ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ತಿರುಪತಿ ಪ್ಯಾಕೇಜ್ ಘೋಷಣೆ ಮಾಡಿದ ಕೆಎಸ್ಆರ್‌ಟಿಸಿ

|
Google Oneindia Kannada News

ಬೆಂಗಳೂರು, ಜನವರಿ 05: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು-ತಿರುಪತಿ ಮಾರ್ಗದ ಪ್ಯಾಕೇಜ್ ಟೂರ್ ಘೋಷಣೆ ಮಾಡಿದೆ. ಜನವರಿ 7ರಿಂದ ಪ್ಯಾಕೇಜ್ ಟೂರ್ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ಕೆಎಸ್ಆರ್‌ಟಿಸಿ ಹೇಳಿದೆ.

ಕೆಎಸ್ಆರ್‌ಟಿಸಿಯ ಬೆಂಗಳೂರು ಕೇಂದ್ರಿಯ ವಿಭಾಗದ ವತಿಯಿಂದ ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್ ಕೈಗೊಳ್ಳಲಾಗುತ್ತದೆ. ಈ ಪ್ಯಾಕೇಜ್‌ನಲ್ಲಿ ಜನರು ಸ್ಕ್ಯಾನಿಯಾ ಮಲ್ಟಿಆಕ್ಸಲ್ ವಾಹನದಲ್ಲಿ ಸಂಚಾರ ನಡೆಸಬಹುದಾಗಿದೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮತ್ತೆ ಹಿರಿಯರು, ಮಕ್ಕಳಿಗೂ ಅವಕಾಶ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮತ್ತೆ ಹಿರಿಯರು, ಮಕ್ಕಳಿಗೂ ಅವಕಾಶ

ಬೆಂಗಳೂರು-ತಿರುಪತಿ ಟೂರ್ ವಯಾ ಶಾಂತಿನಗರ, ಜಯನಗರ 4ನೇ ಬ್ಲಾಕ್, ನಾಗಸಂದ್ರ, ಎನ್. ಆರ್. ಕಾಲೋನಿ, ಕೆಂಪೇಗೌಡ ಬಸ್ ನಿಲ್ದಾಣ, ದೊಮ್ಮಲೂರು, ಮಾರತ್‌ಹಳ್ಳಿ, ಐ. ಟಿ. ಐ. ಗೇಟ್, ಕೆ. ಆರ್. ಪುರಂ, ಹೊಸಕೋಟೆ ಮಾರ್ಗವಾಗಿ ಸಂಚಾರ ನಡೆಸಲಿದೆ.

ತಿರುಪತಿ ಲಡ್ಡು ಮಾರುತ್ತಿದ್ದ ನಕಲಿ ವೆಬ್ಸೈಟ್ ವಿರುದ್ಧ ದೂರು ತಿರುಪತಿ ಲಡ್ಡು ಮಾರುತ್ತಿದ್ದ ನಕಲಿ ವೆಬ್ಸೈಟ್ ವಿರುದ್ಧ ದೂರು

KSRTC Bengaluru Tirupati Tour Package Fare Details

ಭಾನುವಾರದಿಂದ ಗುರುವಾರದ ತನಕ ವಯಸ್ಕರಿಗೆ 2,200 + ಜಿಎಸ್‌ಟಿ, ಮಕ್ಕಳು (6 ರಿಂದ 12) 1800 ರೂ. + ಜಿಎಸ್‌ಟಿ ದರವನ್ನು ನಿಗದಿ ಮಾಡಲಾಗಿದೆ. ಶುಕ್ರವಾರ ಮತ್ತು ಶನಿವಾರ ಹೊರಡುವ ಬಸ್‌ಗಳಲ್ಲಿ ಪ್ಯಾಕೇಜ್ ದರ 2600 ರೂ. + ಜಿಎಸ್‌ಟಿ, ಮಕ್ಕಳು 2000 ರೂ. + ಜಿಎಸ್‌ಟಿ.

ಬೆಂಗಳೂರು-ಶಿರಡಿ ಕೆಎಸ್ಆರ್‌ಟಿಸಿ ಬಸ್ ಸೇವೆ ಆರಂಭ ಬೆಂಗಳೂರು-ಶಿರಡಿ ಕೆಎಸ್ಆರ್‌ಟಿಸಿ ಬಸ್ ಸೇವೆ ಆರಂಭ

Recommended Video

ಮಂಗಳೂರು: ಅಮಾಯಕರಿಗೆ ದೇಶದ್ರೋಹ ಪಟ್ಟ ಕಟ್ಟಲು ಮುಂದಾಗ್ತಿದ್ಯಾ SDPI..? | Oneinda Kannada

ಬಸ್ ಹೊರಡುವ ಸಮಯ, ಪ್ಯಾಕೇಜ್ ವಿವರಗಳು ಇಲ್ಲಿವೆ

English summary
The Karnataka State Road Transport Corporation (KSRTC) announced Bengaluru-Tirupati tour package. People can travel in package tour from January 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X