ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಂತ ಅಣ್ಣನನ್ನೇ ಬಿಡದ ಕುಮಾರಸ್ವಾಮಿ, ಇನ್ನು ನನ್ನನ್ನು ಬಿಡ್ತಾರಾ?

|
Google Oneindia Kannada News

ಮೈಸೂರು, ಸೆ 22: ಜೆಡಿಎಸ್ ನಿಂದ ಬಹುತೇಕ ದೂರವಾಗಿ, ಬಿಜೆಪಿ ಹೊಸ್ತಿಲ ಬಳಿ ನಿಂತಿರುವ ಚಾಮುಂಡೇಶ್ವರಿ ಶಾಸಕ ಜಿ.ಟಿ,ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

" ತನ್ನ ಸ್ವಂತ ಅಣ್ಣ ಎಚ್.ಡಿ.ರೇವಣ್ಣ ಅವರನ್ನು ಉಪಮುಖ್ಯಮಂತ್ರಿ ಆಗಲು ಬಿಡದ ಕುಮಾರಸ್ವಾಮಿ, ಇನ್ನು ನನ್ನನ್ನು ಮುಖ್ಯಮಂತ್ರಿ ಮಾಡಲು ಬಿಡುತ್ತಿದ್ದರಾ" ಎಂದು ಜಿಟಿಡಿ ಪ್ರಶ್ನಿಸಿದ್ದಾರೆ.

ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಏನಿದು ಎಚ್ಡಿಕೆ ವಿಶ್ವಾಸದ ಮಾತುಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಏನಿದು ಎಚ್ಡಿಕೆ ವಿಶ್ವಾಸದ ಮಾತು

" ವಿಶ್ರಾಂತಿಗಾಗಿ ಅಮೆರಿಕಾ ಸೇರಿದಂತೆ ವಿದೇಶ ಪ್ರವಾಸ ಮಾಡಿದ್ದ ಕುಮಾರಸ್ವಾಮಿ, ಪ್ರತೀ ಬಾರಿ ಸಾ.ರಾ.ಮಹೇಶ್ ಅವರನ್ನು ಕರೆದುಕೊಂಡು ಹೋದರು. ಆಗ ಅವರಿಗೆ ನನ್ನ ನೆನಪಾಗಲಿಲ್ಲವೇ" ಎಂದು ಜಿಟಿಡಿ ಬೇಸರ ವ್ಯಕ್ತ ಪಡಿಸಿದ್ದಾರೆ.

Kumaraswamy Not Allowed His Brother To Become DCM: JDS Leader GT Devegowda Statement

" ಸಿದ್ದರಾಮಯ್ಯ ಅಥವಾ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ರೇವಣ್ಣ ಅವರನ್ನು ಡಿಸಿಎಂ ಮಾಡುವ ಆಯ್ಕೆ ಕುಮಾರಸ್ವಾಮಿ ಅವರಿಗಿತ್ತು. ಅದಕ್ಕೆ ಕುಮಾರಸ್ವಾಮಿ ಒಪ್ಪಿರಲಿಲ್ಲ. ಒಪ್ಪಿದ್ದರೆ ಸಮ್ಮಿಶ್ರ ಸರಕಾರ ಉಳಿಯುತ್ತಿತ್ತು" ಎಂದು ಜಿ.ಟಿ.ದೇವೇಗೌಡ ಹೇಳಿದರು.

" ಮಹೇಶ್ ಗೆ ಇದ್ದಕ್ಕಿದ್ದಂತೇ ನನ್ನ ಮಗನ ಮೇಲೆ ಪ್ರೀತಿ ಬಂದಿದೆ. ನಾನು, ಕುಮಾರಸ್ವಾಮಿ ಅಥವಾ ಸಾ.ರಾ.ಮಹೇಶ್ ರಾಜಕೀಯ ಬೆಳವಣಿಗೆಗೆ ಅಡ್ಡಿ ಬರುವುದಿಲ್ಲ" ಎಂದು ಜಿಟಿಡಿ ಭರವಸೆ ನೀಡಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್‌ಗೆ ಈ ತಲೆನೋವು ಬೇಡ ಎಂದ ದೇವೇಗೌಡಕಾಂಗ್ರೆಸ್ ಹೈಕಮಾಂಡ್‌ಗೆ ಈ ತಲೆನೋವು ಬೇಡ ಎಂದ ದೇವೇಗೌಡ

"ನೀವು ಉಳಿದರೆ ಮಾತ್ರ ಪಕ್ಷ ಉಳಿಯುತ್ತೆ., ನನ್ನ ಹಾಗೇ, ನಿಮ್ಮಂತಹ ಲಕ್ಷಾಂತರ ಕಾರ್ಯಕರ್ತರು ಇದ್ದರೆ ಮಾತ್ರ ಪಕ್ಷ ಉಳಿದುಕೊಳ್ಳೋಕೆ ಸಾಧ್ಯ" ಎಂದು, ಮೈಸೂರಿನಲ್ಲಿ ನಡೆದ ಚಿಂತನ - ಮಂಥನ ಸಭೆಯಲ್ಲಿ, ಕುಮಾರಸ್ವಾಮಿ, ಪರೋಕ್ಷವಾಗಿ ಜಿಟಿಡಿಗೆ ಟಾಂಗ್ ನೀಡಿದ್ದರು.

English summary
Former CM Kumaraswamy Not Allowed His Brother To Become Deputy Chief Minister: JDS Leader GT Devegowda Statement
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X