ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

KSRTC:ಕೇಂದ್ರೀಯ ವಿಭಾಗದಲ್ಲಿ 184 ಸಿಸಿಟಿವಿ ಕಣ್ಗಾವಲು

|
Google Oneindia Kannada News

ಬೆಂಗಳೂರು, ಫೆಬ್ರವರಿ 26 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರೀಯ ವಿಭಾಗವು ಇನ್ನು ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿಗೆ ಒಳಪಡಲಿದೆ. ನೌಕರರ ಸುರಕ್ಷತೆ ಹಾಗೂ ಅವರ ಕಾರ್ಯ ಚಟುವಟಿಕೆಗಳ ಮೇಲೆ ನಿಗಾವಹಿಸುವ ಉದ್ದೇಶದಿಂದ ವಿಭಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ನಿಗಮ ನಿರ್ಧರಿಸಿದೆ.

ನಿಗಮವು 1.39 ಕೋಟಿ ವೆಚ್ಚದಲ್ಲಿ ಅತ್ಯುತತ್ಮ ಗುಣಮಟ್ಟದ 184 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಕೇಂದ್ರೀಯ ವಿಭಾಗದ 6 ಘಟಕಗಳು, ಶಾಮತಿನಗರ ವಿಭಾಗೀಯ ಕಾರ್ಯಾಲಯ, ಕೆಂಗೇರಿಯ ಪ್ರಾದೇಶಿಕ ಕಾರ್ಯಾಗಾರ, ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಹಾಗೂ ಮೆಜೆಸ್ಟಿಕ್ ನ ಕೆಂಪೇಗೌಡ ನಿಲ್ದಾಣದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲು ಯೋಜನೆ ರೂಪಿಸಿದೆ.

198 ವಾರ್ಡ್ ಕಚೇರಿಯಲ್ಲಿ ಸಿಸಿಟಿವಿ ಅಳವಡಿಕೆಗೆ ಮುಂದಾದ ಬಿಬಿಎಂಪಿ198 ವಾರ್ಡ್ ಕಚೇರಿಯಲ್ಲಿ ಸಿಸಿಟಿವಿ ಅಳವಡಿಕೆಗೆ ಮುಂದಾದ ಬಿಬಿಎಂಪಿ

ಶಾಂತಿನಗರದಲ್ಲಿರುವ ನಾಲ್ಕು ಘಟಕಗಳಿಗೆ 36, ಮೈಸೂರು ರಸ್ತೆಯಲ್ಲಿರುವ ಘಟಕ 5 ಮತ್ತು 6 ರಲ್ಲಿ ತಲಾ 7 ಮತ್ತು 10 ವಿಭಾಗೀಯ ಕಾರ್ಯಾಗಾರದಲ್ಲಿ 13 , ಕೆಂಗೇರಿಯ ಪ್ರಾದೇಶಿಕ ಕಾರ್ಯಾಗಾರದಲ್ಲಿ 26, ಮೆಜೆಸ್ಟಿಕ್ ನ ಕೆಂಪೇಗೌಡ ನಿಲ್ದಾಣದಲ್ಲಿ 24 , ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣಣದಲ್ಲಿ 20 ಹಾಗೂ ಪೀಣ್ಯದ ಬಸ್ವೇಶ್ವರ ಬಸ್ ನಿಲ್ದಾಣದಲ್ಲಿ 24 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

KSRTC central Depot will have CCTV Surveillance

ಮಹಿಳಾ ಸುರಕ್ಷತೆಗೆ ಆದ್ಯತೆ: ಕೇಂದ್ರೀಯ ವಿಭಾಗದಲ್ಲಿ ಸುಮಾರು 2,500 ಮಂದಿ ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 800 ಮಂದಿ ನಿರ್ವಾಹಕಿಯರು, 900 ಮಂದಿ ಮಹಿಳಾ ಮೆಕ್ಯಾನಿಕ್ ಗಳಿದ್ದಾರೆ. ಉಳಿದಂತೆ ತಾಂತ್ರಿಕ ಸಿಬ್ಬಂದಿ ಇದ್ದಾರೆ. ಕೆಲಸದ ಸ್ಥಳದಲ್ಲಿ ಮಹಿಳಾ ಮಹಿಳಾ ಸಿಬ್ಬಂದಿ ಸುರಕ್ಷತೆ ಹಿನ್ನೆಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

English summary
To increase passengers security KSRTC will have CCTV surveilance at Central depot. It consists all KSRTC depots in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X