರೆ. ಹಾಗಾದ್ರೆ ಯಾರ ವಿರುದ್ದ ನಿಮ್ಮ ಹೋರಾಟ ಎಂದು ಕೃಷ್ಣಪ್ಪ ಅವರು ಈಶ್ವರಪ್ಪ ಅವರನ್ನು ಪ್ರಶ್ನೆ ಮಾಡಿದ್ದಾರೆ.

ರಾಜ್ಯದ ಎಲ್ಲಾ ಕುರುಬರು ಒಗ್ಗಟ್ಟಿನಿಂದ ಹೋರಾಟ ಮಾಡುತ್ತೇವೆ. ಈಶ್ವರಪ್ಪ ಅವರೇ ಮೊದಲು ರಾಜ್ಯ ಸಂಪುಟದಿಂದ ಕೇಂದ್ರಕ್ಕೆ ಶಿಫಾರಸು ಮಾಡಿಸಿ, ಇಲ್ಲವೇ ನೀವು ರಾಜೀನಾಮೆ ಕೊಟ್ಟು ಹೊರಗೆ ಬನ್ನಿ. ನಾವು ನಿಮ್ಮ ಜೊತೆಗೆ ಇದ್ದೇವೆ. ಎಲ್ಲರೂ ಸೇರಿ ಹೋರಾಟ ಮಾಡೋಣ ಎಂದು ಆಹ್ವಾನಿಸಿದ್ದಾರೆ.


ಒಟ್ಟಾರೆ ಕುರುಬ ಎಸ್‌ಟಿ ಮೀಸಲಾತಿ ಹೋರಾಟ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಸಚಿವ ಈಶ್ವರಪ್ಪ ಅವರು ಕುರುಬ ನಾಯಕರ ಆರೋಪಗಳಿಗೆ ಏನು ಉತ್ತರ ಕೊಡಬಹುದು ಎಂಬುದು ಕುತೂಹಲ ಮೂಡಿಸಿದೆ.

English summary
The leaders of the Kuruba community have turned against Minister Eshwarappa over the issue of the Kuruba ST fight. They also clarified that Siddaramaiah also in favor of the ST fight. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X