ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

KSRTC: ಪೀಣ್ಯ ನಿಲ್ದಾಣದಿಂದ ಪುನಃ ಬಸ್‌ಗಳ ಸೇವೆ ಆರಂಭ!

|
Google Oneindia Kannada News

ಬೆಂಗಳೂರು, ಏಪ್ರಿಲ್ 13: ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಜ್ಯದ ನಾನಾ ಭಾಗಗಳಿಗೆ ತೆರಳುವ ಬಸ್ ಗಳ ಪೈಕಿ 60 ಬಸ್ ಗಳನ್ನು ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ವರ್ಗಾಯಿಸಲಾಗಿದೆ.

ಈ ಬಸ್ ಗಳು ಗುರುವಾರದಿಂದ ಈ ನಿಲ್ದಾಣದಿಂದಲೇ ಕಾರ್ಯಾಚರಣೆ ಆರಂಭಿಸಿದೆ. ಈ ಮೂಲಕ ಕಳೆದ ನಾಲ್ಕು ವರ್ಷಗಳಿಂದ ನಿರ್ಜೀವವಾಗಿದ್ದ ಬಸ್ ನಿಲ್ದಾಣಕ್ಕೆ ಕಳೆ ಬಂದಂತಾಗಿದೆ.

ಕೆಎಸ್ಆರ್ ಟಿಸಿಯಿಂದ ಮೆಜೆಸ್ಟಿಕ್‌ನಲ್ಲಿ ಇಂಟಿಗ್ರೇಟೆಡ್ ಬಸ್ ನಿಲ್ದಾಣ ಕೆಎಸ್ಆರ್ ಟಿಸಿಯಿಂದ ಮೆಜೆಸ್ಟಿಕ್‌ನಲ್ಲಿ ಇಂಟಿಗ್ರೇಟೆಡ್ ಬಸ್ ನಿಲ್ದಾಣ

ಈ ಬಸ್ ನಿಲ್ದಾಣದಿಂದ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಬಸ್ ಕಾರ್ಯಾಚರಣೆ ಮಾಡುವ ವ್ಯವಸ್ಥೆ ಒಳಗೊಂಡಿದೆ. ಇದೀಗ ಚಿಕ್ಕಮಗಳೂರು, ಹುಬ್ಬಳ್ಳಿ, ಶಿವಮೊಗ್ಗ, ತುಮಕೂರು, ರಾಯಚೂರು, ಹಾಸನ, ದಾವಣಗೆರೆ, ಬೆಳಗಾವಿ, ಮಂಗಳೂರು, ಧರ್ಮಸ್ಥಳ, ಪಾವಗಡ, ಕುಷ್ಟಗಿ, ಸಾಗರ, ಹೊಸದುರ್ಗ, ಅರಕಲಗೋಡು, ಕೊಣನೂರು, ತುರುವೇಕೆರೆ, ತಿಪಟೂರು, ಬಳ್ಳಾರಿ, ಸಕಲೇಶಪುರ, ಕೊಪ್ಪಳ, ಕುಂದಾಪುರ ಸೇರಿದಂತೆ ಇನ್ನಿತರೆ ಊರುಗಳಿಗೆ 60 ಬಸ್‌ಗಳ ಸಂಚಾರ ಆರಂಭವಾಗಿದೆ.

KSRTC buses will run from Peenya bus station again!

ಬಸವೇಶ್ವರ ಬಸ್ ನಿಲ್ದಾಣದ ಸುತ್ತಮುತ್ತಲ ಬಡಾವಣೆಗಳ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರಲು ಹಾಗೂ ಸಮೀಪದ ಮೆಟ್ರೋ ನಿಲ್ದಾಣಕ್ಕೆ ತೆರಳಲು ಅನುವಾಗುವಂತೆ 2 ಫೀಡರ್ ಬಸ್ ಗಳ ಸಂಚಾರವನ್ನು ಆರಂಭಿಸಲಾಗಿದೆ.

ಈ ಬಸ್ ಗಳು ನಿಲ್ದಾಣದಿಂದ ಅಯ್ಯಪ್ಪ ದೇವಸ್ಥಾನ, ಜಾಲಹಳ್ಳಿ ಮೆಟ್ರೋ ನಿಲ್ದಾಣ ಮತ್ತು ಅಲ್ಲಿಂದ ಬಸವೇಶ್ವರ ಬಸ್ ನಿಲ್ದಾಣ ಮಾರ್ಗದಲ್ಲಿ ಸಂಚರಿಸಲಿದೆ. ಸದ್ಯಕ್ಕೆ ಈ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

726 ಹುದ್ದೆಗಳನ್ನು ಭರ್ತಿ ಮಾಡಲು ಆರ್ಜಿ ಆಹ್ವಾನಿಸಿದ ಕೆಎಸ್ಆರ್‌ಟಿಸಿ726 ಹುದ್ದೆಗಳನ್ನು ಭರ್ತಿ ಮಾಡಲು ಆರ್ಜಿ ಆಹ್ವಾನಿಸಿದ ಕೆಎಸ್ಆರ್‌ಟಿಸಿ

ಮೆಜೆಸ್ಟಿಕ್ ನಿಂದಲೂ ಬಸ್ ಸಂಚಾರ: ಈಈ ಬಸ್ ನಿಲ್ದಾಣಕ್ಕೆ ಸದ್ಯ 60 ಬಸ್‌ಗಳನ್ನು ಮಾತ್ರ ವರ್ಗಾಯಿಸಿದ್ದು, ಈ ಮೇಲಿನ ಊರುಗಳಿಗೆ ಮೆಜೆಸ್ಟಿಕ್ ನಿಂದಲೂ ಬಸ್ ಗಳು ಸಂಚರಿಸಲಿದೆ. ಪ್ರಯಾಣಿಕರು ಈ ಎರಡೂ ನಿಲ್ದಾಣದಲ್ಲಿ ಯಾವುದು ಸಮೀಪವೋ ಅದರಿಂದ ಪ್ರಯಾಣಿಸಬಹುದು.ಆದರೆ, ಬಸವೇಶ್ವರ ನಿಲ್ದಾಣದಿಂದ ಸಂಚರಿಸುವವರ ಬಸ್ ಗಳ ಸಂಖ್ಯೆ ಕಡಿಮೆ ಇದೆ.

English summary
KSRTC had started its service from Peenya Basaveshwar bus stand from Thursday. Around 60 buses which will run to central and north Karnataka from Majestic were shifts their services to Peenya bus station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X