ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್ಆರ್ ಟಿಸಿಯಿಂದ ಮೆಜೆಸ್ಟಿಕ್‌ನಲ್ಲಿ ಇಂಟಿಗ್ರೇಟೆಡ್ ಬಸ್ ನಿಲ್ದಾಣ

|
Google Oneindia Kannada News

ಬೆಂಗಳೂರು, ಮಾರ್ಚ್ 30: ಮೆಜೆಸ್ಟಿಕ್‌ನ್ನು 45 ಮಹಡಿಗಳ ಕಟ್ಟಡಕ್ಕೆ 1030ಕೋಟಿ ರೂ ಗಳ ವೆಚ್ಚದಲ್ಲಿ ಪುನರ್ ನಿರ್ಮಾಣಕ್ಕೆ ರೂಪಿಸಲಾಗಿದ್ದ ಯೋಜನೆಯನ್ನು ಕೆಎಸ್ಆರ್ ಟಿಸಿ ಕೈಬಿಟ್ಟಿದೆ.

ಇದರ ಬದಲಾಗಿ ನಮ್ಮ ಮೆಟ್ರೋ, ಬಿಎಂಟಿಸಿ,ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಹಾಗೂ ಬೆಂಗಳೂರು ಕೇಂದ್ರ ಬಸ್ ನಿಲ್ದಾಣಗಳ ಪ್ರಯಾಣಿಕರಿಗೆ ಸಂಪರ್ಕ ಕಲ್ಪಿಸುವಂತೆ ಇಂಟಿಗ್ರೇಟೆಡ್ ನೂತನ ಬಸ್ ನಿಲ್ದಾಣವನ್ನು ನಿರ್ಮಿಸಲು ಟೆಂಡರ್ ಕರೆಯಲು ಮುಂದಾಗಿದೆ.

.KSRTC:ಮಹಾವೀರ ಜಯಂತಿ, ಗುಡ್ ಫ್ರೈಡೇಯಂದು ಹೆಚ್ಚುವರಿ ಬಸ್ .KSRTC:ಮಹಾವೀರ ಜಯಂತಿ, ಗುಡ್ ಫ್ರೈಡೇಯಂದು ಹೆಚ್ಚುವರಿ ಬಸ್

ಮೆಜೆಸ್ಟಿಕ್ ನ ಸುಮಾರು 20 ಎಕರೆ ಪ್ರದೇಶದಲ್ಲಿ 1300 ಕೋಟಿ ರೂ ವೆಚ್ಚದಲ್ಲಿ 36ಮಹಡಿಗಳ ಹೊಸ ನಿಲ್ದಾಣಕ್ಕೆ 2011ರಲ್ಲಿ ಯೋಜನೆ ರೂಪಿಸಲಾಗಿತ್ತು. ಆದರೆ ಈಗ 1300ಕೋಟಿ ರೂಗಳ ವೆಚ್ಚದಲ್ಲಿ 2018ರ ವೇಳೆಗೆ ಶೇ.50ರಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಈ ಯೋಜನೆಯನ್ನು ಕೈಬಿಟ್ಟು ಇಂಟಿಗ್ರೇಟೆಡ್ ಬಸ್ ನಿಲ್ದಾಣ ನಿರ್ಮಾಣಕ್ಕೆ ನಿರ್ಧರಿಸಿದೆ.

KSRTC floats tender inviting new plans for hub at Majestic

ನೂತನ ಇಂಟಿಗ್ರೇಟೆಡ್ ಬಸ್ ನಿಲ್ದಾಣವು ಬೆಂಗಳೂರಿನ ಮೆಜೆಸ್ಟಿಕ್ ಗೆ ಹೊಸ ಸ್ವರೂಪವನ್ನು ನೀಡಲಿದ್ದು, ಪ್ರಯಾಣಿಕರ ವಾಹನಗಳಿಗೆ ಪಾರ್ಕಿಂಗ್ ಬಸ್ ಗಳಿಗೆ ನಿಲ್ದಾಣ, ಅಂತಾರಾಜ್ಯ ಬಸ್ ಗಳಿಗೆ ಪ್ರತ್ಯೇಕ ನಿಲ್ದಾಣ ಬಸ್ ಟರ್ಮಿನಲ್ ಗಳು , ಕ್ಯಾಂಟೀನ್, ರೆಸ್ಟ್ ರೂಂ ಹೀಗೆ ಹಲವಾರು ಸೌಲಭ್ಯಗಳನ್ನು ಒಳಗೊಳ್ಳಲಿದ್ದು, ನಮ್ಮ ಮೆಟ್ರೋ, ಕೆಎಸ್ಆರ್ ಟಿಸಿ, ಬಿಎಂಟಿಸಿ ಹಾಗೂ ರೈಲ್ವೆ ನಿಲ್ದಾಣಗಳ ನಡುವೆ ಸುಲಭವಾಗಿ ಪ್ರಯಾಣಿಕರಿಗೆ ಸಂಪರ್ಕ ಸಾಧಿಸಲು ನೆರವಾಗುವಂತೆ ವಿನ್ಯಾಸವನ್ನು ರೂಪಿಸಲಾಗುತ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೂತನ ಇಂಟಿಗ್ರೇಟೆಡ್ ಬಸ್ ನಿಲ್ದಾಣವು ವಿಶ್ವ ದರ್ಜೆಯ ಬಸ್ ನಿಲ್ದಾಣವಾಗಲಿದ್ದು ಅತಿ ಹೆಚ್ಚು ಸಂಖ್ಯೆಯ ಪ್ರಯಾಣಿಕರಿಗೆ ನೆರವಾಗುವ ಜತೆಗೆ ಪ್ರಯಾಣಿಕರು ಮತ್ತು ಸರಕುಗಳ ಸುಗಮ ಸಾಗಾಟಕ್ಕೆ ಅನುಕೂಲವಾಗುವಂತೆ ಒಳಾಂಗಣವನ್ನು ರೂಪಿಸಲು ಟೆಂಡರ್ ದಾಖಲೆಗಳಲ್ಲಿ ವಿವರಣೆ ನೀಡಲಾಗಿದೆ.

English summary
The Karnataka state Road Transport Corporation has scrapped its ambitious project to build a 45 storey inter-modal transit hub at a cost of Rs.1300 crore as per estimations made in 2011 at majestic. Instead , it has floated a fresh tender to oppoint to consultancy to come up with new plans for a transport hub that will integrate the Metro, BMTC and city railway station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X