ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್‌ ಶಾಸಕ ಸುಧಾಕರ್‌ಗೆ ಕೈಕೊಟ್ಟ ಕುಮಾರಸ್ವಾಮಿ

|
Google Oneindia Kannada News

Recommended Video

Lok Sabha Elections 2019 : ರಿಮೋಟ್ ಕಂಟ್ರೋಲ್ ಸಿಎಂ : ಮೋದಿ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು

ಬೆಂಗಳೂರು, ಮಾರ್ಚ್‌ 06: ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಅವರಿಗೆ ನೀಡಲಾಗಿದ್ದ ನಿಗಮ ಮಂಡಳಿ ಸ್ಥಾನವನ್ನು ಕುಮಾರಸ್ವಾಮಿ ರದ್ದು ಮಾಡಿದ್ದು, ಆ ಸ್ಥಾನವನ್ನು ಜಯರಾಮ್ ಅವರಿಗೆ ನೀಡಿದ್ದಾರೆ.

ಶಾಸಕ ಸುಧಾಕರ್ ಅವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ನೇಮಕ ಮಾಡಿದ ಮೂರು ತಿಂಗಳ ಒಳಗಾಗಿ ಅವರಿಂದ ಆ ಸ್ಥಾನವನ್ನು ಕಿತ್ತುಕೊಳ್ಳಲಾಗಿದೆ.

ಚಿಕ್ಕಬಳ್ಳಾಪುರಕ್ಕೆ ಅಚ್ಚರಿಯ ಅಭ್ಯರ್ಥಿ ಶಿಫಾರಸು ಮಾಡಿದ ಜೆಡಿಎಸ್! ಚಿಕ್ಕಬಳ್ಳಾಪುರಕ್ಕೆ ಅಚ್ಚರಿಯ ಅಭ್ಯರ್ಥಿ ಶಿಫಾರಸು ಮಾಡಿದ ಜೆಡಿಎಸ್!

ಸುಧಾಕರ್ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡಬೇಕಾದರೂ ಸಹ ಕುಮಾರಸ್ವಾಮಿ ಅವರು ಮೀನಾ-ಮೇಷ ಎಣಿಸಿದ್ದರು. ಕಾಂಗ್ರೆಸ್ ನೀಡಿದ್ದ ಪಟ್ಟಿಯಲ್ಲಿ ಸುಧಾಕರ್ ಸೇರಿ ಇನ್ನೆರಡು ಶಾಸಕರಿಗೆ ನಿಗಮ ಮಂಡಳಿ ಸ್ಥಾನವನ್ನು ಕೊಟ್ಟಿರಲಿಲ್ಲ. ಆದರೆ ಒತ್ತಡಕ್ಕೆ ಮಣಿದು ನಿಧಾನವಾಗಿ ಸ್ಥಾನ ನೀಡಲಾಯಿತು. ಆದರೆ ಈಗ ಮರಳಿ ಪಡೆಯಲಾಗಿದೆ.

Kumaraswamy suspend Congress MLA Sudhakar fro board president post

ಯಶವಂತಪುರ-ಚಿಕ್ಕಬಳ್ಳಾಪುರ-ದೆಹಲಿ ಹೊಸ ರೈಲಿಗೆ ಹಸಿರು ಬಾವುಟ ಯಶವಂತಪುರ-ಚಿಕ್ಕಬಳ್ಳಾಪುರ-ದೆಹಲಿ ಹೊಸ ರೈಲಿಗೆ ಹಸಿರು ಬಾವುಟ

ಮೈತ್ರಿ ಸರ್ಕಾರ ಆದಾಗಿನಿಂದಲೂ ಸುಧಾಕರ್ ಅವರು ಕುಮಾರಸ್ವಾಮಿ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಅಪ್ಪಟ ಬೆಂಬಲಿಗರಾಗಿರುವ ಸುಧಾಕರ್ ಅವರ ಈ ನಡೆಯ ಬಗ್ಗೆ ಕುಮಾರಸ್ವಾಮಿ ಅಸಮಾಧಾನ ಹೊಂದಿದ್ದರು.

English summary
CM Kumaraswamy suspends Congress MLA Sudhakar from pollution control board president post. He appoints his party leader Jayaram to that post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X