ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಹಣ್ಣು, ತರಕಾರಿ ಹೊತ್ತು ತರಲಿವೆ ಸರ್ಕಾರಿ ಬಸ್!

|
Google Oneindia Kannada News

ಬೆಂಗಳೂರು, ಜುಲೈ 29; ಬೆಂಗಳೂರು ನಗರಕ್ಕೆ ಅಕ್ಕ-ಪಕ್ಕದ ಜಿಲ್ಲೆಗಳಿಂದ ಹಣ್ಣು, ತರಕಾರಿ ಆಗಮಿಸುತ್ತದೆ. ಇದನ್ನೇ ಆದಾಯದ ಮೂಲವಾಗಿ ಮಾಡಿಕೊಳ್ಳಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತೀರ್ಮಾನಿಸಿದೆ. ಇದಕ್ಕಾಗಿ ವಿಶೇಷವಾಗಿ ಹವಾನಿಯಂತ್ರಿತ ಬಸ್‌ಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಕೋವಿಡ್ ಬಳಿಕ ಕೆಎಸ್ಆರ್‌ಟಿಸಿ ನಷ್ಟದಲ್ಲಿದೆ. ಆದಾಯ ಹೆಚ್ಚಿಸಿಕೊಳ್ಳಲು ಪಾರ್ಸೆಲ್ ಸೇವೆಯನ್ನು ಆರಂಭಿಸಲಾಗಿದೆ. ಈಗ ಕೃಷಿ ಉತ್ಪನ್ನಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಣೆ ಮಾಡುವ ಸೇವೆಯನ್ನು ಆರಂಭಿಸಲಾಗುತ್ತಿದೆ.

ಬೆಂಗಳೂರು-ಪಾಂಡಿಚೇರಿ ನಡುವೆ ಐಷಾರಾಮಿ ಬಸ್; ದರಪಟ್ಟಿ ಬೆಂಗಳೂರು-ಪಾಂಡಿಚೇರಿ ನಡುವೆ ಐಷಾರಾಮಿ ಬಸ್; ದರಪಟ್ಟಿ

ಕೆಎಸ್ಆರ್‌ಟಿಸಿ 2003ರಲ್ಲಿ ಹವಾನಿಯಂತ್ರಿತ ಬಸ್ ಸೇವೆ ಪರಿಚಯಿಸಿತ್ತು. 11 ಲಕ್ಷ ಕಿ. ಮೀ.ಗಿಂತ ಹೆಚ್ಚು ಸಂಚಾರ ನಡೆಸಿದ ಹವಾನಿಯಂತ್ರಿತ ಬಸ್‌ಗಳನ್ನು ಗುಜರಿಗೆ ಕಳಿಸಲಾಗುತ್ತದೆ. ಇಂತಹ ಬಸ್‌ಗಳನ್ನು ಮರು ವಿನ್ಯಾಸಗೊಳಿಸಿ ಕೃಷಿ ಉತ್ಪನ್ನ ಸಾಗಣೆಗೆ ಬಳಕೆ ಮಾಡಲಾಗುತ್ತದೆ.

ಬೆಂಗಳೂರು-ತಿರುಪತಿ ಪ್ಯಾಕೇಜ್ ಮತ್ತೆ ಆರಂಭ; ದರಪಟ್ಟಿ ಬೆಂಗಳೂರು-ತಿರುಪತಿ ಪ್ಯಾಕೇಜ್ ಮತ್ತೆ ಆರಂಭ; ದರಪಟ್ಟಿ

ಏಪ್ರಿಲ್‌ನಲ್ಲಿಯೇ ಇಂತಹ ಸೇವೆಯನ್ನು ಆರಂಭಿಸುವ ಪ್ರಸ್ತಾಪ ಕೆಎಸ್ಆರ್‌ಟಿಸಿ ಮುಂದಿತ್ತು. ಆದರೆ, ಕೋವಿಡ್ ಲಾಕ್‌ಡೌನ್ ಘೋಷಣೆ ಕಾರಣದಿಂದಾಗಿ ಈಗ ಆರಂಭವಾಗುತ್ತಿದೆ. ಇದಕ್ಕಾಗಿ ಬಸ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತಿದೆ.

ಕೋವಿಡ್ ನಷ್ಟದಿಂದ ಸಾರಿಗೆ ಪಾರಾಗಲು 'ನಮ್ಮ ಕಾರ್ಗೊ' ಪಾರ್ಸೆಲ್ ವ್ಯವಸ್ಥೆ ಕೋವಿಡ್ ನಷ್ಟದಿಂದ ಸಾರಿಗೆ ಪಾರಾಗಲು 'ನಮ್ಮ ಕಾರ್ಗೊ' ಪಾರ್ಸೆಲ್ ವ್ಯವಸ್ಥೆ

ಪ್ರಾಯೋಗಿಕವಾಗಿ ಸೇವೆ

ಪ್ರಾಯೋಗಿಕವಾಗಿ ಸೇವೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಾಯೋಗಿಕ ಹಂತದಲ್ಲಿ ಒಂದು ತಿಂಗಳ ಕಾಲ ಬೆಂಗಳೂರು ಸುತ್ತಮುತ್ತಲ ಹೊಸಕೋಟೆ, ಚಿಕ್ಕಬಳ್ಳಾಪುರ, ಕೋಲಾರದಿಂದ ಬೆಂಗಳೂರು ನಗರಕ್ಕೆ ಹಣ್ಣು, ತರಕಾರಿ ಸಾಗಣೆ ಮಾಡಲಿದೆ. ಈ ಯೋಜನೆ ಯಶಸ್ವಿಯಾದರೆ ಬೇರೆ ಜಿಲ್ಲೆಗಳಲ್ಲಿಯೂ ಇಂತಹ ಸೇವೆ ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ.

ಗುತ್ತಿಗೆ ಆಧಾರದಲ್ಲಿ ಸೇವೆ

ಗುತ್ತಿಗೆ ಆಧಾರದಲ್ಲಿ ಸೇವೆ

ಕೆಎಸ್ಆರ್‌ಟಿಸಿ ಗುತ್ತಿಗೆ ಆಧಾರದಲ್ಲಿ ಈ ಸೇವೆ ಒದಗಿಸುವ ಆಲೋಚನೆಯಲ್ಲಿದೆ. ರೈತರು, ಸಹಕಾರ ಸಂಘಗಳು ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಬೇಕು. ಹವಾನಿಯಂತ್ರಿತ ಬಸ್‌ಗಳಾಗಿರುವುದರಿಂದ ಹಣ್ಣು, ತರಕಾರಿಯ ತಾಜಾತನವನ್ನು ಸಹ ಕಾಪಾಡಿಕೊಳ್ಳಲು ಸಹಾಯಕವಾಗಲಿದೆ.

ಬೆಂಗಳೂರು ನಗರಕ್ಕೆ ಹಣ್ಣು, ತರಕಾರಿ

ಬೆಂಗಳೂರು ನಗರಕ್ಕೆ ಹಣ್ಣು, ತರಕಾರಿ

ನಾಲ್ಕು ಚಕ್ರದ ಆಟೋ, ಲಾರಿಗಳ ಮೂಲಕ ರೈತರು ಕಲಾಸಿಪಾಳ್ಯ, ಕೆ. ಆರ್. ಮಾರುಕಟ್ಟೆಗಳಿಗೆ ಹಣ್ಣು, ಸೊಪ್ಪು, ತರಕಾರಿಗಳನ್ನು ಸಾಗಣೆ ಮಾಡುತ್ತಾರೆ. ಕೆಲವು ರೈತರು ಕೆಎಸ್ಆರ್‌ಟಿಸಿ ಕೆಂಪು ಬಸ್‌ಗಳಲ್ಲಿಯೂ ಸಾಗಿಸುತ್ತಾರೆ. ಇದನ್ನೇ ಆದಾದ ಮೂಲವಾಗಿ ಮಾಡಿಕೊಳ್ಳಲು ಚಿಂತಿಸಿರುವ ಕೆಎಸ್ಆರ್‌ಟಿಸಿ ವಿಶೇಷ ವಿನ್ಯಾಸದ ಬಸ್ ಓಡಿಸಲು ಮುಂದಾಗಿದೆ.

Recommended Video

Ind vs SL ಅಂತಿಮ ಟಿ20 ಪಂದ್ಯಗಳಿಗೆ ಲಭ್ಯ ಆಟಗಾರರ ಪಟ್ಟಿ | Oneindia Kannada
ನಿಗಮದಲ್ಲಿ 500 ಬಸ್‌ಗಳಿವೆ

ನಿಗಮದಲ್ಲಿ 500 ಬಸ್‌ಗಳಿವೆ

2003ರಲ್ಲಿ ಹವಾನಿಯಂತ್ರಿತ ಬಸ್ ಸೇವೆ ಆರಂಭಿಸಿದ ಕೆಎಸ್‌ಆರ್‌ಟಿಸಿ ಇದುವರೆಗೆ 283 ಬಸ್‌ಗಳನ್ನು ಗುಜರಿಗೆ ಕಳಿಸಿದೆ. ಸದ್ಯ ನಿಗಮದಲ್ಲಿ 500 ಬಸ್‌ಗಳಿವೆ. ಕಾರ್ಯಾಚರಣೆ ನಡೆಸದ ಈ ಬಸ್‌ಗಳನ್ನು ಮರು ವಿನ್ಯಾಸಗೊಳಿಸಿ, ಆದಾಯದ ಮೂಲವಾಗಿ ಬದಲಾಯಿಸುವ ಪ್ರಕ್ರಿಯೆ ಆರಂಭವಾಗಿದೆ. ಪ್ರಾಯೋಗಿಕ ಸಂಚಾರಕ್ಕೆ ಹೇಗೆ ಪ್ರತಿಕ್ರಿಯೆ ಸಿಗಲಿದೆ? ಎಂದು ಕಾದು ನೋಡಬೇಕಿದೆ.

English summary
Karnataka State Road Transport Corporation (KSRTC) will transport fruit and vegetables to Bengaluru. It will redesign un used air condition buses for this purpose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X