ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀಲಂಕಾದಲ್ಲಿ ಮೃತರಾದ ಜೆಡಿಎಸ್ ಮುಖಂಡರ ಅಂತಿಮ ದರ್ಶನ ಪಡೆದ ಸಿಎಂ

|
Google Oneindia Kannada News

ಬೆಂಗಳೂರು, ಏಪ್ರಿಲ್ 24: ಶ್ರೀಲಂಕಾದಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಹತರಾದ ಐದು ಜೆಡಿಎಸ್ ಮುಖಂಡರ ಕಳೆಬರವನ್ನು ಇಂದು ಬೆಂಗಳೂರಿನಲ್ಲಿ ದರ್ಶನಕ್ಕೆ ಇಡಲಾಗಿತ್ತು.

ಲಂಕಾದಲ್ಲಿ ಬಾಂಬ್ ಸ್ಫೋಟವಾಗಿ ಜೆಡಿಎಸ್ ಮುಖಂಡರು ನಾಪತ್ತೆ ಆಗಿದ್ದಾರೆ ಎಂಬ ಸುದ್ದಿ ಬಂದಾಗಲೇ ಟ್ವೀಟ್ ಮಾಡಿ ಆತಂಕ, ನೋವನ್ನು ವ್ಯಕ್ತಪಡಿಸಿದ್ದ ಸಿಎಂ ಕುಮಾರಸ್ವಾಮಿ ಅವರು ಇಂದು ಜೆಡಿಎಸ್ ಮುಖಂಡರ ಪಾರ್ಥಿವ ಶರೀರದ ಅಂತಿಮದರ್ಶನ ಪಡೆದರು.

ಶ್ರೀಲಂಕಾದಲ್ಲಿ ಸಾವನ್ನಪ್ಪಿದ ಆ ಐವರು ನಮ್ಮ ಪಕ್ಷದ ಶಕ್ತಿಗಳು:ಸಿಎಂ ಶ್ರೀಲಂಕಾದಲ್ಲಿ ಸಾವನ್ನಪ್ಪಿದ ಆ ಐವರು ನಮ್ಮ ಪಕ್ಷದ ಶಕ್ತಿಗಳು:ಸಿಎಂ

ಹಲವು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮೃತರ ಅಂತಿಮ ದರ್ಶನ ಪಡೆದರ. ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸಹ ಜೆಡಿಎಸ್ ಮುಖಂಡರ ಅಂತಿಮ ದರ್ಶನ ಪಡೆದರು, ಶರವಣ ಅವರು ಸಹ ಈ ಸಮಯ ಜೊತೆಯಲ್ಲಿದ್ದರು.

Kumaraswamy paid last respect to JDS leaders who died in Sri Lanka

ಶ್ರೀಲಂಕಾದಲ್ಲಿ ಬಾಂಬ್ ದಾಳಿಗೆ ಮೃತರಾದ ಜೆಡಿಎಸ್ ಮುಖಂಡರಾದ ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ಗೋವೇನಹಳ್ಳಿ ಶಿವಣ್ಣ ಮತ್ತು ನಾಗರಾಜರೆಡ್ಡಿ ಅವರ ಪಾರ್ಥಿವ ಶರೀರವನ್ನು ಇಂದು ಮುಂಜಾನೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತರಲಾಯಿತು.

ಬಾಂಬ್ ದಾಳಿಯ ಬಗ್ಗೆ ಶ್ರೀಲಂಕಾ ಕ್ಕೆ ಎಚ್ಚರಿಕೆ ನೀಡಿತ್ತು ಭಾರತಬಾಂಬ್ ದಾಳಿಯ ಬಗ್ಗೆ ಶ್ರೀಲಂಕಾ ಕ್ಕೆ ಎಚ್ಚರಿಕೆ ನೀಡಿತ್ತು ಭಾರತ

ಹನುಮಂತರಾಯಪ್ಪ ಅವರ ಪಾರ್ಥಿವ ಶರೀರವನ್ನು ದಾಸರಹಳ್ಳಿ ಬಳಿಯ ಅವರ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶಿವಣ್ಣ ಹಾಗೂ ಲಕ್ಷ್ಮೀನಾರಾಯಣ ಅವರ ಕಳೇಬರವನ್ನು ಅವರ ನಿವಾಸದ ಬಳಿ ಕೆಲಹೊತ್ತು ಇರಿಸಿ ನಂತರ ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.

Kumaraswamy paid last respect to JDS leaders who died in Sri Lanka

ಶ್ರೀಲಂಕಾ ಸ್ಫೋಟ: ಬೆಂಗಳೂರು ತಲುಪಿದ ಐವರು ಕನ್ನಡಿಗರ ಮೃತದೇಹ ಶ್ರೀಲಂಕಾ ಸ್ಫೋಟ: ಬೆಂಗಳೂರು ತಲುಪಿದ ಐವರು ಕನ್ನಡಿಗರ ಮೃತದೇಹ

ರಾಮಲಿಂಗಾ ರೆಡ್ಡಿ ಅವರ ಸಂಬಂಧಿ ನಾಗರಾಜ ರೆಡ್ಡಿ ಅವರ ಪಾರ್ಥಿವ ಶರೀರವನ್ನು ಸಹ ಬೆಂಗಳೂರಿಗೆ ತರಲಾಗಿದ್ದು, ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಮಲಿಂಗಾ ರೆಡ್ಡಿ, ಸಮ್ಯಾ ರೆಡ್ಡಿ ಮತ್ತು ಬಿಜೆಪಿ ಲೋಕಸಭಾ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.

English summary
CM Kumaraswamy paid his last respect to JDS leaders who died in Sri Lanka bomb blast. JDS president Deve Gowda also paid his last respect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X