ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಚಲಿಸುವ ಬಸ್‌ನಿಂದ ವಿದ್ಯಾರ್ಥಿನಿಯನ್ನು ಹೊರದಬ್ಬಿದ ಕಂಡಕ್ಟರ್

|
Google Oneindia Kannada News

ಬೆಂಗಳೂರು, ನವೆಂಬರ್ 19: ಚಲಿಸುವ ಬಸ್ಸಿನಿಂದ ವಿದ್ಯಾರ್ಥಿನಿಯನ್ನು ಕಂಡಕ್ಟರ್ ಒಬ್ಬ ಹೊರದಬ್ಬಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.

ವಿದ್ಯಾರ್ಥಿನಿಯು ಬಸ್ ಪಾಸ್ ಹೊಂದಿದ್ದು, ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸಿದಳೆಂಬ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ವಿದ್ಯಾರ್ಥಿನಿಯನ್ನು ಚಲಿಸುವ ಬಸ್‌ನಿಂದ ಹೊರಕ್ಕೆ ದಬ್ಬಿದ್ದಾನೆ, ವಿದ್ಯಾರ್ಥಿನಿಗೆ ಹಲವು ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.

ಕನಕಪುರ- ಬೆಂಗಳೂರು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿಕನಕಪುರ- ಬೆಂಗಳೂರು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ

ನಗರದ ಜ್ಯೋತಿ ಕೇಂದ್ರ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ ಭೂಮಿಕ ಕಾಲೇಜು ಮುಗಿದ ಬಳಿಕ ತನ್ನ ಊರು ಕನಕಪುರಕ್ಕೆ ಹೋಗಲು ಕೆ.ಎಸ್.ಆರ್‌.ಟಿ.ಸಿ ಬಸ್ ಏರಿದ್ದಾಳೆ. ಆಗ ಆಕೆಯನ್ನು ಟಿಕೆಟ್ ಖರೀದಿಸುವಂತೆ ನಿರ್ವಾಹಕ ಕೇಳಿದ್ದಾನೆ. ಆದರೆ ತನ್ನ ಬಳಿ ಬಸ್ ಪಾಸ್ ಇರುವುದಾಗಿ ವಿದ್ಯಾರ್ಥಿನಿ ಉತ್ತರಿಸಿದ್ದಾಳೆ.

KSRTC Bus Conductor Pushed College Student Out Of The Bus

ಇದರಿಂದ ಸಿಟ್ಟುಕೊಂಡ ನಿರ್ವಾಹಕ, ಇದು ದೂರದ ಊರಿಗೆ ಪ್ರಯಾಣಿಸುವ ಬಸ್ಸು ಇದರಲ್ಲಿ ಪಾಸ್ ನಡೆಯುವುದಿಲ್ಲ ಖಡ್ಡಾಯವಾಗಿ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ. ತಾನು ಟಿಕೆಟ್ ತೆಗೆದುಕೊಳ್ಳುವುದಿಲ್ಲ, ಮುಂದಿನ ಸ್ಟಾಪ್‌ನಲ್ಲಿ ಇಳಿದುಬಿಡುತ್ತೇನೆ ಎಂದು ಭೂಮಿಕ ಮನವಿ ಮಾಡಿದ್ದಾಳೆ.

ಸಾರಿಗೆ ನೌಕರರ ಕ್ಷಮೆ ಕೋರಿದ ಡಿಸಿಎಂ ಲಕ್ಷ್ಮಣ ಸವದಿಸಾರಿಗೆ ನೌಕರರ ಕ್ಷಮೆ ಕೋರಿದ ಡಿಸಿಎಂ ಲಕ್ಷ್ಮಣ ಸವದಿ

ಭೂಮಿಕಾ ಮನವಿಗೆ ಒಪ್ಪದ ನಿರ್ವಾಹಕ ಮಾರ್ಗಮಧ್ಯದಲ್ಲಿಯೇ ಇಳಿಯುವಂತೆ ಹೇಳಿದ್ದಾನೆ. ಆದರೆ ಇದಕ್ಕೆ ಭೂಮಿಕ ಒಪ್ಪದೇ ಇದ್ದಾಗ, ಆಕೆಯನ್ನು ಬಸ್ಸಿನಿಂದ ಹೊರಕ್ಕೆ ತಳ್ಳಿದ್ದಾನೆ.

ಇನ್ಮುಂದೆ ಬಸ್ ಚಾಲಕರಿಗೂ ಸೀಟ್‌ಬೆಲ್ಟ್ ಕಡ್ಡಾಯ, ಇಲ್ದಿದ್ರೆ ಬೀಳುತ್ತೆ ದಂಡಇನ್ಮುಂದೆ ಬಸ್ ಚಾಲಕರಿಗೂ ಸೀಟ್‌ಬೆಲ್ಟ್ ಕಡ್ಡಾಯ, ಇಲ್ದಿದ್ರೆ ಬೀಳುತ್ತೆ ದಂಡ

ಭೂಮಿಕಾಗೆ ಮುಖ, ಎದೆ ಭಾಗ, ಮೊಣಕಾಲಿಗೆ ಗಾಯಗಳಾಗಿದ್ದು, ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಭೂಮಿಕಾಳನ್ನು ಹೊರಕ್ಕೆ ದಬ್ಬಿದ ಕಂಡಕ್ಟರ್ ಅನ್ನು ಕೆ.ಎಸ್‌.ಆರ್‌.ಟಿ.ಸಿಯು ಅಮಾನತ್ತು ಮಾಡಿದೆ.

English summary
KSRTC bus conductor pushed a girl student from running bus in Bengaluru. Girl got injured. conductor dismissed by KSRTC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X