ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶೋತ್ಸವ: 1,200 ಹೆಚ್ಚುವರಿ ಬಸ್ ಓಡಿಸಲು ಮುಂದಾದ ಕೆಎಸ್ಆರ್ ಟಿಸಿ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 8: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಗೌರಿ-ಗಣೇಶ ಹಬ್ಬದ ಅಂಗವಾಗಿ ಸೆಪ್ಟೆಂಬರ್ 11 ಹಾಗೂ 12ರಂದು ಬೆಂಗಳೂರಿನಿಂದ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಪ್ರದೇಶಗಳಿಗೆ ಹೆಚ್ಚುವರಿಯಾಗಿ 1200 ಕ್ಕೂ ಅಧಿಕ ಬಸ್‌ಗಳನ್ನು ವ್ಯವಸ್ಥೆ ಮಡಲಾಗಿದೆ.

ಸರ್ಕಾರಿ ಬಸ್ ಪ್ರಯಾಣಿಕರು ಟಿಕೆಟ್ ದರ ಏರಿಕೆಗೆ ಸಜ್ಜಾಗಿ ಸರ್ಕಾರಿ ಬಸ್ ಪ್ರಯಾಣಿಕರು ಟಿಕೆಟ್ ದರ ಏರಿಕೆಗೆ ಸಜ್ಜಾಗಿ

ಕೆಂಪೇಗೌಡ ಬಸ್‌ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹೊರನಾಡು, ದಾವಂಗೆರೆ, ಹುಬ್ಬಳ್ಳಿ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಕೊಪ್ಪಳ, ಬಳ್ಳಾರಿ, ಬೀದರ್, ಯಾದಗಿರಿ, ಬೀದರ್, ತಿರುಪತಿ ಕಡೆಗೆ ಸಂಚರಿಸಲಿದೆ. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಮಡಿಕೇರಿ ಕಡೆಗೆ ಹಾಗೂ ಶಾಂತಿನಗರದ ಟಿಟಿಎಂಸಿ ಯಿಂದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಕಡೆಗೆ ಬಸ್‌ಗಳು ಹೊರಡಲಿವೆ. ಹೆಚ್ಚಿನ ವಿವರಕ್ಕಾಗಿ www.ksrtc.in ಸಂಪರ್ಕಿಸಬಹುದಾಗಿದೆ.

ಗಣೇಶ ಚತುರ್ಥಿ: ಸರ್ಕಾರಿ ಬಸ್‌ ಫುಲ್, ಖಾಸಗಿ ಪ್ರಯಾಣ ದರ ದುಪ್ಪಟ್ಟು ಗಣೇಶ ಚತುರ್ಥಿ: ಸರ್ಕಾರಿ ಬಸ್‌ ಫುಲ್, ಖಾಸಗಿ ಪ್ರಯಾಣ ದರ ದುಪ್ಪಟ್ಟು

KSRTC to run 1,200 additional buses during Ganesha festival

ಬಸವೇಶ್ವರ ನಿಲ್ದಾಣ, ವಿಜಯನಗರ, ಜಯನಗರ ನಾಲ್ಕನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್, ಮಲ್ಲೇಶ್ವರ 18ನೇ ಅಡ್ಡರಸ್ತೆ, ಬನಶಂಕರಿ, ಜೀವನ್ ಭೀಮಾನಗರ, ಐಟಿಐ ಗೇಟ್, ಗಂಗಾನಗರ, ಕೆಂಗೇರಿ ಉಪನಗರದಿಂದ ಪ್ರಯಾಣಿಕರ ಬೇಡಿಕೆ ಅನುಗುಣವಾಗಿ, ಶಿವಮೊಗ್ಗ, ದಾವಣಗೆರೆ ಇನ್ನಿತರೆ ಸ್ಥಳಗಳಿಗೆ ಬಿಡಲು ನಿಗಮ ನಿರ್ಧರಿಸಿದೆ.

English summary
KSRTC has announced to run 1,200 additional bus service during Ganesha festival between various destination across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X