ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

KSRTC: ಬಸ್ ನಲ್ಲಿ ಸಾಕು ಪ್ರಾಣಿ, ಪಕ್ಷಿಗಳ ಪ್ರಯಾಣಕ್ಕೆ ಅವಕಾಶ!

|
Google Oneindia Kannada News

ಬೆಂಗಳೂರು, ಜನವರಿ 30: ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಇನ್ನುಮುಂದೆ ಸಾಕು ಪ್ರಾಣಿಗಳನ್ನು ಕೊಂಡೊಯ್ಯಲು ಅವಕಾಶ ದೊರೆಯಲಿದೆ. ಫೆ. 1 ರಿಂದ ಇದು ಜಾರಿಗೆ ಬರಲಿದೆ.

ಮನೆಯಲ್ಲಿ ನಾಯಿ, ಬೆಕ್ಕು, ಪಕ್ಷಿಗಳನ್ನು ಸಾಕುವುದಂದರೆ ಇಷ್ಟ ಆದರೆ ಅವುಗಳನ್ನು ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ. ಒಂದೊಮ್ಮೆ ದೂರದ ಊರಿಗೆ ಪ್ರಯಾಣಿಸಬೇಕಾದರೆ ಪೆಟ್ಸ್ ಗಳನ್ನು ಸ್ನೇಹಿತರ ಮನೆಯಲ್ಲಿಯೋ ಅಥವಾ ಕೇರ್ ಹೋಮ್ ಗಳಲ್ಲಿ ಬಿಡಬೇಕು. ಸ್ವಂತ ವಾಹನಗಳಿದ್ದರಷ್ಟೇ ಅವುಗಳನ್ನು ಜತೆಯಲ್ಲಿ ಕೊಂಡೊಯ್ಯಲು ಸಾಧ್ಯ.

KSRTC: ಅಧಿಕೃತ ಐಡಿ ಇದ್ದರೆ ಹಿರಿಯರಿಗೆ ರಿಯಾಯಿತಿ ಪ್ರಯಾಣKSRTC: ಅಧಿಕೃತ ಐಡಿ ಇದ್ದರೆ ಹಿರಿಯರಿಗೆ ರಿಯಾಯಿತಿ ಪ್ರಯಾಣ

ಆದರೆ ಇನ್ನು ಬೇಸರ ಪಡಬೇಕಿಲ್ಲ. ನಿಮ್ಮ ಪೆಟ್ಸ್ ಗಳನ್ನು ನಿಮ್ಮೊಂದಿಗೆ ಬಸ್ ನಲ್ಲಿ ಕೊಂಡೊಯ್ಯಬಹುದು, ಅದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕೆ ಎಸ್ ಆರ್ ಟಿಸಿ ಬಸ್ ಗಳಲ್ಲಿ ಸಾಕು ಪ್ರಾಣಿ,, ಪಕ್ಷಿಗಳ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ನಿಮ್ಮ ಪೆಟ್ ಗೆ ಒಬ್ಬ ವ್ಯಕ್ತಿಯ ಪ್ರಯಾಣ ದರವನ್ನು ನೀಡಿ ಟಿಕೇಟ್ ಪಡಬೇಕು ಅಷ್ಟೆ.

KSRTC nods to transport pets in buses

ಇದರ ಜತೆ ಇನ್ನು ಮುಂದೆ ಬಸ್ಸಿನಲ್ಲಿ ಎದ್ವಾ ತದ್ವಾ ಲಗೇಜ್ ಗಳನ್ನು ತುಂಬಿಕೊಂಡು ಹೋಗುವಂತಿಲ್ಲ. ಪ್ರತಿ ವ್ಯಕ್ತಿಗೆ 30 ಕೆಜಿ ಹಾಗೂ ಮಕ್ಕಳಿಗೆ 15 ಕೆಜಿ ಲಗೇಜ್ ನಿಗಧಿಗೊಳಿಸಿದ್ದು, ಅದಕ್ಕಿಂತ ಹೆಚ್ಚು ಲಗೇಜ್ ತಂದರೆ ಒಂದು ಕೆಜಿಗೆ ಒಂದು ರೂ.ನಂತೆ ಬಾಡಿಗೆ ನೀಡಬೇಕು.

ಫೆಬ್ರವರಿ ಒಂದರಿಂದ ಈ ದರ ಜಾರಿಗೆ ಬರಲಿದೆ. ಕೆಎಸ್ ಆರ್‍ ಟಿಸಿಯ ಈ ಯೋಜನೆ ಬಗ್ಗೆ ಪ್ರಯಾಣಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಬಸ್‍ನ ವಾತಾವರಣ ಹಾಳಾಗುವುದರ ಜತೆಗೆ ಜೊತೆಗೆ ಆರಾಮದಾಯಕ ಪ್ರಯಾಣಕ್ಕೆ ಧಕ್ಕೆಯಾಗುತ್ತೆ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
KSRTC has been decided to permit pets in its buses paying by charges of equivalent to one passenger. Same time the corporation has been fixed 15 kg luggage for children and 30 kg luggage for adult. Above the minimum weight Rs.1 will be charges for per kg as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X