ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಣಂಗಾಗಿ ಕೆಎಸ್ಆರ್‌ಟಿಸಿಯಿಂದ ವಿಶೇಷ ಬಸ್‌

|
Google Oneindia Kannada News

ಬೆಂಗಳೂರು, ಸೆ.3 : ಓಣಂ ಹಬ್ಬದ ಅಂಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇರಳಕ್ಕೆ ವಿಶೇಷ ಬಸ್ ಸೌಲಭ್ಯವನ್ನು ಒದಗಿಸಿದೆ. ಕಣ್ಣೂರು, ಎರ್ನಾಕುಲಂ, ಕೊಟ್ಟಾಯಂ, ತಿರುವನಂತಪುರಂ ಮುಂತಾದ ನಗರಗಳಿಗೆ ಈ ಬಸ್ಸುಗಳು ಸಂಚರಿಸಲಿವೆ.

ಕೆಎಸ್ಆರ್‌ಟಿಸಿ ಸೆ.3 ರಿಂದ 9ರವರೆಗೆ ಓಣಂ ಹಬ್ಬದ ಅಂಗವಾಗಿ ಕೇರಳಕ್ಕೆ ವಿಶೇಷ ಬಸ್‌ ಸೌಲಭ್ಯವನ್ನು ಒದಗಿಸಲಿದೆ. ನಗರದ ಶಾಂತಿನಗರ ಮತ್ತು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಈ ಬಸ್ಸುಗಳು ಸಂಚರಿಸಲಿವೆ.

ksrtc

ಕೇರಳದ ಪ್ರಮುಖ ನಗರಗಳಾದ ಕಣ್ಣೂರು, ಎರ್ನಾಕುಲಂ, ಪಾಲ್‌ಘಾಟ್, ಕೊಟ್ಟಾಯಂ, ತಿರುವನಂತಪುರಂ ಮುಂತಾದ ನಗರಗಳಿಗೆ ಕೆಎಸ್ಆರ್‌ಟಿಸಿಯ ವಿಶೇಷ ಬಸ್ಸುಗಳು ಸಂಚರಿಲಿದ್ದು. ಆನ್‌ಲೈನ್ ಮೂಲಕವೂ ಪ್ರಯಾಣಿಕರು ವಿಶೇಷ ಬಸ್ಸುಗಳ ಟಿಕೆಟ್ ಬುಕ್ ಮಾಡಬಹುದು. [ಟಿಕೆಟ್ ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ]

ನಾಲ್ಕು ಅಥವ ಅದಕ್ಕಿಂತ ಹೆಚ್ಚಿನ ಜನರು ಟಿಕೆಟ್ ಒಂದೇ ಟಿಕೆಟ್‌ ಬುಕ್ ಮಾಡಿದರೆ, ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಯಾಣಿಕರು ಆಗಮನ ಮತ್ತು ನಿರ್ಗಮನದ ಟಿಕೆಟ್‌ ಅನ್ನು ಒಟ್ಟಿಗೆ ಬುಕ್ ಮಾಡಿದರೆ, ಶೇ 10ರಷ್ಟು ರಿಯಾಯಿತಿ ನೀಡಲಾಗುತ್ತದೆ. [ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಹೇಗಿದೆ ಗೊತ್ತಾ?]

ಪ್ರಯಾಣಿಕರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಲು ಬೆಂಗಳೂರಿನಲ್ಲಿ 173, ಮೈಸೂರಿನಲ್ಲಿ 14, ಮಂಗಳೂರಿನಲ್ಲಿ 54 ಸೇರಿದಂತೆ ಒಟ್ಟು 230 ಕೌಂಟರ್‌ಗಳನ್ನು ತೆರಯಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

English summary
In view of the Tiru Onam festival The Karnataka State Road Transport Corporation (KSRTC) will operate extra buses to Kerala from September 3 to 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X