ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂ-ಹೈದರಾಬಾದ್‌ ನಡುವೆ ಹೊಸ ಬಸ್ ಘೋಷಿಸಿದ ಕೆಎಸ್ಆರ್‌ಟಿಸಿ

|
Google Oneindia Kannada News

ಬೆಂಗಳೂರು, ಜುಲೈ 24 : ಕೆಎಸ್ಆರ್‌ಟಿಸಿ ಬೆಂಗಳೂರು-ಹೈದರಾಬಾದ್ ನಡುವೆ ಹೊಸ ಬಸ್ ಸೇವೆಯನ್ನು ಘೋಷಣೆ ಮಾಡಿದೆ. ಜುಲೈ 26ರಿಂದ ಬಸ್ ಸಂಚಾರ ಆರಂಭವಾಗಲಿದ್ದು, 1,350 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರಿಯ ವಿಭಾಗದ ವತಿಯಿಂದ ಬೆಂಗಳೂರು-ಹೈದರಾಬಾದ್ ನಡುವೆ ಅಂಬಾರಿ ಡ್ರೀಮ್ ಕ್ಲಾಸ್ ಎಸಿ ಸ್ಲೀಪರ್ (ಮಲ್ಟಿ ಆಕ್ಸಲ್) ಬಸ್ ಸೇವೆಯನ್ನು ಆರಂಭಿಸಲಾಗುತ್ತಿದೆ.

4 ಜಿಲ್ಲೆಗಳಿಂದ ತಿರುಪತಿ ಕೆಎಸ್ಆರ್‌ಟಿಸಿ ಪ್ಯಾಕೇಜ್‌ ಪ್ರವಾಸ ಆರಂಭ4 ಜಿಲ್ಲೆಗಳಿಂದ ತಿರುಪತಿ ಕೆಎಸ್ಆರ್‌ಟಿಸಿ ಪ್ಯಾಕೇಜ್‌ ಪ್ರವಾಸ ಆರಂಭ

ಜುಲೈ 26, 2019ರಿಂದ ಈ ಬಸ್ ಸಂಚಾರ ನಡೆಸಲಿದೆ. ಬೆಂಗಳೂರಿನಿಂದ ಹೊರಡುವ ಬಸ್ ಅನಂತಪುರ, ಗುತ್ತಿ, ಕರ್ನೂಲ್ ಮಾರ್ಗವಾಗಿ ಹೈದರಾಬಾದ್‌ಗೆ ಸಂಚಾರ ನಡೆಸಲಿದೆ.

2 ಮಾರ್ಗದಲ್ಲಿ ಸ್ಲೀಪರ್ ಬಸ್ ಸೇವೆ ಆರಂಭಿಸಿದ ಕೆಎಸ್ಆರ್‌ಟಿಸಿ2 ಮಾರ್ಗದಲ್ಲಿ ಸ್ಲೀಪರ್ ಬಸ್ ಸೇವೆ ಆರಂಭಿಸಿದ ಕೆಎಸ್ಆರ್‌ಟಿಸಿ

KSRTC announces Ambari dream class bus between Bengaluru Hyderabad

ಬಸ್ ವೇಳಾಪಟ್ಟಿ : ಬೆಂಗಳೂರಿನಿಂದ ರಾತ್ರಿ 8.50ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 7.15ಕ್ಕೆ ಹೈದರಾಬಾದ್ ತಲುಪಲಿದೆ. ಹೈದರಾಬಾದ್‌ನಿಂದ ರಾತ್ರಿ 8.15ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 7.30ಕ್ಕೆ ಬೆಂಗಳೂರಿಗೆ ಆಗಮಿಸಲಿದೆ.

ಹೊಸ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ, ವಿವರಹೊಸ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ, ವಿವರ

ಕೆಲವು ದಿನಗಳ ದಿಂದೆ ಕೆಎಸ್ಆರ್‌ಟಿಸಿ ಬೆಂಗಳೂರು-ಮುಂಡರಗಿ ನಡುವೆ ಹೊಸ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿತ್ತು. ಬಳಿಕ ಬೆಂಗಳೂರು-ಚಿದಂಬರಂ ಮತ್ತು ಬೆಂಗಳೂರು-ಎರ್ನಾಕುಲಂ ಮಾರ್ಗದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಲಾಗಿತ್ತು.

English summary
Karnataka State Road Transport Corporation (KSRTC) announced new Ambari dream class ac sleeper bus between Bengaluru-Hyderabad. 1350 Rs fare fixed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X