ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪಾ ಎಲ್ಲಿದ್ದೀಯಪ್ಪಾ ಎಂದ ಮಾಜಿ ಸಿಎಂ ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಆಗಸ್ಟ್ 7: ರಾಜ್ಯದಲ್ಲಿ ಪ್ರವಾಹ ಶುರುವಾಗಿದೆ ಆದರೆ ಸಿಎಂ ಮಾತ್ರ ಕಾಣೆಯಾಗಿದ್ದಾರೆ. ನಿಖಿಲ್ ಎಲ್ಲಿದ್ದೀಯಪ್ಪ ಎಂದು ಟ್ರೋಲ್ ಮಾಡಿದ್ದೀರಾ, ಈಗ ಯಡಿಯೂರಪ್ಪ ಎಲ್ಲಿದ್ದೀಯಪ್ಪಾ ಎಂದು ಕೇಳಿ ಎಂದು ವ್ಯಂಗ್ಯವಾಡಿದ್ದಾರೆ.

ಯಡಿಯೂರಪ್ಪ ಬಡವರ ಪರವಾಗಿದ್ದಾರೆ ಎನ್ನುತ್ತಾರೆ, ನಾನು ಲೂಟಿಕೋರ ಎಂದು ಹೇಳುತ್ತಾರೆ, ಆದರೆ ಅವರ ಕಾಲದಲ್ಲಿ ವರ್ಗಾವಣೆ ನೆಡೆಯುತ್ತಿಲ್ಲವಾ, ಯಾವ ರೀತಿ ನಡೆಯುತ್ತಿದೆ ಎಂದು ನನಗೆ ಗೊತ್ತಿಲ್ವಾ ಎಂದು ಪ್ರಶ್ನಿಸಿದರು.

Kumaraswamy Questions Yeddyurappa Yellidiyappa

ಈಗಿನ ಬಿಡಿಎ ಆಯುಕ್ತರನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಿದ್ದಾರೆ, ಆ ಆಯುಕ್ತರು ನನಗೆ ಆಮಿಷ ಒಡ್ಡಿದ್ದರು,ಅದನ್ನು ನಾನು ತಿರಸ್ಕರಿಸಿದ್ದೆ, ಈ ಅವರು ಬಿಡಿಎ ಆಯುಕ್ತರಾಗಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಯಡಿಯೂರಪ್ಪನವರೇ 30 ಸಾವಿರ ಸಾಲ ಮಾಡಿದ ಹೆಣ್ಣುಮಗಳಿಗೆ 5 ಲಕ್ಷ ರೂ ಕಟ್ಟು ಎಂದು ಲೇವಾದೇವಿದಾರ ಒತ್ತಾಯ ಮಾಡಿದರೆ ಹೇಗೆ. ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಿಎಂಗೆ ಹೇಳಿ 10 ದಿನಗಳು ಕಳೆದಿದೆ. ಮುಖ್ಯಮಂತ್ರಿಗಳು ಬಿಜಿ ಇದ್ದಾರೆ ಏನಾದರೂ ಮಾಡಿ, ನೀವಾದರೂ ಗಮನವಹಿಸಿ ಎಂದು ಮುಖ್ಯ ಕಾಯದರ್ಶಿಯವರಿಗೆ ಮನವಿ ಮಾಡಿದ್ದೆ.

ಪ್ರತಿ ಜೆಡಿಎಸ್ ಕಾರ್ಯಕರ್ತರು ನಿಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಜನತಾದಳದ ವತಿಯಿಂದ ಕಚೇರಿ ಆರಂಭ ಮಾಡಿ, ಲೋಕಲ್ ಪತ್ರಿಕೆಗಳಲ್ಲಿ ಜಾಹೀರಾತು ಕೊಡಿ, ಏನೇ ತೊಂದರೆಯಾದರೂ ಮಾಹಿತಿಗಳನ್ನು ಕಚೇರಿಗೆ ಕೊಡಲು ಹೇಳಿ.

ಬರಿ ರೈತರ ಸಾಲಮನ್ನಾ ಬಗ್ಗೆ ಚರ್ಚೆ ಮಾಡಬೇಡಿ, 25 ಸಾವಿರ ಕೋಟ ರೂವನ್ನು ಎರಡು ಬಜೆಟ್‌ನಲ್ಲಿ ಹಂಚಿಕೆ ಮಾಡಿದ್ದೆ, ಆದರೆ ನನಗೆ ಯಾರೂ ಕಿರೀಟ ಕೊಟ್ಟಿಲ್ಲ. ನಿಷ್ಠಾವತ ಅಧಿಕಾರಿಗೆ ಜವಾಬ್ದಾರಿ ನೀಡಿದ್ದೆ ಎಂದರು.

English summary
Former chief minister HD Kumaraswamy alleging that Flooding has started in the state but only CM is missing. Yeddyurappa Yellidiyappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X