ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೈಹಿಕ ಕ್ಷಮತೆಗಾಗಿ ಕೆಎಸ್‌ಆರ್‌ಪಿ ಪೊಲೀಸರ ಓಟ

|
Google Oneindia Kannada News

ಬೆಂಗಳೂರು, ಜನವರಿ 25: ಶನಿವಾರ ಬೆಳಿಗ್ಗೆ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಕರ್ನಾಟಕ ಮೀಸಲು ಪೊಲೀಸ್ (ಕೆಎಸ್ಆರ್​ಪಿ) ವತಿಯಿಂದ ಆಯೋಜಿಸಿದ್ದ 'ದೈಹಿಕ ಕ್ಷಮತೆಗಾಗಿ ಓಟ'ದಲ್ಲಿ ನೂರಾರು ಪೊಲೀಸ್ ಸಿಬ್ಬಂದಿ ಪಾಲ್ಗೊಂಡು ಗಮನ ಸೆಳೆದರು.

ದೈಹಿಕ ಕ್ಷಮತೆಗಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಿಂದ ಕಬ್ಬನ್ ಪಾರ್ಕ್​ನಲ್ಲಿ 5 ಕಿ.ಮೀ. ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಮ್ಯಾರಥಾನ್ಗೆ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ.ದತ್ತಾ ಚಾಲನೆ ನೀಡಿದರು. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕೆಎಸ್ಆರ್​ಪಿ‌ ಸಿಬ್ಬಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಬ್ಬನ್ ಪಾರ್ಕ್‌ನ ಕ್ವೀನ್ಸ್ ಪ್ರತಿಮೆಯಿಂದ ಓಟಕ್ಕೆ ಚಾಲನೆ ನೀಡಲಾಗಿತ್ತು.

ಬೀದಿನಾಯಿಗಳಿಗೂ ಬಂತು ಭಾರಿ ಡಿಮ್ಯಾಂಡ್..!ಬೀದಿನಾಯಿಗಳಿಗೂ ಬಂತು ಭಾರಿ ಡಿಮ್ಯಾಂಡ್..!

ಈ ವೇಳೆ ಮಾತನಾಡಿದ ಆರ್ ಕೆ ದತ್ತಾ, ''ದೈರ್ಯ ಸಾಹಸಗಳಿಗೆ ಕರ್ನಾಟಕ ಪೊಲೀಸ್ ಇಡೀ ರಾಷ್ಟ್ರದಲ್ಲಿ ಹೆಸರು ವಾಸಿಯಾಗಿದೆ. ಇದಕ್ಕೆ ಕಾರಣ ಕರ್ನಾಟಕ ಪೊಲೀಸ್ ಉತ್ತಮ ದೈಹಿಕ ಕ್ಷಮತೆಯನ್ನು ಹೊಂದಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ ಕನಿಷ್ಠ ಎರಡು ಕಿಲೋ ಮೀಟರ್ ಓಡುವುದರ ಮೂಲಕ ಎಲ್ಲರೂ ತಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು'' ಎಂದು ಸಲಹೆ ನೀಡಿದರು.

KSRP Police Ran 5 KM Marathon In Bengaluru

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕೆಎಸ್‌ಆಆರ್‌ಪಿ) ಅಲೋಕ್ ಕುಮಾರ್, ಉಪ ಪೊಲೀಸ್ ಮಹಾ ನಿರೀಕ್ಷಕ ಎನ್ ಸತೀಶ್ ಕುಮಾರ್, ಪೊಲೀಸ್ ಮಹಾ ನಿರೀಕ್ಷಕ ಹರಿ ಶೇಖರನ್ ಪಾಲ್ಗೊಂಡು ಪೊಲೀಸ್ ಸಿಬ್ಬಂದಿಗೆ ಪ್ರೋತ್ಸಾಹ ನೀಡಿದರು.

English summary
Hundreds of policemen participated in a 'race for physical fitness' organized by the Karnataka State Reserve Police (KSRP) at Cubbon Park in Bangalore on Saturday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X