• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು-ಪಣಜಿ ಸ್ಲೀಪರ್ ಬಸ್ ಸೇವೆ; ವೇಳಾಪಟ್ಟಿ

|

ಬೆಂಗಳೂರು, ಸೆಪ್ಟೆಂಬರ್ 09: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು-ಪಣಜಿ ನಡುವೆ ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್ ಸೇವೆಯನ್ನು ಸೆ. 10ರಿಂದ ಆರಂಭಿಸಲಿದೆ. 960 ರೂ. ದರವನ್ನು ನಿಗದಿ ಮಾಡಲಾಗಿದೆ.

   ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ನೋಡೋ ಕಾಲ ಬಂದಾಯ್ತು | Oneindia Kannada

   ಕೆಎಸ್ಆರ್‌ಟಿಸಿ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಜನರ ಅನುಕೂಲಕ್ಕಾಗಿ ನಾನ್ ಎಸಿ ಬಸ್ ಸೇವೆಯನ್ನು ಹೊಸದಾಗಿ ಆರಂಭಿಸಲಾಗುತ್ತಿದೆ.

   ಹುಬ್ಬಳ್ಳಿ-ಗೋವಾ ಬಸ್ ಸೇವೆ; ವೇಳಾಪಟ್ಟಿ

   ಬೆಂಗಳೂರು ಮತ್ತು ಗೋವಾ ರಾಜಧಾನಿ ಪಣಜಿ ನಡುವಿನ ಬಸ್ ಚಿತ್ರದುರ್ಗ, ಹುಬ್ಬಳ್ಳಿ, ಕಾರವಾರ ಮಾರ್ಗವಾಗಿ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 10ರ ಗುರುವಾರದಿಂದ ಈ ಬಸ್ ಸಂಚಾರ ನಡೆಸಲಿದೆ.

   ಗೋವಾ ಗಡಿಗಳು ಓಪನ್; ಇನ್ನು ಗೋವಾಗೆ ಹೋಗಲು ಯಾವುದೇ ನಿರ್ಬಂಧವಿಲ್ಲ

   ವೇಳಾಪಟ್ಟಿ: ಬೆಂಗಳೂರು-ಪಣಜಿ ನಾನ್ ಎಸಿ ಸ್ಲೀಪರ್ ಬಸ್‌ನಲ್ಲಿ ವಯಸ್ಕರಿಗೆ 960 ರೂ. ದರವನ್ನು ನಿಗದಿ ಮಾಡಲಾಗಿದೆ.

   ಶುಕ್ರವಾರದಿಂದ ಗೋವಾಕ್ಕೆ ಕೆಎಸ್ಆರ್‌ಟಿಸಿ ಬಸ್ ಸಂಚಾರ

   ಬೆಂಗಳೂರು-ಪಣಜಿ ಬಸ್ ಬೆಂಗಳೂರು ನಗರದಿಂದ 6.30ಕ್ಕೆ ಹೊರಡಲಿದ್ದು 10.15ಕ್ಕೆ ಪಣಜಿ ತಲುಪಲಿದೆ. ಪಣಜಿಯಿಂದ 5.30ಕ್ಕೆ ಹೊರಡಲಿದ್ದು, 9.15ಕ್ಕೆ ಬೆಂಗಳೂರು ನಗರ ತಲುಪಲಿದೆ.

   English summary
   KSRTC announced Bengaluru-Panji non AC sleeper bus service from September 10, 2020. 960 fare fixed and bus will run via Chitradurga, Hubballi and Karwar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X