ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಚ್ಚರಿಯ ಬೆಳವಣಿಗೆ: ಯಡಿಯೂರಪ್ಪ-ಎಚ್ಡಿಕೆ ಭೇಟಿ, ಮಾತುಕತೆ!

|
Google Oneindia Kannada News

ಬೆಂಗಳೂರು, ನ. 13: ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಮಳೆಯ ಹಿನ್ನಲೆಯಲ್ಲಿ ಅಚ್ಚರಿಯ ಬೆಳವಣಿಗೆಯಲ್ಲಿ ಹಾಲಿ- ಮಾಜಿ ಸಿಎಂ ಕುತೂಹಲಕಾರಿ ಭೇಟಿ, ಮಾತುಕತೆ ನಡೆದು ಹೋಗಿದೆ.

ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಜೊತೆಗೆ ಸುಮಾರು 15 ನಿಮಿಷಗಳ ಕಾಲ ಚರ್ಚಿಸಿದ್ದಾರೆ.

ರಾಜ್ಯದ ಇಬ್ಬರು ಪವರ್ ಫುಲ್ ನಾಯಕರ ನಡುವೆ ಏನು ಮಾತುಕತೆ ನಡೆಯಿತು ಗೊತ್ತಿಲ್ಲ. ಇವರಿಬ್ಬರ ಮಾತುಕತೆಗೆ ಸಾಕ್ಷಿಯಾಗಿದ್ದವರು ಜೆಡಿಎಸ್ ಮೇಲುಕೋಟೆ ಶಾಸಕ ಸಿ.ಎಸ್ ಪುಟ್ಟರಾಜು.

Kumaraswamys meeting with Yediyurappa fuels speculation

ರಾಜ್ಯ ರಾಜಕೀಯದಲ್ಲಿ ಇಬ್ಬರು ನಾಯಕರ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಸೆಪ್ಟೆಂಬರ್ 11ರಂದು ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದನ್ನು ಇಲ್ಲಿಸ್ಮರಿಸಬಹುದು.

ಇದಾದ ಬಳಿಕ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ ಜೆಡಿಎಸ್ ಸೋಲು ಕಂಡಿದೆ.

ಏನಿರಬಹುದು ಚರ್ಚೆಯ ವಿಷಯ?:
ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಮಂಜುನಾಥ್ ಅವರು ತಮ್ಮ ಕ್ಷೇತ್ರದಲ್ಲಿ ತೀವ್ರ ಮಳೆಯಿಂದ ಉಂಟಾದ ಹಾನಿಗೆ ಪರಿಹಾರ ಕೋರಿದ್ದರು. ಇದರ ಸಲುವಾಗಿ ಖುದ್ದು ಕುಮಾರಸ್ವಾಮಿ ಅವರು ಚರ್ಚಿಸಿದ್ದಾರೆ ಎಂಬ ಮಾಹಿತಿಯಿದೆ.

Recommended Video

ಅವರ ಪೇಪರ್ ನಲ್ಲಿ ಆರ್ಟಿಕಲ್ ಬಂದ್ರೆ ಪೊಲೀಸ್ ಕೆಲಸ ಹೋಗೋದು ಪಕ್ಕ | oneindia Kannada

ಇಬ್ಬರು ನಾಯಕರ ಭೇಟಿ ಬಗ್ಗೆ ಕಾಂಗ್ರೆಸ್ ಕಣ್ಣಿಟ್ಟಿದ್ದು, ಯಡಿಯೂರಪ್ಪ ಸರ್ಕಾರದ ಮೇಲೆ ಕುಮಾರಸ್ವಾಮಿ ಮೃಧು ಧೋರಣೆ ಹೊಂದಿದ್ದಾರೆ ಎಂದು ಸಣ್ಣ ದನಿಯಲ್ಲಿ ಆರೋಪಿಸಿಯೂ ಇದ್ದಾರೆ. ಇಬ್ಬರು ನಾಯಕರ ಭೇಟಿ ಚರ್ಚೆ ವಿಷ್ಯ ಇಷ್ಟರಲ್ಲಿ ಹೊರಬಹುದು ಎಂಬ ನಿರೀಕ್ಷೆಯಿದೆ.

English summary
In a surprise development, JD(S) leader H D Kumaraswamy met Karnataka Chief Minister B S Yediyurappa on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X