ಬ್ರೇಕ್ ಫೇಲ್:ಯಶವಂತಪುರದಲ್ಲಿ ಪೆಟ್ರೋಲ್ ಬಂಕ್ಗೆ ನುಗ್ಗಿದ ಕೆಎಸ್ಆರ್ಟಿಸಿ ಬಸ್
ಬೆಂಗಳೂರು, ಜೂನ್ 12: ಕೆಎಸ್ಆರ್ಟಿಸಿ ಬಸ್ ಒಂದು ಬ್ರೇಕ್ ಫೇಲ್ ಆಗಿ ಪೆಟ್ರೋಲ್ ಬಂಕ್ಗೆ ನುಗ್ಗಿದ ಘಟನೆ ಯಶವಂತಪುರ- ಗೊರಗುಂಟೆಪಾಳ್ಯದ ಬಳಿ ಮಂಗಳವಾರ ನಡೆದಿದೆ.
ಬೆಂಗಳೂರು-ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎ-13 ಎಫ್-2162 ಬಸ್ ಗೊರಗುಂಟೆಪಾಳ್ಯದ ಸ್ಪರ್ಶ್ ಆಸ್ಪತ್ರೆ ಬಳಿ ಇರುವ ಎಚ್ಪಿ ಪೆಟ್ರೋಲ್ ಬಂಕ್ಗೆ ನುಗ್ಗಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದ್ದು, ಬಸ್ನಲ್ಲಿ 11 ಜನ ಪ್ರಯಾಣಿಕರು, ಚಾಲಕ ಸೇರಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Comments
English summary
KSRTC bus has rushed into petrol bunk at Goraguntepalya in Yeshwanthpur due to break fail was coming from chikmagalur to Bengaluru and 11 passengers were escaped luckily.