ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಭಾಗದ ಕೆಎಸ್ಆರ್‌ಟಿಸಿ ಬಸ್ ಮೆಜೆಸ್ಟಿಕ್‌ಗೆ ಸ್ಥಳಾಂತರ

|
Google Oneindia Kannada News

ಬೆಂಗಳೂರು, ನವೆಂಬರ್ 12 : ಮೈಸೂರು, ಕೊಡಗು ಭಾಗಕ್ಕೆ ಸಂಚಾರ ನಡೆಸುವ ಕೆಎಸ್ಆರ್‌ಟಿಸಿ ಬಸ್ಸುಗಳು ಇನ್ನು ಮುಂದೆ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದಲೇ ಹೊರಡಲಿವೆ. 2011ರಲ್ಲಿ ಮೈಸೂರು ಭಾಗದ ಬಸ್ಸುಗಳನ್ನು ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿತ್ತು.

ನಮ್ಮ ಮೆಟ್ರೋ ಕಾಮಗಾರಿಯ ಹಿನ್ನಲೆಯಲ್ಲಿ ಬಿಎಂಆರ್‌ಸಿಎಲ್ ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ವಶಕ್ಕೆ ಪಡೆದುಕೊಂಡಿತ್ತು. ಆದ್ದರಿಂದ, ಮೈಸೂರು, ಕೊಡಗು ಭಾಗಕ್ಕೆ ಸಂಚಾರ ನಡೆಸುವ ಬಸ್ಸುಗಳನ್ನು ಸ್ಥಳಾಂತರಿಸಲಾಗಿತ್ತು.

ಬಸ್‌ ಪ್ರಯಾಣ ದರ ಹೆಚ್ಚಳ ಪ್ರಸ್ತಾವಕ್ಕೆ ಕುಮಾರಸ್ವಾಮಿ ನಕಾರಬಸ್‌ ಪ್ರಯಾಣ ದರ ಹೆಚ್ಚಳ ಪ್ರಸ್ತಾವಕ್ಕೆ ಕುಮಾರಸ್ವಾಮಿ ನಕಾರ

ಈಗ ಮೆಟ್ರೋ ಕಾಮಗಾರಿ ಮುಗಿದಿರುವ ಹಿನ್ನಲೆಯಲ್ಲಿ ಡಿಸೆಂಬರ್ 1ರಿಂದ ಕೆಎಸ್‌ಆರ್‌ಟಿಸಿ ಬಸ್ಸುಗಳು ಪುನಃ ಮೆಜೆಸ್ಟಿಕ್‌ನಿಂದ ಸಂಚಾರ ಆರಂಭಿಸಲಿವೆ. ಬಿಎಂಆರ್‌ಸಿಎಲ್ 22 ಎಕರೆ ಜಾಗವನ್ನು ವಶಕ್ಕೆ ಪಡೆದುಕೊಂಡಿತ್ತು. 7.5 ಎಕರೆ ಜಾಗದಲ್ಲಿ ಮೆಟ್ರೋ ನಿಲ್ದಾಣನ್ನು ನಿರ್ಮಾಣ ಮಾಡಲಾಗಿದೆ.

ಬೆಂಗಳೂರಿಂದ ತಾಂಜಾವೂರು,ಕೊಯಮತ್ತೂರಿಗೆ ಹೊಸ ಸ್ಲೀಪರ್ ಬಸ್ಬೆಂಗಳೂರಿಂದ ತಾಂಜಾವೂರು,ಕೊಯಮತ್ತೂರಿಗೆ ಹೊಸ ಸ್ಲೀಪರ್ ಬಸ್

KSRTC set to shift its premier services from Mysuru Satellite to Majestic

ಈಗ ಕಾಮಗಾರಿ ಮುಗಿದ ಬಳಿಕ ಕೆಎಸ್ಆರ್‌ಟಿಸಿ ಹಾಸನ, ಮಂಗಳೂರು, ಉಡುಪಿ ಭಾಗದ ಬಸ್ಸುಗಳನ್ನು ಮೆಜೆಸ್ಟಿಕ್‌ನಿಂದ ಓಡಿಸುತ್ತಿದೆ. ಡಿಸೆಂಬರ್ 1ರಿಂದ ಇಲ್ಲಿಂದ ಹೊರಡುವ ಬಸ್‌ಗಳು ಸ್ಯಾಟಲೈಟ್ ನಿಲ್ದಾಣ ತಲುಪಿ ಅಲ್ಲಿಂದ, ಮೈಸೂರು ಕಡೆ ಸಾಗಲಿವೆ.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ 1, 2 ರೂ.ಗೆ ಕುಡಿಯುವ ನೀರುಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ 1, 2 ರೂ.ಗೆ ಕುಡಿಯುವ ನೀರು

ಪ್ರಯಾಣಿಕರು ಮೆಜೆಸ್ಟಿಕ್ ಅಥವ ಸ್ಯಾಟಲೈಟ್ ಬಸ್ ನಿಲ್ದಾಣದ ಪಿಕಪ್ ಪಾಯಿಂಟ್‌ಗಳಲ್ಲಿ ಬಸ್ ಹತ್ತಬಹುದು. ಮೆಟ್ರೋ ರೈಲು ಸಂಚಾರ ನಡೆಸುವುದರಿಂದ ಮೆಜೆಸ್ಟಿಕ್ ನಿಲ್ದಾಣಕ್ಕೆ ಆಗಮಿಸುವುದು ಜನರಿಗೆ ಅನುಕೂಲವಾಗಲಿದೆ.

ಪ್ರೀಮಿಯರ್ ಬಸ್‌ಗಳು ಮಾತ್ರ ಮೆಜೆಸ್ಟಿಕ್ ನಿಲ್ದಾಣದಿಂದ ಸಂಚಾರ ನಡೆಸಲಿವೆ. ನಾನ್ ಪ್ರೀಮಿಯರ್ ಬಸ್‌ಗಳು ಸ್ಯಾಟ್‌ಲೈಟ್ ಬಸ್ ನಿಲ್ದಾಣದಿಂದಲೇ ಮೈಸೂರು ಭಾಗಕ್ಕೆ ಸಂಚಾರ ನಡೆಸಲಿವೆ ಎಂದು ಕೆಎಸ್ಆರ್‌ಟಿಸಿಯ ಅಧಿಕಾರಿಗಳು ಹೇಳಿದ್ದಾರೆ.

101 ಪ್ರೀಮಿಯರ್ ಬಸ್‌ಗಳು ಮೆಜೆಸ್ಟಿಕ್‌ಗೆ ಸ್ಥಳಾಂತರಗೊಳ್ಳಲಿವೆ. ಮೈಸೂರು-ಕೊಡಗು ಭಾಗಕ್ಕೆ ಸಂಚಾರ ನಡೆಸುವ ಮೆಜೆಸ್ಟಿಕ್‌ನ ಟರ್ಮಿನಲ್ -2 ನಿಂದ ಸಂಚಾರ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು-ಬೆಂಗಳೂರು ನಡುವಿನ ಬಸ್ ಸೇವೆ ಭಾರೀ ಬೇಡಿಕೆ ಇದೆ. ಪ್ರತಿ 15 ನಿಮಿಷಕ್ಕೆ ಒಂದು ಬಸ್ ಸಂಚಾರ ನಡೆಸುತ್ತದೆ. ರಾತ್ರಿ 12 ಗಂಟೆ ತನಕ ಬಸ್ ಸಂಚಾರವಿದ್ದು, ರಾತ್ರಿ 2 ಗಂಟೆಗೆ ಪುನಃ ಬಸ್ ಸೇವೆ ಆರಂಭವಾಗುತ್ತದೆ.

English summary
Karnataka State Road Transport Corporation (KSRTC) is set to shift its premier services from Mysuru Satellite Bus Station to Majestic from December 1, 2018. A total of 101 premier services to Mysuru and Kodagu will be shifted back to Majestic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X