ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 'ಕುಚ್ ದಿಲ್ ನೇ ಕಹಾ' ರೆಟ್ರೋ ರಾಗ

By Mahesh
|
Google Oneindia Kannada News

ಬೆಂಗಳೂರು, ಜ.15: ಮಾತೃ ಫೌಂಡೇಷನ್ ನೆರವಿಗಾಗಿ 'ಕುಚ್ ದಿಲ್ ನೇ ಕಹಾ' ಹೆಸರಿನಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿಂದಿ ಚಿತ್ರರಂಗದ ಖ್ಯಾತ ಗಾಯಕಿಯರಾದ ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ ಹಾಗೂ ಗೀತಾ ದತ್ ಅವರ ಕಂಠಸಿರಿಯಲ್ಲಿ ಬಂದ ಹಾಡುಗಳನ್ನು ರೆಟ್ರೋ ಮ್ಯೂಸಿಕಲ್ ಇವೆಂಟ್ ನಲ್ಲಿ ಕೇಳಬಹುದು.

ಗಾಯಕಿ ಸಮನ್ವಿತಾ ಶರ್ಮ ಹಾಗೂ ತಂಡ ನಡೆಸಿಕೊಡುವ ಈ ಕಾರ್ಯಕ್ರಮ ಆರ್ಕೆಸ್ಟ್ರಾ ಸಂಯೋಜನೆಯನ್ನು ವಿಶೇಷವಾಗಿ ಮುಂಬೈನ ಪ್ರದೀಪ್ ಪಟ್ಕರ್ ಅವರು ವಹಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ಟಿಕೆಟ್ ನಿಂದ ಬರುವ ಮೊತ್ತವನ್ನು ವಿಕಲಾಂಗರಿಗೆ ಆಸರೆ ನೀಡಿ ಪೋಷಣೆ ಮಾಡುತ್ತಿರುವ ಮಾತೃ ಫೌಂಡೇಷನ್ ಗೆ ನೀಡಲಾಗುತ್ತದೆ.

ರೆಟ್ರೋ ರಾಗದಲ್ಲಿ ಖ್ಯಾತ ಗಾಯಕಿ ಸಮನ್ವಿತಾ ಶರ್ಮ ಅವರ ಜೊತೆಗೆ ವಾಯ್ಸ್ ಬೆಂಗಳೂರು ಖ್ಯಾತಿಯ ಅನಿಕೇತ್ ಪ್ರಭು, ಸ್ಟಾರ್ ಸಿಂಗರ್ ಖ್ಯಾತಿಯ ಸುಬ್ರತ್ ಸಾಹೂ, ಸರೆಗಾಮಾಪ ಹಾಗೂ ವಾಯ್ಸ್ ಆಫ್ ಬೆಂಗಳೂರು ಖ್ಯಾತಿ ಗೋವಿಂದ್ ಹಾಗೂ ರೋಹಿಣಿ ಪ್ರಭುನಂದನ್ ಅವರು ಸಾಥ್ ನೀಡಲಿದ್ದಾರೆ.

Kuch Dil Ne Kaha retro Bollywood musical event

ಸಮನ್ವಿತಾ ಶರ್ಮ ಬಗ್ಗೆ

SAAMA ಎಂಬ ಕಲೆ, ಮನರಂಜನಾ ತಂಡದ ನಿರ್ದೇಶಕಿ, ಗಾಯಕಿ, ನಿರೂಪಕಿ, ಸುವರ್ಣ ಟಿವಿಯ ಸ್ಟಾರ್ ಸಿಂಗರ್ 2ನಿಂದ ಜನಪ್ರಿಯತೆ ಗಳಿಸಿದವರು.ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಸಮನ್ವಿತಾ ಅವರು ಕಥಕ್ ನೃತ್ಯಗಾರ್ತಿ ಕೂಡಾ ಹೌದು, ಈಗ 'ಸಾಮ' ಎಂಬ ತಂಡ ಕಟ್ಟಿಕೊಂಡು ಅರ್ಥಪೂರ್ಣ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

ಕಾರ್ಯಕ್ರಮ: ಕುಚ್ ದಿಲ್ ನೇ ಕಹಾ
ತಂಡ: ಸಾಮಾ, ಸಮನ್ವಿತಾ ಶರ್ಮ ಹಾಗೂ ತಂಡ.
ನಿರೂಪಣೆ: ವಾಸಂತಿ ಹರಿಪ್ರಕಾಶ್
ಸ್ಥಳ: ಎಡಿಎ ರಂಗಮಂದಿರ, ಜೆ.ಸಿ ರಸ್ತೆ, ಬೆಂಗಳೂರು
ದಿನಾಂಕ/ಸಮಯ: 17ನೇ ಜನವರಿ, 2015, 6.30 PM
ಟಿಕೆಟ್ ಬೆಲೆ: 500 ರು, 300 ರು, 200 ರು
ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಗಾಗಿ: 99166 88166 ಅಥವಾ ಬುಕ್ ಯುವರ್ ಇವೆಂಟ್.ಕಾಂ ಗೆ ಭೇಟಿ ಕೊಡಿ

ಸಮನ್ವಿತಾ ಅವರ ಹಾಡಿನ ಸ್ಯಾಂಪಲ್ ಇಲ್ಲಿದೆ.. ಅವರ ಯೂಟ್ಯೂಬ್ ಚಾನೆಲ್ ಲಿಂಕ್ ಇಲ್ಲಿದೆ

English summary
"Kuch Dil Ne Kaha" is a retro Bollywood musical event featuring the hits of the three legendary female playback singers of Indian cinema – Lata Mangeshkar, Asha Bhonsle and Geetha Dutt. This musical evening will feature a wide variety of evergreen hits ranging from melody, mujra to foot-tapping numbers.Concept and lead – Samanvitha Sharma
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X