ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡ-ಕುಮಾರಸ್ವಾಮಿ ಮಾತುಕತೆ: ಸರ್ಕಾರ ಉಳಿಸಿಕೊಳ್ಳಲು ತಂತ್ರ

|
Google Oneindia Kannada News

ಬೆಂಗಳೂರು, ಜುಲೈ 08: ಜೆಡಿಎಸ್‌ ಶಾಸಕರನ್ನು ರೆಸಾರ್ಟ್‌ಗೆ ಕಳುಹಿಸಿರುವ ಕುಮಾರಸ್ವಾಮಿ ಅವರು, ತಾವು ಮಾತ್ರ ತಾಜ್ ವೆಸ್ಟ್‌ ಎಂಡ್ ಹೊಟೆಲ್‌ನಲ್ಲಿಯೇ ಉಳಿದಿದ್ದಾರೆ.

ತಾಜ್ ವೆಸ್ಟ್‌ ಎಂಡ್ ಹೊಟೆಲ್‌ನಲ್ಲಿ ಕುಮಾರಸ್ವಾಮಿ ಅವರು ಬಹು ಸಮಯದಿಂದ ದೇವೇಗೌಡ ಅವರೊಂದಿಗೆ ಮಾತನಾಡುತ್ತಿದ್ದು, ಸರ್ಕಾರ ಉಳಿಸಿಕೊಳ್ಳಲು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ.

ಕುದುರೆ ವ್ಯಾಪಾರದ ಆತಂಕ: ರೆಸಾರ್ಟ್‌ನತ್ತ ಜೆಡಿಎಸ್ ಶಾಸಕರುಕುದುರೆ ವ್ಯಾಪಾರದ ಆತಂಕ: ರೆಸಾರ್ಟ್‌ನತ್ತ ಜೆಡಿಎಸ್ ಶಾಸಕರು

ರಾಜೀನಾಮೆ ಕೊಟ್ಟಿರುವ ಶಾಸಕರು ಸ್ಪೀಕರ್‌ ಭೇಟಿಗೆ ಬಂದಾಗ ಅವರ ಮನವೊಲಿಸುವ ಯತ್ನ ಮಾಡಬೇಕು ಎಂಬ ಸಲಹೆಯನ್ನು ದೇವೇಗೌಡ ಅವರು ಕುಮಾರಸ್ವಾಮಿಗೆ ನೀಡಿದ್ದಾರೆ ಎನ್ನಲಾಗಿದೆ.

Kumaraswamy took Deve Gowdas advice

ಅಷ್ಟು ಮಾತ್ರವೇ ಅಲ್ಲದೆ, ಒಂದು ವೇಳೆ ಸರ್ಕಾರ ಪತನ ಖಚಿತವಾದರೆ, ಸಿಎಂ ಕುಮಾರಸ್ವಾಮಿ ಮುಂದಿನ ನಡೆ ಏನಾಗಿರಬೇಕು, ಯಾವ ರೀತಿಯಲ್ಲಿ ರಾಜೀನಾಮೆ ನೀಡಬೇಕು, ಸರ್ಕಾರ ಉರುಳಿಸಿದಕ್ಕೆ ಕಾರಣ ಯಾರನ್ನು ಮಾಡಬೇಕು ಎಂಬಿತ್ಯಾದಿ ಮಾತುಕತೆ ನಡೆದಿದೆ ಎನ್ನಲಾಗಿದೆ.

ಎಚ್‌.ಡಿ.ರೇವಣ್ಣ ಅವರು ಸಹ ತಾಜ್ ವೆಸ್ಟ್‌ ಎಂಡ್‌ಗೆ ಭೇಟಿ ನೀಡಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ರೇವಣ್ಣ ಅವರು ಜೆಡಿಎಸ್‌ ಶಾಸಕರು ಉಳಿದಿರುವ ರೆಸಾರ್ಟ್‌ಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ನಾಯಕರಿಗೆ 24 ಗಂಟೆಯ ಗಡುವು ಕೊಟ್ಟ ಕುಮಾರಣ್ಣ!ಕಾಂಗ್ರೆಸ್ ನಾಯಕರಿಗೆ 24 ಗಂಟೆಯ ಗಡುವು ಕೊಟ್ಟ ಕುಮಾರಣ್ಣ!

ಕುಮಾರಸ್ವಾಮಿ-ದೇವೇಗೌಡ ಅವರು ಸಭೆಯ ಸಮಯದಲ್ಲಿಯೇ ಕೆಲವು ಕಾಂಗ್ರೆಸ್‌ ಮುಖಂಡರ ಜೊತೆ ಸಹ ಮಾತನಾಡುತ್ತಿದ್ದಾರೆ ಎನ್ನಲಾಗಿದೆ.

English summary
CM Kumaraswamy taking Deve Gowda's advice. Kumaraswamy staying in Taj West End hotel. JDS MLAs were in resort near Devanhalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X