ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2 ಮಾರ್ಗದಲ್ಲಿ ಸ್ಲೀಪರ್ ಬಸ್ ಸೇವೆ ಆರಂಭಿಸಿದ ಕೆಎಸ್ಆರ್‌ಟಿಸಿ

|
Google Oneindia Kannada News

ಬೆಂಗಳೂರು, ಮೇ 09 : ಕೆಎಸ್ಆರ್‌ಟಿಸಿ ಎರಡು ಮಾರ್ಗಗಳಲ್ಲಿ ಹೊಸದಾಗಿ ಅಂಬಾರಿ ಡ್ರೀಮ್ ಕ್ಲಾಸ್, ಕರೋನ ಹವಾನಿಯಂತ್ರಿತ ಬಸ್ ಸೇವೆಯನ್ನು ಆರಂಭಿಸಿದೆ. ಬೆಂಗಳೂರಿನಿಂದ ಹೊರಡುವ ಬಸ್‌ಗಳ ಪ್ರಯಾಣ ದರ, ಮಾರ್ಗದ ಮಾಹಿತಿ ನೀಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಬೆಂಗಳೂರು-ಚಿದಂಬರಂ ಮತ್ತು ಬೆಂಗಳೂರು-ಎರ್ನಾಕುಲಂ ಮಾರ್ಗಗಳಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ (ಮಲ್ಟಿ ಆಕ್ಸೆಲ್ ಎ.ಸಿ ಸ್ಪೀಪರ್), ಕರೋನ ಎ.ಸಿ.ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ.

ಹೊಸ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ, ವಿವರಹೊಸ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ, ವಿವರ

ಬೆಂಗಳೂರು ಕೇಂದ್ರಿಯ ವಿಭಾಗದ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಈ ಬಸ್ ಸೇವೆ ಆರಂಭಿಸಲಾಗಿದೆ. ಬೆಂಗಳೂರು-ಚಿದಂಬರಂ ನಡುವೆ ಕರೋನ ಎ.ಸಿ.ಸ್ಲೀಪರ್ ಬಸ್, ಬೆಂಗಳೂರು-ಎರ್ನಾಕುಲಂ ನಡುವೆ ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿಆಕ್ಸಲ್ ಬಸ್ ಸಂಚಾರ ನಡೆಸಲಿದೆ.

ಕೆಎಸ್‌ಆರ್‌ಟಿಸಿ ಬಸ್ ಮತ್ತಷ್ಟು ಪ್ರಯಾಣಿಕ ಸ್ನೇಹಿಕೆಎಸ್‌ಆರ್‌ಟಿಸಿ ಬಸ್ ಮತ್ತಷ್ಟು ಪ್ರಯಾಣಿಕ ಸ್ನೇಹಿ

ಕಳೆದವಾರ ಬೆಂಗಳೂರು-ಮುನ್ನಾರ್, ಬೆಂಗಳೂರು-ಪೂನಾ, ಬೆಂಗಳೂರು-ವಿಜಯವಾಡ ನಡುವೆ ಹೊಸ ಬಸ್‌ಗಳ ಸೇವೆಯನ್ನು ಕೆಎಸ್‌ಆರ್‌ಟಿಸಿ ಆರಂಭಿಸಿತ್ತು. ಈಗ ಮತ್ತೆರಡು ಮಾರ್ಗಗಳಲ್ಲಿ ಬಸ್ ಸೇವೆಯನ್ನು ಮೇ 9ರಿಂದ ಆರಂಭಿಸಲಾಗಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಪ್ರಯಾಣಿಕರಿಗೆ ಸರ್ಕಾರದಿಂದ ಶಾಕ್‌ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಪ್ರಯಾಣಿಕರಿಗೆ ಸರ್ಕಾರದಿಂದ ಶಾಕ್‌

ಬೆಂಗಳೂರು-ಚಿದಂಬರಂ ಮಾರ್ಗ

ಬೆಂಗಳೂರು-ಚಿದಂಬರಂ ಮಾರ್ಗ

ಬೆಂಗಳೂರು-ಚಿದಂಬರಂ ನಡುವೆ ಕರೋನ ಎ.ಸಿ.ಸ್ಲೀಪರ್ ಬಸ್ ಸಂಚಾರ ನಡೆಸಲಿದೆ. ಹೊಸೂರು, ತಿರುವಣ್ಣಾಮಲೈ, ನೈವೇಲಿ ಮೂಲಕ ಬಸ್ ಸಂಚಾರ ನಡೆಸಲಿದೆ. ಪ್ರಯಾಣದರ ವಯಸ್ಕರಿಗೆ 900 ರೂ.

ಬೆಂಗಳೂರಿನಿಂದ ರಾತ್ರಿ 10ಗಂಟೆಗೆ ಹೊರಡುವ ಬಸ್ ಬೆಳಗ್ಗೆ 6ಗಂಟೆಗೆ ಚಿದಂಬರಂ ತಲುಪಲಿದೆ. ಚಿದಂಬರಂನಿಂದ ರಾತ್ರಿ 9.30ಕ್ಕೆ ಹೊರಡುವ ಬಸ್ ಬೆಳಗ್ಗೆ 5.45ಕ್ಕೆ ಬೆಂಗಳೂರಿಗೆ ಬರಲಿದೆ.

ಬೆಂಗಳೂರು-ಎರ್ನಾಕುಲಂ ಮಾರ್ಗ

ಬೆಂಗಳೂರು-ಎರ್ನಾಕುಲಂ ಮಾರ್ಗ

ಬೆಂಗಳೂರು-ಎರ್ನಾಕುಲಂ ನಡುವೆ ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿಆಕ್ಸಲ್ ಎ.ಸಿ.ಸ್ಲೀಪರ್ ಬಸ್ ಸಂಚಾರ ನಡೆಸಲಿದೆ. ಹೊಸೂರು, ಸೇಲಂ, ಕೊಯಮತ್ತೂರು, ಪಾಲ್ಗಾಟ್, ತ್ರಿಶೂರ್ ಮಾರ್ಗವಾಗಿ ಬಸ್ ಸಂಚರಿಸಲಿದೆ. ಪ್ರಯಾಣದರ ವಯಸ್ಕರಿಗೆ 1400 ರೂ.ಗಳು.

ಬೆಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಡುವ ಬಸ್ ಬೆಳಗ್ಗೆ 7.30ಕ್ಕೆ ಎರ್ನಾಕುಲಂ ತಲುಪಲಿದೆ. ರಾತ್ರಿ 9 ಗಂಟೆಗೆ ಎರ್ನಾಕುಲಂನಿಂದ ಹೊರಡುವ ಬಸ್ ಬೆಳಗ್ಗೆ 7ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ.

ಬೆಂಗಳೂರು-ಪೂನಾ

ಬೆಂಗಳೂರು-ಪೂನಾ

ಕಳೆದ ವಾರ ಕೆಎಸ್ಆರ್‌ಟಿಸಿ ಬೆಂಗಳೂರು-ಪೂನಾ ಬಸ್ ಸೇವೆ ಘೋಷಣೆ ಮಾಡಿತ್ತು. ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿಆಕ್ಸಲ್ ಎ.ಸಿ.ಸ್ಲೀಪರ್ ಬಸ್ ದಾವಣಗೆರೆ, ಬೆಳಗಾವಿ ಮಾರ್ಗವಾಗಿ ಸಂಚಾರ ನಡೆಸಲಿದ್ದು 1700 ರೂ. ದರ ನಿಗದಿ ಮಾಡಲಾಗಿದೆ.

ಬೆಂಗಳೂರಿನಿಂದ ಸಂಜೆ 7.30ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 9.30ಕ್ಕೆ ಪೂನಾ ತಲುಪಲಿದೆ. ಪೂನಾದಿಂದ ಸಂಜೆ 6.30ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 8.30ಕ್ಕೆ ಬೆಂಗಳೂರಿಗೆ ಆಗಮಿಸಲಿದೆ.

ಬೆಂಗಳೂರು-ಮುನ್ನಾರ್ ಬಸ್

ಬೆಂಗಳೂರು-ಮುನ್ನಾರ್ ಬಸ್

ಬೆಂಗಳೂರು ಮುನ್ನಾರ್ ನಡುವೆ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ನಡೆಸಲಿದೆ. ಹೊಸೂರು, ಕೊಯಮತ್ತೂರು ಮೂಲಕ ಸಾಗುವ ಬಸ್ ಪ್ರಯಾಣದರ 800 ರೂ.

ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಡುವ ಬಸ್ ಬೆಳಗ್ಗೆ 10 ಗಂಟೆಗೆ ಮುನ್ನಾರ್ ತಲುಪಲಿದೆ. ಸಂಜೆ 5 ಗಂಟೆಗೆ ಹೊರಡುವ ಬಸ್ ಬೆಳಗ್ಗೆ 6.30ಕ್ಕೆ ಬೆಂಗಳೂರಿಗೆ ಬರಲಿದೆ.

English summary
Karnataka State Road Transport Corporation (KSRTC) has started new Corona AC sleeper bus service between Bengaluru-Chidambaram and Ambari dream class AC bus service between Bengaluru and Ernakulam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X