ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿಗೆ ನಿಖಿಲ್ ಸ್ಪರ್ಧೆಯ ಆತಂಕ, ರಾತ್ರೋ ರಾತ್ರಿ ಜ್ಯೋತಿಷಿ ಮನೆಗೆ ದೌಡು

|
Google Oneindia Kannada News

Recommended Video

Lok Sabha Elections 2019 : ಕುಮಾರಸ್ವಾಮಿಗೆ ನಿಖಿಲ್ ಸ್ಪರ್ಧೆಯ ಆತಂಕ, ರಾತ್ರೋ ರಾತ್ರಿ ಜ್ಯೋತಿಷಿ ಮನೆಗೆ ದೌಡು

ಬೆಂಗಳೂರು, ಮಾರ್ಚ್ 13: ನಿಖಿಲ್ ಕುಮಾರಸ್ವಾಮಿ ಈ ಬಾರಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ರಾತ್ರೋರಾತ್ರಿ ಜ್ಯೋತಿಷಿಗಳ ಮೊರೆ ಹೋಗಿದ್ದಾರೆ.

ಕುಮಾರಸ್ವಾಮಿಯವರಿಗೆ ಮಗನ ಸ್ಪರ್ಧೆ ಕುರಿತು ಆತಂಕ ಶುರುವಾದಂತಿದೆ, ಇದೇ ಕಾರಣಕ್ಕೆ ಅವರು ರಾಜಗುರು ದ್ವಾರಕನಾಥ್ ಅವರ ಮನೆಗೆ ದೌಡಾಯಿಸಿ ಚರ್ಚೆ ನಡೆಸಿದ್ದಾರೆ.

ಕುಮಾರಸ್ವಾಮಿ 8 ತಿಂಗಳ ಆಡಳಿತ ಬಿಚ್ಚಿಟ್ಟ ಬಿಜೆಪಿ ಟ್ವೀಟ್! ಕುಮಾರಸ್ವಾಮಿ 8 ತಿಂಗಳ ಆಡಳಿತ ಬಿಚ್ಚಿಟ್ಟ ಬಿಜೆಪಿ ಟ್ವೀಟ್!

ಕುಮಾರಸ್ವಾಮಿ ಕುಟುಂದಲ್ಲಿ ಎಲ್ಲರೂ ದೈವಭಕ್ತರೇ, ಎಲ್ಲರೂ ಜ್ಯೋತಿಷ್ಯವನ್ನು ಸಾಕಷ್ಟು ನಂಬುತ್ತಾರೆ, ಡಿಕೆ ಶಿವಕುಮಾರ್ ಅವರ ಆಪ್ತರಾಗಿರುವ ರಾಜಗುರು ದ್ವಾರಕನಾಥ್ ಅವರ ಮನೆಗೆ ಮಂಗಳವಾರ ರಾತ್ರಿ ಮಗ ನಿಖಿಲ್‌ ಅವರನ್ನೂ ಕರೆತಂದು ಮಾತುಕತೆ ನಡೆಸಿದ್ದಾರೆ.

ಈ ವೇಳೆ ತಮ್ಮ ಮಗನ ರಾಜಕೀಯ ಭವಿಷ್ಯ ಏನಾಗಲಿದೆ ಎಂದು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ನಿಖಿಲ್ ಮಂಡ್ಯದಿಂದ ಸ್ಪಸ್ಪರ್ಧಿಸಿದರೆ ಏನಾಗಬಹುದು? ಮುಂದೆ ರಾಜಕೀಯ ಭವಿಷ್ಯ ಹೇಗಿದೆ? ಎಂಬ ಬಗ್ಗೆ ತಿಳಿದುಕೊಳ್ಳಲು ಜ್ಯೋತಿಷ್ಯದ ಮೊರೆ ಹೋದ ಕುಮಾರಸ್ವಾಮಿ ಅವರು ರಾಜಗುರು ದ್ವಾರಕಾನಾಥ್​ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಬೆಂಬಲಿಸಲ್ಲ : ಪ್ರಸನ್ನಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಬೆಂಬಲಿಸಲ್ಲ : ಪ್ರಸನ್ನ

ವಂಶ ಪಾರಂಪರ್ಯ ರಾಜಕಾರಣ ಒಂದು ಕಡೆ ಇರಲಿ, ಯಾರ್ ಯಾರಿಗೆ ಯೋಗ ಇರುತ್ತೊ ಅವರು ಅನುಭವಿಸುತ್ತಾರೆ. ಆ ಹುಡುಗ ಚುನಾವಣೆಗೆ ನಿಲ್ಲಬೇಕು ಎಂಬ ಉತ್ಸಾಹದಲ್ಲಿದ್ದಾನೆ. ಒಬ್ಬ ಗುರುವಾಗಿ ನಮ್ಮ ಮನೆಗೆ ಯಾರೇ ಬಂದರೂ ಧೈರ್ಯ ತುಂಬಿ ಕಳಿಸುತ್ತೇನೆ, ಅದು ನನ್ನ ಕರ್ತವ್ಯ ಎಂದು ದ್ವಾರಕನಾಥ್ ಅವರು ಹೇಳಿದ್ದಾರೆ.

ನಿಖಿಲ್‌ಗೆ ಸುಮಲತಾ ಎದುರಾಳಿ ಇಬ್ರಲ್ಲಿ ಯಾರು ಗೆಲ್ತಾರೆ?

ನಿಖಿಲ್‌ಗೆ ಸುಮಲತಾ ಎದುರಾಳಿ ಇಬ್ರಲ್ಲಿ ಯಾರು ಗೆಲ್ತಾರೆ?

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅದವರ ವಿರುದ್ಧ ಸುಮಲತಾ ಅಂಬರೀಶ್ ಸ್ಪರ್ಧಿಸಲಿದ್ದಾರೆ. ಆದರೆ ಯಾವ ಪಕ್ಷದಿಂದ ಸ್ಪರ್ಧಿಸುವುದು ಎಂಬ ಗೊಂದಲದಲ್ಲಿದ್ದಾರೆ. ಮಾರ್ಚ್ 18ರಂದು ತಮ್ಮ ನಿರ್ಧಾರವನ್ನು ಘೋಷಿಸಲಿದ್ದಾರೆ. ಆದರೆ ಇಬ್ಬರೂ ಚುನಾವಣೆಗೆ ನಿಂತರೇ ಇಬ್ಬರೂ ಕೂಡ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸುತ್ತಿರುವ ಕಾರಣ ತೀವ್ರ ಕುತೂಹಲವಿದೆ.

ಕಾಂಗ್ರೆಸ್, ಜೆಡಿಎಸ್ ಎದುರಾಳಿ

ಕಾಂಗ್ರೆಸ್, ಜೆಡಿಎಸ್ ಎದುರಾಳಿ

ಈ ಕ್ಷೇತ್ರದ ಇತಿಹಾಸ ನೋಡಿದರೆ ಕಾಂಗ್ರೆಸ್- ಜೆಡಿಎಸ್ಸ್‌ಇಲ್ಲಿ ಹಿಂದಿನಿಂದಲೂ ಸಮಬಲದ ಹೋರಾಟ ನಡೆಸುತ್ತಾ ಬಂದಿವೆ. ಈ ಹಿಂದೆ 1989,1999, 2014, 2013ರಲ್ಲಿ ಕಾಂಗ್ರೆಸ್ ಪಾಲಾಗಿದ್ದ ಕ್ಷೇತ್ರವನ್ನು 1996, 2009, 2017, 2018ರಲ್ಲಿ ಜೆಡಿಎಸ್ ಬಾಚಿಕೊಂಡಿತ್ತು. ಆದರೆ, 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ನಡುವೆ ನೇರ ಕಾದಾಟ ನಡೆದಿತ್ತು. ಪ್ರಶ್ನೆಯೆಂದರೆ, ಮೈತ್ರಿಯ ಪರಿಣಾಮವಾಗಿ ಸ್ಥಳೀಯ ಕಾಂಗ್ರೆಸ್ ನಾಯಕರು ಮೈತ್ರಿ ಸೂತ್ರಕ್ಕೆ ಬದ್ಧವಾಗಿ ಜೆಡಿಎಸ್‌ಪರ ಕೆಲಸ ಮಾಡಿ ಅಸ್ತಿತ್ವ ವನ್ನು ಉಳಿಸಿಕೊಳ್ಳುತ್ತಿದ್ದಾರೆ.ಹೀಗಾಗಿ ಸುಮಲತಾ ಅವರಿಗೆ ಬೆಂಬಲ ನೀಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ತಯಾರಿಲ್ಲ.

ನಿಖಿಲ್ ರಾಜಕೀಯ ಭವಿಷ್ಯ ಹೇಗಿದೆ?

ನಿಖಿಲ್ ರಾಜಕೀಯ ಭವಿಷ್ಯ ಹೇಗಿದೆ?

ಈ ವೇಳೆ ತಮ್ಮ ಮಗನ ರಾಜಕೀಯ ಭವಿಷ್ಯ ಏನಾಗಲಿದೆ ಎಂದು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ನಿಖಿಲ್ ಮಂಡ್ಯದಿಂದ ಸ್ಪಸ್ಪರ್ಧಿಸಿದರೆ ಏನಾಗಬಹುದು? ಮುಂದೆ ರಾಜಕೀಯ ಭವಿಷ್ಯ ಹೇಗಿದೆ? ಎಂಬ ಬಗ್ಗೆ ತಿಳಿದುಕೊಳ್ಳಲು ಜ್ಯೋತಿಷ್ಯದ ಮೊರೆ ಹೋದ ಕುಮಾರಸ್ವಾಮಿ ಅವರು ರಾಜಗುರು ದ್ವಾರಕಾನಾಥ್​ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಯಾರು ಬೇಕಾದರೂ ಚುನಾವಣೆಗೆ ನಿಲ್ಲಬಹುದು: ಕುಮಾರಸ್ವಾಮಿ

ಯಾರು ಬೇಕಾದರೂ ಚುನಾವಣೆಗೆ ನಿಲ್ಲಬಹುದು: ಕುಮಾರಸ್ವಾಮಿ

ಚುನಾವಣೆಗೆ ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಎಲ್ಲೋ ಹುಟ್ಟಿ, ಮತ್ತೆಲ್ಲೋ ಸ್ಪರ್ಧೆ ಮಾಡಿ ಶಾಸಕ ಮತ್ತು ಸಂಸದರಾಗಿ ಬಹಳಷ್ಟು ಜನ ಆಯ್ಕೆಯಾಗಿದ್ದಾರೆ. ಎಲ್ಲಾ ಕಡೆ ಪರ ವಿರೋಧ ಇದ್ದೇ ಇರುತ್ತದೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಸ್ಪರ್ಧೆಯನ್ನು ಸಮರ್ಥಿಸಿಕೊಂಡಿದ್ದಾರೆ.

English summary
Chief minister HD kumaraswamy in Hurdle over Mandya Parliament election. So he and Nikhil rushed to astrologer dwarakanath Home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X