ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್‌ಆರ್‌ಟಿಸಿಗೆ ಸಿಬ್ಬಂದಿ ಗೈರುಹಾಜರಿಯೇ ದೊಡ್ಡ ಸಮಸ್ಯೆ!

|
Google Oneindia Kannada News

ಬೆಂಗಳೂರು, ಮೇ 02: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಕೆಎಸ್‌ಆರ್‌ಟಿಸಿ) ಸಿಬ್ಬಂದಿ ಗೈರುಹಾಜರಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಒಂದು ವರ್ಗದ ನೌಕರರು ಪೂರ್ವ ಮಾಹಿತಿ ಇಲ್ಲದೆ ಬಂಕ್ (ಗೈರು) ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್ ಲಾಕ್‌ಡೌನ್ ನಂತರ ಪ್ರಾಥಮಿಕ ಹಂತದಿಂದ ಬಸ್‌ಗಳನ್ನು ಓಡಿಸುವಲ್ಲಿ ಕೆಎಸ್‌ಆರ್‌ಟಿಸಿ ತೊಡಗಿಸಿಕೊಂಡಿರುವುದರಿಂದ, ಸಿಬ್ಬಂದಿ ಹಠಾತ್ ಗೈರಾಗುವುದು ತನ್ನ ದೈನಂದಿನ ವ್ಯವಹಾರ ಮತ್ತು ಆದಾಯಕ್ಕೆ ಅಪಾಯವನ್ನುಂಟು ಮಾಡುತ್ತದೆ.

ಕೆಎಸ್‌ಆರ್‌ಟಿಸಿ ಸಾರಿಗೆ ಸಂಸ್ಥೆಯಲ್ಲಿ 35,000 ಉದ್ಯೋಗಿಗಳನ್ನು ಹೊಂದಿರುವ ದೇಶದ ಅತಿದೊಡ್ಡ ಸಾರಿಗೆ ನೌಕರರ ಸಂಸ್ಥೆಗಳಲ್ಲಿ ಒಂದಾಗಿದೆ. 35,000 ಮಂದಿಯಲ್ಲಿ 8.414 ಮಂದಿ ಶಿಸ್ತಿನ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಸುಮಾರು 7,200 ಶಿಸ್ತಿನ ಪ್ರಕರಣಗಳನ್ನು ಕೊನೆಗೊಳಿಸಲಾಗಿದ್ದು, ಕನಿಷ್ಠ 100, 200 ಮತ್ತು ಗರಿಷ್ಠ 500 ರೂ. ದಂಡ ವಿಧಿಸಲಾಗಿದ್ದು, ಈ ಪ್ರಕರಣಗಳಿಗೆ ಕನಿಷ್ಠವೆಂದರೂ 25,000 ರೂ. ದಂಡ ವಿಧಿಸಬಹುದಾಗಿದೆ.

KSRTC: Staff Absenteeism Is a Big Problem For KSRTC

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ವಿ. ಅನ್ಬುಕುಮಾರ್, "10 ತಿಂಗಳಿಗಿಂತ ಕಡಿಮೆ ಅವಧಿಗೆ ಕರ್ತವ್ಯಕ್ಕೆ ಗೈರುಹಾಜರಾದ ನೌಕರರಿಗೆ ಯಾವುದೇ ಶಿಸ್ತು ಕ್ರಮದಿಂದ ವಿನಾಯಿತಿ ನೀಡಿ ವರದಿ ಆದೇಶ ಹೊರಡಿಸಿ ಬಸ್‌ ಓಡಿಸಲು ಅವಕಾಶ ಕಲ್ಪಿಸಲಾಗಿದೆ," ಎಂದು ಹೇಳಿದರು.

"ಅದರಂತೆ ಕಳೆದ ಮೂರು ದಿನಗಳಿಂದ 110 ಗೈರು ಹಾಜರಾದ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸಾರಿಗೆ ಸಂಸ್ಥೆಗೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ 7,200 ಶಿಸ್ತಿನ ಮೊಕದ್ದಮೆಗಳನ್ನು ಏಕಕಾಲದಲ್ಲಿ ಪರಿಹಾರ ಮತ್ತು ಸದ್ಭಾವನೆಯಿಂದ ಮನ್ನಾ ಮಾಡಲಾಗಿದೆ, ನೌಕರರನ್ನು ಶಿಕ್ಷಿಸುವುದು ಮಾತ್ರವಲ್ಲದೆ ಅವರ ಕಲ್ಯಾಣಕ್ಕಾಗಿ ಪ್ರೋತ್ಸಾಹ, ಪ್ರೇರಣೆ ಮತ್ತು ಕೆಲಸ ಮಾಡುವುದು ನಮ್ಮ ಕರ್ತವ್ಯ," ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಹೇಳಿದರು.

Recommended Video

Virat Kohli ಅರ್ಧ ಶತಕ ಗಳಿಸಿದಾಗ ಪತ್ನಿ Anushka ಖುಷಿ ನೋಡಿ | Oneindia Kannada
KSRTC: Staff Absenteeism Is a Big Problem For KSRTC

"ಕಳ್ಳತನ/ಅಪಘಾತ/ಗೈರುಹಾಜರಿ ಪ್ರಕರಣಗಳಲ್ಲಿ ಭಾಗಿಯಾಗದಂತೆ ನೌಕರರಿಗೆ ಇದು ಕೇವಲ ಒಂದು ಬಾರಿ ಸಡಿಲಿಕೆಯಾಗಿದೆ," ಎಂದು ವಿ. ಅನ್ಬುಕುಮಾರ್ ಒತ್ತಿ ಹೇಳಿದ್ದಾರೆ.

English summary
Staff absenteeism has become a major problem for Karnataka State Road Transport Corporation (KSRTC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X