ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ಹೇಳಿಕೆಗಳು ಒಂದೊಂದು ದಿನ ಒಂದೊಂದು ರೀತಿ:ಶೆಟ್ಟರ್

|
Google Oneindia Kannada News

ಬೆಂಗಳೂರು, ನವೆಂಬರ್ 26: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗಳು ಪ್ರತಿ ದಿನ ಬದಲಾಗುತ್ತಿರುತ್ತವೆ. ಅವರ ಮಾತುಗಳಿಗೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರವಾಗಿ ಪ್ರಚಾರದ ಸಂದರ್ಭದಲ್ಲಿ ಕಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡರು. ಒಂದೊಂದು ದಿನ ಒಂದೊಂದು ರೀತಿಯ ಹೇಳಿಕೆ ಕೊಡುವುದು ಕುಮಾರಸ್ವಾಮಿ ಜಾಯಮಾನ ಎಂದರು.

ಸಿದ್ದರಾಮಯ್ಯನವರೇ 'ನೀನೇ ಸಾಕಿದ ಗಿಣಿ, ನಿನ್ನಾ ಹದ್ದಾಗಿ ಕುಕ್ಕಿತಲ್ಲೋ'ಸಿದ್ದರಾಮಯ್ಯನವರೇ 'ನೀನೇ ಸಾಕಿದ ಗಿಣಿ, ನಿನ್ನಾ ಹದ್ದಾಗಿ ಕುಕ್ಕಿತಲ್ಲೋ'

ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಯಾವ ರೀತಿಯ ರಾಜಕಾರಣ ಮಾಡುತ್ತಾರೆ ಅನ್ನೋದು ಗೊತ್ತಿದೆ. ಬೆಳೆಗ್ಗೆಯಿಂದ ಸಂಜೆಯವರೆಗೆ ಜಾತಿ ರಾಜಕಾರಣ ಮಾಡಿನೇ ಇವರು ಮುಂದೆ ಬಂದಿದ್ದಾರೆ. ಜಾತಿ ರಾಜಕಾರಣ ಮಾಡದಿದ್ದರೆ ಇವರ ಕಣ್ಣಿಗೆ ನಿದ್ದೆ ಬರುವುದಿಲ್ಲ ಎಂದು ಟೀಕಿಸಿದರು.

Kumaraswamy Statements One Day One Type, Other Day one Type :Shatter

ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ದಿನಬೆಳಗಾದ್ರೆ ಮಿಲಾಪಿ ಕುಸ್ತಿ ಮಾಡುತ್ತವೆ. ಅವರ ಬಗ್ಗೆ ಇವರು ಹೇಳೋದು, ಇವರ ಬಗ್ಗೆ ಅವರು ಹೇಳೋದು ಅವರ ಕಾಯಕ. ಒಮ್ಮೆ ದೋಸ್ತಿ ಮಾಡ್ತಾರೆ, ಒಮ್ಮೆ ಕುಸ್ತಿ ಹಿಡಿತಾರೆ. ಈ ಎರಡು ಪಕ್ಷಗಳು ನಮಗೆ ಲೆಕ್ಕಕ್ಕೆ ಇಲ್ಲ ಎಂದರು.

ಉಪಚುನಾವಣೆಯಲ್ಲಿ ಸೈಲೆಂಟ್: ಒಂದೊಂದಾಗಿ ಕಾರಣ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್ಉಪಚುನಾವಣೆಯಲ್ಲಿ ಸೈಲೆಂಟ್: ಒಂದೊಂದಾಗಿ ಕಾರಣ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸ್ವಲ್ಪ ಜಾಣ್ಮೆಯಿಂದ ಹೇಳಿಕೆಗಳನ್ನು ಕೊಡಬೇಕು. ಇವತ್ತು ಒಂದು ತರ, ನಾಳೆ ಒಂದು ತರ ಹೇಳಿಕೆ ಕೊಡುವುದನ್ನು ಮತ್ತು ಸಮುದಾಯದ ಹೆಸರನ್ನು ಹೇಳಿ ಮತ ಕೇಳುವುದನ್ನು ಮೊದಲು ನಿಲ್ಲಿಸಲಿ ಎಂದು ತಿಳಿಸಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್ ನಿಂದ ಪಾಳ್ಯ ನಾಗರಾಜ್, ಜೆಡಿಎಸ್ ನಿಂದ ಜವರಾಯೇಗೌಡ ಉಪ ಚುನಾಚಣಾ ಕಣದಲ್ಲಿದ್ದಾರೆ. ಇಲ್ಲಿ ಡಿಸೆಂಬರ್ 05 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

English summary
Former Chief Minister HD Kumaraswamys Remarks Are Changing Every Day. Minister Jagadish Shettar Responded That There Was No Need To Emphasize His Words.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X