ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನೂ ನಾಲ್ಕು ದಿನ ರೆಸಾರ್ಟ್‌ನಲ್ಲಿ ಜೆಡಿಎಸ್ ಶಾಸಕರ ವಾಸ್ತವ್ಯ

|
Google Oneindia Kannada News

ಬೆಂಗಳೂರು, ಜುಲೈ 9: ರಾಜ್ಯ ರಾಜಕೀಯ ವಿದ್ಯಮಾನದ ಬಳಿಕ ಜೆಡಿಎಸ್ ತನ್ನ ಶಾಸಕರು ಅತೃಪ್ತರ ಪಾಳೆಯ ಸೇರದಂತೆ ತಡೆಯಲು ನಾಯಕರು ಅವರನ್ನು ರೆಸಾರ್ಟ್‌ಗೆ ರವಾನಿಸಿ ಕಾಯ್ದುಕೊಳ್ಳುವ ತಂತ್ರಕ್ಕೆ ಮೊರೆ ಹೋಗಿದ್ದು, ಇನ್ನೂ ನಾಲ್ಕು ದಿನ ರೆಸಾರ್ಟ್‌ನಲ್ಲಿಯೇ ಇರುವಂತೆ ತೀರ್ಮಾನಿಸಿದೆ.

ಕುದುರೆ ವ್ಯಾಪಾರದ ಆತಂಕ: ರೆಸಾರ್ಟ್‌ನತ್ತ ಜೆಡಿಎಸ್ ಶಾಸಕರುಕುದುರೆ ವ್ಯಾಪಾರದ ಆತಂಕ: ರೆಸಾರ್ಟ್‌ನತ್ತ ಜೆಡಿಎಸ್ ಶಾಸಕರು

37 ಶಾಸಕರ ಬಲ ಹೊಂದಿರುವ ಜೆಡಿಎಸ್‌ನಲ್ಲಿ ಈಗಾಗಲೇ ಮೂವರು ಶಾಸಕರು ರಾಜೀನಾಮೆ ಸಲ್ಲಿಸಿ ಮುಂಬೈಗೆ ಹಾರಿದ್ದಾರೆ. ಹೀಗಾಗಿ ಉಳಿದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಜೆಡಿಎಸ್ ರೆಸಾರ್ಟ್ ರಾಜಕಾರಣದ ಮೊರೆ ಹೊಕ್ಕಿದೆ.

ಶಾಸಕರ ಜೊತೆ ಸಭೆ ನಡೆಸಿ ಭೋಜನ ಸವಿದ ಎಚ್.ಡಿ.ಕುಮಾರಸ್ವಾಮಿ ಶಾಸಕರ ಜೊತೆ ಸಭೆ ನಡೆಸಿ ಭೋಜನ ಸವಿದ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕೋಡಗುರ್ಕಿ ಗ್ರಾಮ ಬಳಿ ಇರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‌ನಲ್ಲಿ ಶಾಸಕರು ಸೋಮವಾರ ರಾತ್ರಿಯಿಂದ ವಾಸ್ತವ್ಯ ಹೂಡಿದ್ದು, ಜುಲೈ 12ರಿಂದ ವಿಧಾನಸಭೆ ಅಧಿವೇಶನ ಆರಂಭವಾಗುವವರೆಗೂ ಅಲ್ಲಿಯೇ ಇರುವಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೂಚಿಸಿದ್ದಾರೆ ಎನ್ನಲಾಗಿದೆ.

Kumarswamy suggested JDS MLAs to stay in resort

ರಾಜೀನಾಮೆ ನೀಡಿರುವ 13 ಅತೃಪ್ತ ಶಾಸಕರ ಪೈಕಿ ಎಂಟು ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಸ್ವೀಕರಿಸಿಲ್ಲ. ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಇಳಿಯಬಹುದು. ನಾವೆಲ್ಲರೂ ಒಟ್ಟಾಗಿ ಒಂದೇ ಕಡೆ ಇರೋಣ. ಅಧಿವೇಶನ ಆರಂಭವಾಗುವವರೆಗೂ ಬೆಂಗಳೂರಿಗೆ ಅಥವಾ ರೆಸಾರ್ಟ್‌ನಿಂದ ಹೊರಕ್ಕೆ ಹೋಗುವುದು ಬೇಡ ಎಂದು ಕುಮಾರಸ್ವಾಮಿ ಅವರು ಶಾಸಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಜುಲೈ 15 ರ ವರೆಗೆ ಮೈತ್ರಿ ನಿರಾಳ, ಸರ್ಕಾರ ಉಳಿಸಿಕೊಳ್ಳಲು ಕಾಲಾವಕಾಶ ಜುಲೈ 15 ರ ವರೆಗೆ ಮೈತ್ರಿ ನಿರಾಳ, ಸರ್ಕಾರ ಉಳಿಸಿಕೊಳ್ಳಲು ಕಾಲಾವಕಾಶ

ಶಾಸಕರ ಜತೆ ಊಟ ಮಾಡಿದ ಬಳಿಕ ಚರ್ಚೆ ನಡೆಸಿರುವ ಸಿಎಂ, ರಾಜಕೀಯ ವಿದ್ಯಮಾನ ಯಾವ ತಿರುವು ಬೇಕಾದರೂ ಪಡೆದುಕೊಳ್ಳಬಹುದು. ಹೀಗಾಗಿ ಕಾದು ನೋಡುವ ತಂತ್ರ ಅನುಸರಿಸುವುದು ಒಳಿತು. ಮುಂದಿನ ನಡೆ ಬಗ್ಗೆ ಬಳಿಕ ಚರ್ಚಿಸೋಣ ಎಂದು ಕುಮಾರಸ್ವಾಮಿ ಹೇಳಿರುವುದಾಗಿ ವರದಿಯಾಗಿದೆ.

English summary
CM HD Kumaraswamy directed JDS MLAs to stay in resort till the assembly session which will be held from July 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X