ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವೇಶ್ವರ ಬಸ್ ನಿಲ್ದಾಣದಿಂದ ಮೈಸೂರಿಗೆ ಬಸ್ ಸೇವೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 26 : ಕೆಎಸ್‌ಆರ್‌ಟಿಸಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಿಂದ ಮೈಸೂರಿಗೆ ಬಸ್ ಸಂಚಾರವನ್ನು ಆರಂಭಿಸಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಪೀಣ್ಯದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣಕ್ಕೆ ಜನರನ್ನು ಸೆಳೆಯಲು ಈ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಸುಮಾರು 40 ಕೋಟಿ ರೂ.ವೆಚ್ಚದಲ್ಲಿ ಪೀಣ್ಯದಲ್ಲಿ ಬಸವೇಶ್ವರ ಬಸ್‌ ನಿಲ್ದಾಣ ನಿರ್ಮಿಸಲಾಗಿತ್ತು. 2014ರ ಸೆಪ್ಟೆಂಬರ್‌ 10 ರಿಂದ ನಿಲ್ದಾಣ ಕಾರ್ಯರಂಭ ಮಾಡಿತ್ತು. ಆದರೆ, ನಷ್ಟದ ನೆಪ ಹೇಳಿ 2015ರ ಫೆ.28ಕ್ಕೆ ನಿಲ್ದಾಣವನ್ನು ಪುನಃ ಮೆಜೆಸ್ಟಿಕ್‌ಗೆ ಸ್ಥಳಾಂತಗೊಳಿಸಲಾಗಿತ್ತು. [ಪೀಣ್ಯ ಬಸ್ ನಿಲ್ದಾಣ ಸ್ಥಳಾಂತರ]

peenya

2015ರ ಜುಲೈ 1ರಿಂದ ಕೆಎಸ್ಆರ್‌ಟಿಸಿ ಪೀಣ್ಯದಲ್ಲಿನ ಬಸವೇಶ್ವರ ಬಸ್ ನಿಲ್ದಾಣದಿಂದ ಕಣ್ಣೂರು ಮತ್ತು ಕಲ್ಲಿಕೋಟೆಗಳಿಗೆ ರಾಜಹಂಸ ಬಸ್ ಸೇವೆಗಳನ್ನು ಆರಂಭಿಸಿತ್ತು. ಸದ್ಯ, ಸ್ಯಾಟಲೈಟ್ ನಿಲ್ದಾಣದಿಂದ ಮೈಸೂರಿಗೆ ತೆರಳುತ್ತಿದ್ದ ಕೆಲವು ಬಸ್ಸುಗಳನ್ನು ಪೀಣ್ಯಕ್ಕೆ ಸ್ಥಳಾಂತರ ಮಾಡಲಾಗಿದೆ. [ಪೀಣ್ಯದಿಂದ ಕೇರಳಕ್ಕೆ ಬಸ್ ಸೇವೆ]

ಪೀಣ್ಯ ಬಸ್ ನಿಲ್ದಾಣ ಬೆಂಗಳೂರು-ತುಮಕೂರು ಮುಖ್ಯ ರಸ್ತೆಯಿಂದ ದೂರವಿದೆ ಎಂಬ ಆರೋಪವಿತ್ತು. ಈಗ ನಮ್ಮ ಮೆಟ್ರೋ ರೈಲು ಸೇವೆ ನಾಗಸಂದ್ರ ನಿಲ್ದಾಣದ ತನಕ ಆರಂಭವಾಗಿದೆ. ಆದ್ದರಿಂದ, ಕೆಎಸ್ಆರ್‌ಟಿಸಿ ಬಸ್ ಸೇವೆಯನ್ನು ಆರಂಭಿಸಿದೆ. [ಪೀಣ್ಯ-ನಾಗಸಂದ್ರ ಮೆಟ್ರೋ ದರವೆಷ್ಟು?]

ಬಸವೇಶ್ವರ ಬಸ್ ನಿಲ್ದಾಣದಿಂದ ಮೈಸೂರಿಗೆ ಹೊರಡುವ ಬಸ್ಸುಗಳು ರಿಂಗ್ ರಸ್ತೆ ಮೂಲಕ ಸಾಗಲಿವೆ. ಈ ಬಸ್ಸುಗಳು ನಗರವನ್ನು ಪ್ರವೇಶಿಸುವುದಿಲ್ಲ. ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಿಗೂ ಪೀಣ್ಯ ನಿಲ್ದಾಣದ ಮೂಲಕ ಸಂಚಾರ ನಡೆಸಲು ಅವಕಾಶ ಮಾಡಿಕೊಡಲಾಗಿದೆ.

300 ಬಸ್ಸುಗಳ ಸಂಚಾರ : ಉತ್ತರ ಕರ್ನಾಟಕ ಭಾಗಕ್ಕೆ ಸಂಚಾರ ನಡೆಸುವ ಸುಮಾರು 300 ಬಸ್ಸುಗಳನ್ನು ಕೆಎಸ್ಆರ್‌ಟಿಸಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡಿತ್ತು. ಆದರೆ, 2015ರ ಮಾರ್ಚ್‌ 1ರಿಂದಲೇ ಜಾರಿಗೆ ಬರುವಂತೆ ನಿಲ್ದಾಣವನ್ನು ಪುನಃ ಮೆಜೆಸ್ಟಿಕ್‌ಗೆ ಸ್ಥಳಾಂತರ ಮಾಡಲಾಗಿತ್ತು. ನಿಲ್ದಾಣ ಸ್ಥಳಾಂತರವಾದ ನಂತರ ಬಸವೇಶ್ವರ ಬಸ್ ನಿಲ್ದಾಣ ಖಾಲಿಯಾಗಿದೆ.

English summary
The Karnataka State Road Transport Corporation Managing Director, Rajender Kumar Kataria said, KSRTC has diverted some of its Mysuru-Bengaluru bus services to the Basaveshwara bus station Peenya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X