ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವೇಶ್ವರ ಬಸ್ ನಿಲ್ದಾಣಕ್ಕೆ 60 ಬಸ್ ವರ್ಗಾಯಿಸಿದ ಕೆಎಸ್ಆರ್‌ಟಿಸಿ

By Gururaj
|
Google Oneindia Kannada News

ಬೆಂಗಳೂರು, ಮೇ 29 : ಕೆಎಸ್ಆರ್‌ಟಿಸಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ 60 ಬಸ್ಸುಗಳನ್ನು ವರ್ಗಾಯಿಸಿದೆ. ನಗರದಲ್ಲಿ ವಾಹನ ದಟ್ಟಣೆಯನನ್ನು ಕಡಿಮೆ ಮಾಡಲು ಸಂಸ್ಥೆಯು ಮೊದಲ ಹೆಜ್ಜೆ ಇಟ್ಟಿದೆ.

60 ಬಸ್ಸುಗಳನ್ನು ಸ್ಥಳಾಂತರ ಮಾಡಿರುವುದರಿಂದ ಪ್ರತಿದಿನ ಸುಮಾರು 250ಲೀಟರ್ ಡೀಸೆಲ್ ಮತ್ತು 1 ರಿಂದ 1.30 ಗಂಟೆಯ ಪ್ರಯಾಣದ ಅವಧಿ ಉಳಿತಾಯವಾಗಲಿದೆ. ಮೆಜೆಸ್ಟಿಕ್ ಸುತ್ತಮತ್ತಲಿನ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ.

ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಮತ್ತೆ ಜೀವಕಳೆ?ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಮತ್ತೆ ಜೀವಕಳೆ?

'ಕರ್ನಾಟಕ ಸಾರಿಗೆ' ಬಸ್ಸುಗಳು ಮಾತ್ರ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಿಂದ ಸಂಚಾರ ನಡೆಸಲಿವೆ. 2014ರಲ್ಲಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಕಾರ್ಯಾರಂಭ ಮಾಡಿತ್ತು. 2015ರಲ್ಲಿ ನಷ್ಟದ ನೆಪದಿಂದಾಗಿ ಬಸ್ ನಿಲ್ದಾಣವನ್ನು ಪುನಃ ಆರಂಭಿಸಲಾಗಿದೆ.

KSRTC transfers 60 bus to Basaveshwara bus station Peenya

ಮೆಜೆಸ್ಟಿಕ್‌ನಿಂದ ಇನ್ನೂ ಹಲವು ಬಸ್ಸುಗಳನ್ನು ವರ್ಗಾವಣೆ ಮಾಡಲು ಹೊಸ ಸರ್ಕಾರ ಒಪ್ಪಿಗೆ ನೀಡಿದರೆ ಸಂಚಾರ ದಟ್ಟಣೆ ಮತ್ತಷ್ಟು ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೀಣ್ಯಕ್ಕೆ ಬಸ್ ಶಿಫ್ಟ್: ಮೊದಲ ದಿನವೇ ಪ್ರಯಾಣಿಕರಿಂದ ಉತ್ತಮ ಸ್ಪಂದನೆಪೀಣ್ಯಕ್ಕೆ ಬಸ್ ಶಿಫ್ಟ್: ಮೊದಲ ದಿನವೇ ಪ್ರಯಾಣಿಕರಿಂದ ಉತ್ತಮ ಸ್ಪಂದನೆ

ನಷ್ಟದ ನೆಪ ಹೇಳಿ ಬಂದ್ ಮಾಡಲಾಗಿದ್ದ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣವನ್ನು ಏ.14ರಂದು ಪುನಃ ಆರಂಭಿಸಲಾಗಿದೆ. ಬಸ್ ನಿಲ್ದಾಣಕ್ಕೆ ತೆರಳುವ ಜನರಿಗೆ ಅನುಕೂಲವಾಗಲಿ ಎಂದು ಬಿಎಂಟಿಸಿ ಸಂಪರ್ಕ ಬಸ್ಸುಗಳನ್ನು ಆರಂಭಿಸಿದೆ.

English summary
The Karnataka State Road Transport Corporation transferred 60 Karnataka Sarige bus to Basaveshwara bus station Peenya, Bengaluru. Peenya bus stand reopened from April 14, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X