ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲೈ ಬಸ್‌ಗೆ ಕೊರೊನಾ ಕಾಟ; ಏ.1ರಿಂದ ಅನಂತಪುರಕ್ಕೆ ಬಸ್

|
Google Oneindia Kannada News

ಬೆಂಗಳೂರು, ಮಾರ್ಚ್ 13: ಕೆಎಸ್ಆರ್‌ಟಿಸಿ ಬೆಂಗಳೂರು-ಅನಂತಪುರ ನಡುವೆ ಫ್ಲೈ ಬಸ್ ಸಂಚಾರವನ್ನು ಶುಕ್ರವಾರದಿಂದ ಆರಂಭಿಸಬೇಕಿತ್ತು. ಆದರೆ, ಕೊರೊನಾ ಭೀತಿ ಹಿನ್ನಲೆಯಲ್ಲಿ ಇದನ್ನು ಏಪ್ರಿಲ್ 1ರಿಂದ ಓಡಿಸಲು ತೀರ್ಮಾನಿಸಲಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಂಧ್ರಪ್ರದೇಶದ ಅನಂತಪುರಕ್ಕೆ ಮಾರ್ಚ್ 13ರಿಂದ ಫ್ಲೈ ಬಸ್ ಆರಂಭಿಸುವುದಾಗಿ ಕೆಎಸ್ಆರ್‌ಟಿಸಿ ಘೋಷಣೆ ಮಾಡಿತ್ತು. ಈಗ ಅದನ್ನು ಮುಂದೂಡಲಾಗಿದೆ.

ಬೆಂಗಳೂರಿನಿಂದ ಅನಂತಪುರಕ್ಕೆ ಫ್ಲೈ ಬಸ್ ಸೇವೆ ಆರಂಭಬೆಂಗಳೂರಿನಿಂದ ಅನಂತಪುರಕ್ಕೆ ಫ್ಲೈ ಬಸ್ ಸೇವೆ ಆರಂಭ

ಕೊರೊನಾ ಭೀತಿ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಆದ್ದರಿಂದ, ಏಪ್ರಿಲ್ 1ರಿಂದ ಫ್ಲೈ ಬಸ್ ಸಂಚಾರವನ್ನು ಆರಂಭಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಕೆಎಸ್ಆರ್‌ಟಿಸಿ ಮಾಸಿಕ, ದೈನಂದಿನ ಪಾಸುಗಳ ದರ ಏರಿಕೆ ಕೆಎಸ್ಆರ್‌ಟಿಸಿ ಮಾಸಿಕ, ದೈನಂದಿನ ಪಾಸುಗಳ ದರ ಏರಿಕೆ

KSRTC Flybus To Anantapur From April 1

ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡುವ ಕೆಎಸ್ಆರ್‌ಟಿಸಿಯ ಫ್ಲೈ ಬಸ್ ಚಿಕ್ಕಬಳ್ಳಾಪುರ ಮಾರ್ಗವಾಗಿ ಅನಂತಪುರಕ್ಕೆ ಸಂಚಾರ ನಡೆಸುತ್ತಿತ್ತು. ಈ ಬಸ್‌ಗೆ 700 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿತ್ತು.

ಮೂರು ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಬಸ್ ಸಂಚಾರ; ವೇಳಾಪಟ್ಟಿ ಮೂರು ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಬಸ್ ಸಂಚಾರ; ವೇಳಾಪಟ್ಟಿ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲು ಮೈಸೂರಿಗೆ ಫ್ಲೈ ಬಸ್ ಸೇವೆಯನ್ನು ಆರಂಭಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಹಿನ್ನಲೆಯಲ್ಲಿ ಮಡಿಕೇರಿ, ಕುಂದಾಪುರ, ಉಡುಪಿಗೂ ಫ್ಲೈ ಬಸ್ ಸೇವೆಯನ್ನು ಆರಂಭ ಮಾಡಲಾಗಿತ್ತು.

ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡುವ ಕೆಎಸ್ಆರ್‌ಟಿಸಿಯ ಫ್ಲೈ ಬಸ್ ಬೆಂಗಳೂರು ನಗರವನ್ನು ಪ್ರವೇಶ ಮಾಡದೆ ರಿಂಗ್ ರೋಡ್ ಮೂಲಕ ವಿವಿಧ ನಗರಗಳಿಗೆ ತಲುಪಲಿದೆ. ನಗರದ ಸಂಚಾರ ದಟ್ಟಣೆಯನ್ನು ತಪ್ಪಿಸಲು ಐಷಾರಾಮಿ ಫ್ಲೈ ಬಸ್ ಸೇವೆ ಆರಂಭಿಸಲಾಗಿದೆ.

English summary
KSRTC will run Flybus bus services to Anantapur from Bengaluru Kempegowda International Airport from April 1, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X